)
Prabhas Anushka Shetty Marriage : ಟಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್ ಮದುವೆ ಸುದ್ದಿ ಈಗ ಮತ್ತೆ ಮುನ್ನೆಲೆ ಬರುತ್ತಿದೆ. ಈ ನಡುವೆ ನಟಿ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಮದುವೆಯಾಗಲು ಬಯಸಿದ್ದಾರಾ? ಆದರೆ ಅವರ ಮದುವೆಯನ್ನು ಯಾರಾದರೂ ನಿಲ್ಲಿಸಿದರೇ? ಈ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಗಾಸಿಪ್ ಒಂದು ಶುರುವಾಗಿದೆ.
ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರೂ ಮೊದಲ ಬಾರಿಗೆ 'ಬಿಲ್ಲಾ' ಚಿತ್ರದಲ್ಲಿ ಒಟ್ಟಿಗೆ ನಟಿಸಿದರು. ನಂತರ ಅವರ ನಡುವಿನ ಕೆಮಿಸ್ಟ್ರಿ ಪ್ರಾರಂಭವಾಯಿತು. ಬಾಹುಬಲಿ ಚಿತ್ರದ ನಂತರ, ಅವರು ವಿವಾಹ ವಿಚಾರ ಮುನ್ನೆಲೆಗೆ ಬಂತು.
ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆಗೆ ಎಲ್ಲವೂ ಸಿದ್ಧವಾಗಿದೆ ಎನ್ನಲಾಗುತ್ತಿತ್ತು. ಅವರಿಬ್ಬರ ಜಾತಕಗಳನ್ನು ತೋರಿಸಿದರೆ.. ಅವರ ಜಾತಕಗಳು ಹೊಂದಿಕೆಯಾಗುವುದಿಲ್ಲ ಎಂದು ಜ್ಯೋತಿಷಿಗಳು ಹೇಳಿದ್ದಾರೆ ಎಂಬ ವಂತಿ ಹಬ್ಬಿತ್ತು. ಇದರೊಂದಿಗೆ ಪ್ರಭಾಸ್ ಅವರ ದೊಡ್ಡಮ್ಮ ಮದುವೆಗೆ ಅನುಮತಿ ನೀಡಲಿಲ್ಲ ಎಂದು ಹೇಳಲಾಗುತ್ತದೆ.
ಪ್ರಭಾಸ್ ಅವರ ದೊಡ್ಡಮ್ಮ ಈ ವರ್ಷ ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಮುಂದಿನ ತಿಂಗಳು ಪ್ರಭಾಸ್ ತಮ್ಮ 46 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಆ ದಿನ ಪ್ರಭಾಸ್ ತಮ್ಮ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಮನೆಯಲ್ಲಿ ಮಾತನಾಡಿದ ಸಂಬಂಧಕ್ಕೆ ಪ್ರಭಾಸ್ ಈಗಾಗಲೇ ಪ್ರಭಾಸ್ ಒಪ್ಪಿದ್ದಾರೆ ಎನ್ನಾಗುತ್ತಿದೆ.
ಪ್ರಭಾಸ್ 'ದಿ ರಾಜಾ ಸಾಬ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದಿ ರಾಜಾ ಸಾಬ್ ಸಿನಿಮಾ ಈ ವರ್ಷ ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.