ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.
ಮಲೈಕಾ-ಅರ್ಜುನ್ ಇಬ್ಬರೂ ಮದುವೆ ಆಗ್ತಾರಾ... ಎಂದು ಹಲವು ಸಂದರ್ಭಗಳಲ್ಲಿ ಕೇಳಲಾಗಿದೆ. ಆದಾಗ್ಯೂ, ಇಬ್ಬರೂ ಕೂಡ ಮದುವೆ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ನಟಿ ಮಲೈಕಾ ಅರೋರಾ ಇತ್ತೀಚೆಗೆ ತಮ್ಮ ಮದುವೆಗೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ.
ಇತ್ತೀಚೆಗೆ, ಸಂದರ್ಶನವೊಂದರಲ್ಲಿ, ನಟಿ ಮಲೈಕಾ ಅರೋರಾ ಅವರು ಈಗ ಮದುವೆಗೆ ಸಿದ್ಧವಾಗಿರುವುದಾಗಿ ಹೇಳಿದ್ದಾರೆ.
ಈಗ ನಾನು ಅರ್ಜುನ್ ಜೊತೆಗಿನ ನನ್ನ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತೇನೆ. ನಾವಿಬ್ಬರೂ ಸಹ ಇದಕ್ಕೆ ಸಿದ್ಧರಿದ್ದೇವೆ ಎಂದು ನಟಿ ತಿಳಿಸಿದ್ದಾರೆ.
ಕೆಲವರು ನಮ್ಮನ್ನು ಸ್ವಾರ್ಥಿ ಎಂದು ಪರಿಗಣಿಸುತ್ತಾರೆ, ಆದರೆ ಅದು ಪರಸ್ಪರ ಪ್ರೀತಿ. ನಾನು ಸಂಪ್ರದಾಯಗಳನ್ನು ನಂಬುತ್ತೇನೆ ಎಂದು ಮಲೈಕಾ ಅರೋರಾ ಬ್ರೈಡ್ಸ್ ಟುಡೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನನಗೆ ಪ್ರೀತಿಯಲ್ಲಿ ನಂಬಿಕೆ ಇದೆ. ನಾನು ಯಾವಾಗ ಮದುವೆಯಾಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಜೀವನದ ಬಗ್ಗೆ ಹೆಚ್ಚು ಯೋಜನೆ ಇರಬಾರದು ಎಂದು ನಾನು ನಂಬುತ್ತೇನೆ ಎಂದು ಮಲೈಕಾ ಅರೋರ ತಿಳಿಸಿದ್ದಾರೆ.
ಗಮನಾರ್ಹವಾಗಿ, ಮಲೈಕಾ ಅರೋರಾ ಅವರಿಗೆ 49 ವರ್ಷ, ಅರ್ಜುನ್ ಕಪೂರ್ ಅವರಿಗೆ 37 ವರ್ಷ. ಅರ್ಜುನ್ ಕಪೂರ್ ಮಲೈಕಾ ಅವರಿಗಿಂತ 12 ವರ್ಷ ಚಿಕ್ಕವರು.