)
Mungaru Male movie record : ಕೇವಲ 70 ಲಕ್ಷ ರೂಪಾಯಿ ಬಜೆಟ್ನಲ್ಲಿ ತಯಾರಾದ ಕನ್ನಡದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 75 ಕೋಟಿ ರೂಪಾಯಿಗಳನ್ನು ಗಳಿಸಿತು. ಅಷ್ಟೇ ಅಲ್ಲದೆ, ಒಂದೇ ಮಲ್ಟಿಪ್ಲೆಕ್ಸ್ನಲ್ಲಿ 460 ದಿನಗಳ ಕಾಲ ನಿರಂತರವಾಗಿ ಪ್ರದರ್ಶನಗೊಂಡು ರಾಷ್ಟ್ರೀಯ ದಾಖಲೆಯನ್ನು ಸೃಷ್ಟಿಸಿತು. ಇಂದಿಗೂ ಈ ಸಿನಿಮಾದ ದಾಖಲೆಯನ್ನು ಯಾವ ಸಿನಿಮಾ ಬ್ರೇಕ್ ಮಾಡಿಲ್ಲ.
ಹೌದು.. 2006 ರಲ್ಲಿ ಬಿಡುಗಡೆಯಾದ ನಟ ಗಣೇಶ್ ಮತ್ತು ನಟಿ ಪೂಜಾ ಗಾಂಧಿ ಅಭಿನಯದ "ಮುಂಗಾರು ಮಳೆ" ಸಿನಿಮಾ ಅದ್ಭುತ ಪ್ರದರ್ಶನ ಕಂಡಿತು. ಈ ಸಿನಿಮಾ ಗಣೇಶ್ ಜೀವನಕ್ಕೆ ಮಹತ್ವದ ತಿರುವು ಕೊಟ್ಟಿತು. ಅಷ್ಟೇ ಅಲ್ಲದೆ, ಕನ್ನಡ ಚಿತ್ರರಂಗಕ್ಕೆ ಒಂದು ಬದಲಾವಣೆಯನ್ನು ತಂದಿತು.
ನಿರ್ದೇಶಕ ಯೋಗರಾಜ್ ಭಟ್ ಮೊದಲು ಈ ಸಿನಿಮಾದ ಕಥೆಯನ್ನು ಸ್ಟಾರ್ ನಟರಿಗೆ ಹೇಳಿದ್ದರಂತೆ. ಆದರೆ ಅವರು ತಿರಸ್ಕರಿಸಿದ ಕಾರಣ, ಆ ಸಮಯದಲ್ಲಿ ಹೆಚ್ಚು ಜನಪ್ರಿಯರಾಗದ ಟಿವಿ ನಿರೂಪಕ ಗಣೇಶ್ ಮತ್ತು ಆಫರ್ಗಾಗಿ ಕಾಯುತ್ತಿದ್ದ ಪೂಜಾ ಗಾಂಧಿಯನ್ನು ಅವರು ಅಂತಿಮಗೊಳಿಸಿದರು.
ನಿರ್ಮಾಪಕ ಇ. ಕೃಷ್ಣಪ್ಪ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತರು. ಈ ಚಿತ್ರದ ಸುಮಾರು 80 ಪ್ರತಿಶತ ಚಿತ್ರೀಕರಣವನ್ನು ಸಕಲೇಶಪುರ, ಮಡಿಕೇರಿ ಮತ್ತು ಜೋಗ್ ಜಲಪಾತದಂತಹ ಸ್ಥಳಗಳಲ್ಲಿ ನಿಜವಾದ ಮಳೆಯಲ್ಲಿ ಚಿತ್ರೀಕರಿಸಲಾಗಿದೆ. ಇದು ಚಿತ್ರಕ್ಕೆ ತುಂಬಾ ನೈಸರ್ಗಿಕ ನೋಟವನ್ನು ನೀಡಿದ್ದರೂ, ಚಿತ್ರೀಕರಣವು ತಂಡಕ್ಕೆ ದೊಡ್ಡ ಸವಾಲಾಯಿತು.
'ಮುಂಗಾರು ಮಳೆ' ಕನ್ನಡ ಚಲನಚಿತ್ರ ಇತಿಹಾಸದಲ್ಲಿ 50 ಕೋಟಿ ರೂ.ಗಳನ್ನು ದಾಟಿದ ಮೊದಲ ಚಿತ್ರವಾಯಿತು. ಇದು ವಿಶ್ವಾದ್ಯಂತ 75 ಕೋಟಿ ರೂ.ಗಳವರೆಗೆ ಕಲೆಕ್ಷನ್ ಮಾಡಿತು. ಬಜೆಟ್ಗಿಂತ 100 ಪಟ್ಟು ಹೆಚ್ಚು ಗಳಿಸಿದ ಮತ್ತು ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಚಿತ್ರಗಳಲ್ಲಿ ಒಂದಾಯಿತು. ಅಷ್ಟೇ ಅಲ್ಲ, ಬೆಂಗಳೂರಿನ ಪಿವಿಆರ್ ಮಲ್ಟಿಪ್ಲೆಕ್ಸ್ನಲ್ಲಿ 460 ದಿನಗಳ ಕಾಲ ನಿರಂತರವಾಗಿ ಪ್ರದರ್ಶನಗೊಂಡು ದಾಖಲೆ ಬರೆಯಿತು.