Where Is Wink Girl Priya Prakash Varrier: 2018 ರಲ್ಲಿ 'ವಿಂಕ್ ಗರ್ಲ್' ಕಣ್ಸನ್ನೆ ಚೆಲುವೆ ಎಂದೇ ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಗೂಗಲ್‌ನಲ್ಲಿ ಸಂಚಲನ ಮೂಡಿಸಿ ರಾತ್ರೋರಾತ್ರಿ ಸೂಪರ್‌ಸ್ಟಾರ್ ಆದವರು ಪ್ರಿಯಾ ಪ್ರಕಾಶ್ ವಾರಿಯರ್. ಇದರ ಬಗ್ಗೆ ಎಲ್ಲೆಡೆ ಚರ್ಚೆ ನಡೆಯಿತು. ಕಣ್ಸನ್ನೆ ಚೆಲುವೆ ಎಂದೇ ಪ್ರಸಿದ್ಧಿಯಾಗಿದ್ದ 18 ವರ್ಷದ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್. ಎಲ್ಲರೂ ಅವಳ ನೋಟಕ್ಕೆ ಹುಚ್ಚರಾಗಿದ್ದರು. 7 ವರ್ಷಗಳ ನಂತರ ಈಗ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಎಲ್ಲಿದ್ದಾರೆ, ಏನುಮಾಡ್ತಿದ್ದಾರೆ ತಿಳಿಯೋಣ.
ಮಲಯಾಳಂ ಚಿತ್ರ 'ಒರು ಅಡಾರ್ ಲವ್' 2019 ರಲ್ಲಿ ಬಿಡುಗಡೆಯಾಯಿತು. ಆ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಒಂದು ದೃಶ್ಯವಿತ್ತು. ಈ ದೃಶ್ಯದಲ್ಲಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣು ಹೊಡೆಯುವುದು ಕಂಡುಬಂದಿದೆ. ಅವರು ವೀಡಿಯೊದಲ್ಲಿ ಶಾಲಾ ಹುಡುಗಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಸ್ನೇಹಿತನಿಗೆ ಕಣ್ಣು ಹೊಡೆಯುವ ಆ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಾತ್ರೋ ರಾತ್ರಿ ಕಣ್ಸನ್ನೆ ಮೂಲಕ ಸ್ಟಾರ್ ಆಗಿದ್ದರು.
ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ನಟಿ:
ಕೇವಲ ಒಂದು ಸೆಕೆಂಡಿನ ಕ್ಲಿಪ್‌ನಿಂದಾಗಿ 2018 ರಲ್ಲಿ ಗೂಗಲ್ ಇಂಡಿಯಾದಲ್ಲಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯಾಗಿದ್ದರು. ಅದೇ ವರ್ಷದ ಫೆಬ್ರವರಿಯಲ್ಲಿ 'ಒರು ಅಡಾರ್ ಲವ್' ಚಿತ್ರದ ಮಾಣಿಕ್ಯ ಮಲರಾಯ ಪೂವಿ ಹಾಡಿನ ಟೀಸರ್ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾಗಿತ್ತು. ನಂತರ ಅವರು ರಾತ್ರೋರಾತ್ರಿ ಸ್ಟಾರ್ ಆಗಿದ್ದರು.
ಇದನ್ನೂ ಓದಿ: ಶ್ರೀದೇವಿ ಮಗಳು ಜಾನ್ವಿ ಕಪೂರ್‌ರನ್ನೇ ಮಕಾಡೆ ಮಲಗಿಸಿ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆದ ತಮನ್ನಾ ಕಟೋಚ್ ಯಾರು ಗೊತ್ತಾ?
ಆ ಸಮಯದಲ್ಲಿ ಕೇವಲ 18-19 ವರ್ಷ ವಯಸ್ಸಿನ ಪ್ರಿಯಾ ವಾರಿಯರ್ ಖ್ಯಾತಿಯಲ್ಲಿ ಅಮೇರಿಕನ್ ಗಾಯಕ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಾಸ್ ಅವರನ್ನು ಹಿಂದಿಕ್ಕಿದ್ದರು. ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ನಾಲ್ಕನೇ ಸ್ಥಾನದಲ್ಲಿದ್ದರೆ, ಸಪ್ನಾ ಚೌಧರಿ ಮತ್ತು ಸೋನಮ್ ಕಪೂರ್ ಅವರ ಪತಿ ಆನಂದ್ ಅಹುಜಾ ಮೂರನೇ ಮತ್ತು ಐದನೇ ಸ್ಥಾನದಲ್ಲಿದ್ದರು. ಕಣ್ಣು ಮಿಟುಕಿಸಿದ ಆ ಹಾಡನ್ನು 2018 ರಲ್ಲಿ 110 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.
ಪ್ರಿಯಾ ಈಗ ಏನು ಮಾಡುತ್ತಿದ್ದಾರೆ?
ಪ್ರಿಯಾ ಪ್ರಕಾಶ್ ವಾರಿಯರ್ ಈಗ ನಾಯಕಿಯಾಗಿದ್ದಾರೆ. ತನ್ನ ಮೊದಲ ಚಿತ್ರ 'ಒರು ಅಡಾರ್ ಲವ್' ಮೂಲಕ ಬೆಳಕಿಗೆ ಬಂದ ಪ್ರಿಯಾಗೆ ಈಗ 25 ವರ್ಷ. ಅವರು ಇನ್ಸ್ಟಾಗ್ರಾಮ್‌ನಲ್ಲಿ ಬಹಳ ಜನಪ್ರಿಯರಾಗಿದ್ದಾರೆ. 7 ಮಿಲಿಯನ್‌ಗಿಂತ ಹೆಚ್ಚು ಜನರು ಅವರನ್ನು ಅನುಸರಿಸುತ್ತಿದ್ದಾರೆ. ಮಲಯಾಳಂ ಚಿತ್ರಗಳಲ್ಲದೆ, ಪ್ರಿಯಾ ಇತರ ದಕ್ಷಿಣ ಭಾರತೀಯ ಭಾಷೆಗಳ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಅವರು 2024 ರಲ್ಲಿ ಬಿಡುಗಡೆಯಾದ 'ಯಾರಿಯನ್ 2' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅವರು ರಣಬೀರ್ ಕಪೂರ್ ಅವರ ಮುಂಬರುವ ಚಿತ್ರ 'ರಾಮಾಯಣ'ಕ್ಕೂ ಸಹಿ ಹಾಕಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರ ಎರಡು ಭಾಗಗಳಲ್ಲಿ ತಯಾರಾಗಲಿದೆ. ಸದ್ಯ ಸಿನಿಮಾಗಳಲ್ಲಿ ಪ್ರಿಯಾ ವಾರಿಯರ್ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಕನ್ನಡಿಗರ ಹೃದಯ ಕದ್ದ ಪ್ರಸಿದ್ಧ ನಟಿಯ ಮಗಳು ಈ ಚೆಲುವೆ... ಶೀಘ್ರದಲ್ಲೇ ಸಿನಿರಂಗಕ್ಕೆ ಎಂಟ್ರಿ?
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









