)
Chamarajanagar news: ಗಡಿಜಿಲ್ಲೆ ಚಾಮರಾಜನಗರದಲ್ಲಿ ಮಾನವ–ಕಾಡುಪ್ರಾಣಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಿಶೇಷವಾಗಿ ಕಾಡಾನೆಗಳ ಹಾವಳಿಯಿಂದ ರೈತರು, ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಪುಣಜನೂರು ಸಮೀಪ ನಿನ್ನೆ ರಾತ್ರಿ ಬಾಳೆ ಹಣ್ಣುಗಳಿಂದ ತುಂಬಿದ ಪಿಕಪ್ ವಾಹನಕ್ಕೆ ಕಾಡಾನೆ ಅಡ್ಡ ಬಂದು ದಾಳಿ ನಡೆಸಲು ಮುಂದಾದ ಘಟನೆ ಆತಂಕ ಮೂಡಿಸಿದೆ. ಬಾಳೆ ಹಣ್ಣು ಕಂಡ ಕೂಡಲೇ ಬೊಲೆರೊ ವಾಹನದ ಮೇಲೆ ಹತ್ತಲು ಯತ್ನಿಸಿದ ಆನೆ, ಕೂದಲಳೆ ಅಂತರದಲ್ಲಿ ವಾಹನ ಚಾಲಕ ಪಾರಾದರು.
ಚಾಲಕರು ಹೇಳುವಂತೆ, ಕಬ್ಬು ಆನೆಯ ಫೆವರೇಟ್ ಆದರೂ ಬಾಳೆ ಹಣ್ಣು ಕಂಡರೆ ಅದು ಆನೆಗೆ ಪಂಚಪ್ರಾಣ. ಬಾಳೆ ಪ್ರಿಯ ಆನೆಗಳು ವಾಹನದಲ್ಲಿರುವ ಹಣ್ಣುಗಳ ವಾಸನೆ ಪಡೆದು ಹಿಂಬಾಲಿಸುವ ಘಟನೆಗಳು ಹೆಚ್ಚುತ್ತಿವೆ. ನಿನ್ನೆ ರಾತ್ರಿ ಪಿಕಪ್ ವಾಹನ ಅಡ್ಡಗಟ್ಟಿ ಆನೆ ಮೇಲೇರಲು ಯತ್ನಿಸಿದ್ದನ್ನು ಸ್ಥಳೀಯರು ವೀಡಿಯೋಗೆ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಇದಕ್ಕೂ ಮುನ್ನ, ಕಳೆದೆರೆಡು ದಿನಗಳ ಹಿಂದೆ ಆಸನೂರು ಸಮೀಪ ಒಂಟಿ ಸಲಗ ಲಾರಿ ಮೇಲೆ ಹತ್ತಿ ಕಬ್ಬ ಕೀಳಲು ಯತ್ನಿಸಿ ಗಾಜು ಒಡೆದು ಹಾಕಿದ್ದ ಘಟನೆ ನಡೆದಿತ್ತು. ಇದೇ ಸರಣಿಯಲ್ಲಿ ಇದೀಗ ಪುಣಜನೂರಿನ ಬಳಿ ಬಾಳೆ ಹಣ್ಣು ತುಂಬಿದ ವಾಹನದ ಮೇಲೆ ಕಾಡಾನೆ ದಾಳಿ ನಡೆಸಲು ಮುಂದಾಗಿರುವುದು ಆತಂಕ ಹೆಚ್ಚಿಸಿದೆ.
ಸ್ಥಳೀಯರು ಅರಣ್ಯ ಇಲಾಖೆಯನ್ನು ಎಚ್ಚರಿಸುತ್ತಾ, ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.