ಅನುಷ್ಕಾ ಮೊದಲ ಭೇಟಿಯ ವೇಳೆ ಬಹಳ ನರ್ವಸ್ ಆಗಿದ್ದರಂತೆ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಸ್ವತಃ ಈ ಮಾತನ್ನು ಹೇಳಿದ್ದಾರೆ. ಎಬಿ ಡಿವಿಲಿಯರ್ಸ್ ಜೊತೆ ತಮ್ಮ ಪ್ರೇಮ ಕತೆಯನ್ನು ಹಂಚಿಕೊಳ್ಳುತ್ತಿದ್ದಾಗ ಈ ವಿಷಯ ಪ್ರಸ್ತಾಪಿಸಿದ್ದಾರೆ.
2013ರಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿದ್ದರು.
ಶೂಟಿಂಗ್ ವಿಚಾರಚಾಗಿ ಇಬ್ಬರೂ ಪರಸ್ಪರ ಭೇಟಿಯಾಗಿದ್ದರು. ನಂತರ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ.
2016 ರಲ್ಲಿ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹಬ್ಬಿತ್ತು, ವಿರಾಟ್ ಕೊಹ್ಲಿ ಕೂಡಾ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಒಡೆದ ಹೃದಯದ ಇಮೋಜಿ ಹಾಕಿದ್ದರು.
ಇದಾದ ನಂತರ ಯುವರಾಜ್ ಮತ್ತು ಹೇಜಲ್ ವಿವಾಹದ ವೇಳೆ ಇಬ್ಬರೂ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಂಡಿದ್ದರು.
ವಿರಾಟ್ ಮತ್ತು ಅನುಷ್ಕಾ ಸುದೀರ್ಘ ಕಾಲದ ಡೇಟಿಂಗ್ ನಂತರ 11 ಡಿಸೆಂಬರ್ 2017 ರಲ್ಲಿ ವಿವಾಹ ಬಂಧದಲ್ಲಿ ಒಂದಾದರು.
ಇದೀಗ ಇಬ್ಬರಿಗೂ ವಮಿಕಾ ಹೆಸರಿನ ಒಬ್ಬ ಮುದ್ದು ಮಗಳಿದ್ದಾಳೆ.