ಈ ಚಲನಚಿತ್ರ ಭಾರತೀಯ ಗೂಢಚಾರಿ ಸೇಹ್ಮತ್ ಪಾತ್ರದ ಸುತ್ತ ಹೆಣೆದ ಒಂದು ಕಥೆಯಾಗಿದೆ ಕಥೆಯಾಗಿದೆ. ಅಲಿಯಾ ಭಟ್ ಈ ಚಿತ್ರದಲ್ಲಿ ಸೇಹ್ಮತ್ ಪಾತ್ರ ನಿಭಾಯಿಸಿದ್ದಾರೆ.
ಈ ಚಿತ್ರದಲ್ಲಿ ವಿದ್ಯಾ ಬಾಲನ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ತನ್ನ ಪತಿಯ ಹುಡುಕಾಟದಲ್ಲಿ ನಿರತ ಓರ್ವ ಗರ್ಭಿಣಿ ಮಹಿಳೆಯ ಪಾತ್ರ ವಿದ್ಯಾ ನಿರ್ವಹಿಸಿದ್ದಾಳೆ.
ಖ್ಯಾತ ಭಾರತೀಯ ಮಹಿಳಾ ಬಾಕ್ಸಿನ್ ಪಟು ಮೇರಿಕೋಮ್ ಅವರ ಜೀವನಾಧಾರಿತ ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮೇರಿಕೋಮ್ ಪಾತ್ರ ನಿರ್ವಹಿಸಿದ್ದಾರೆ.
ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರ ನಿರ್ವಹಿಸಿರುವ ಈ ಚಿತ್ರವೂ ಕೂಡ ಒಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸೂಜಿತ್ ಸರ್ಕಾರ ಅವರ ಅದ್ಭುತ ನಿರ್ದೇಶನವನ್ನು ನೀವು ಇದರಲ್ಲಿ ನೋಡಬಹುದು.
ಭಾರತದಲ್ಲಿ ಡಕಾಯಿತರ ರಾಣಿ ಎಂದೇ ಖ್ಯಾತ ಪೂಲನ್ ದೇವಿ ಅವರ ಜೀವನ ಸಂಘರ್ಷದ ಸುತ್ತ ಹೆಣೆದ ಕಥೆ ಇದಾಗಿದೆ.
ಭಾರತೀಯ ವಾಯುಸೇನೆಯ ಮಹಿಳಾ ಕಮಾಂಡರ್ ಹಾಗೂ ಹೆಲಿಕಾಪ್ಟರ್ ಪೈಲಟ್ ಗುಂಜನ್ ಸಕ್ಸೇನಾ ಅವರ ಜೀವನಾಧಾರಿತ ಈ ಚಿತ್ರದಲ್ಲಿ ಜಾನ್ಹವಿ ಕಪೂರ್ ಗುಂಜನ್ ಸಕ್ಸೇನಾ ಪಾತ್ರ ನಿರ್ವಹಿಸಿದ್ದಾರೆ.
ಮಹಿಳಾ ಪ್ರಧಾನ ಈ ಹಾಸ್ಯಭರಿತ ಚಿತ್ರದಲ್ಲಿ ಕೃತಿ ಸನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವಳ ಪಾತ್ರಕ್ಕೆ ವಿಮರ್ಶಕರ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಚಿತ್ರವನ್ನು ಪುರುಷ ಪ್ರಧಾನ ಅಥವಾ ಪಿತೃಪ್ರಭುತ್ವ ಸಮಾಜದ ಮುಖಕ್ಕೆ ಜಡಿದ ಒಂದು ಪ್ರಬಲ ಕಪಾಳಮೋಕ್ಷ ಎಂದರೆ ತಪ್ಪಾಗಲಾರದು. ತಾಪಸೀ ಪನ್ನು ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇಂಗ್ಲಿಷ್ ಮಾತನಾಡಲು ಬರದ ಶಶಿ ಹೆಸರಿನ ಪಾತ್ರದ ಸುತ್ತ ಹೆಣೆದ ಈ ಕಥೆಯಲ್ಲಿ ಶ್ರೀದೇವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ರಾಣಿ ಮುಖರ್ಜಿ ಪೋಲೀಸ್ ಅಧಿಕಾರಿಯಾಗಿ ನಟಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರ ಹಾಗೂ ವಿಮರ್ಶಕರ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.