Chillgum video song : ಮಲೈಕಾ ಅರೋರಾ ಯಾವಾಗಲೂ ತಮ್ಮ ವೈಯಕ್ತಿಕ ಕಾರಣಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೊಮ್ಮೆ ಟ್ರೆಂಡಿಂಗ್‌ನಲ್ಲಿದ್ದಾರೆ.. ಅದಕ್ಕೆ ಕಾರಣ ಅವರ ಹೊಸದಾಗಿ ಬಿಡುಗಡೆಯಾದ ಹಾಡು. ಯೋ ಯೋ ಹನಿ ಸಿಂಗ್ ಜೊತೆಗಿನ ಮಲೈಕಾ ಅರೋರಾ ಅವರ ಹೊಸ ಹಾಡು "ಚಿಲ್ಗಮ್" ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
ಇದೀಗ ಈ ಹಾಡಿನಿಂದಲೇ ಮಲೈಕಾ ಅರೋರಾ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ, ಬಹಳಷ್ಟು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಈ ಹಾಡಿನಲ್ಲಿ ಅವರು ಮಾಡಿದ ಕೆಲವು ನೃತ್ಯದ ಸ್ಟೆಪ್‌ಗಳು.. ಹೌದು.. ಹಾಡಿನಲ್ಲಿ ಕೆಟ್ಟ ರೀತಿಯ ಕೆಲವು ಸ್ಟೇಪ್‌ಗಳಿವೆ ಎಂದು ಆರೋಪಿಸಿ ಟ್ರೋಲ್ ಮಾಡಲಾಗುತ್ತಿದೆ..
ಇದೀಗ ಈ ಕುರಿತು ಸ್ಪಷ್ಟತೆ ನೀಡಿರುವ ಮಲೈಕಾ, ಚಿಲ್ಗಮ್ ಹಾಡಿನ "ವೈಶಿಷ್ಟ್ಯ" ಹಾಗಿದೆ. ಆ ರೀತಿಯ ಹೆಜ್ಜೆಗಳು ಈ ಹಾಡಿಗೆ ಬೇಕಾಗಿವೆ. ಅದು ಗ್ಲಾಮರ್ ಸಾಂಗ್ ಹಾಗಾಗಿ ಇಂತಹ ಸ್ಟೇಪ್ ಕಾಮನ್ ಅಂತ ತಿಳಿಸಿದ್ದಾರೆ. ಅಲ್ಲದೆ, ಹನಿ ಸಿಂಗ್ ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡುತ್ತಾ, ಈ ಹಾಡನ್ನು ಪ್ರದರ್ಶಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ಚಿಲ್ಗಮ್‌ನಲ್ಲಿ ಜೊತೆ ಕೆಲಸ ಮಾಡುವುದು ಖುಷಿ ಕೊಟ್ಟಿದೆ. ಸೆಟ್‌ನಲ್ಲಿದ್ದಾಗ ಹನಿಸಿಂಗ್ ಸಖತ್ ಆಕ್ವಿವ್ ಇರ್ತಾರೆ ಎಂದು ಮಲೈಕಾ ತಮ್ಮ ಹಾಡಿನ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ವಿಚಾರ ಒಂದು ಕಡೆ ಆದ್ರೆ, ಟ್ರೋಲಿಂಗ್ ನಡುವೆ, ಚಿಲ್ಗಮ್ ಸಾಂಗ್ ಯೂಟ್ಯೂಬ್‌ನಲ್ಲಿ ಬಿರುಗಾಳಿಯ ರೀತಿ ವೈರಲ್ ಆಗುತ್ತಿದೆ..
ಇದನ್ನೂ ಓದಿ:ಮಹಿಳೆಯರ ದೇಹದ ಇದೊಂದು ಈ ಭಾಗ ನೋಡಿಯೇ ಆಕೆ ಎಂಥವಳು ಅಂತ ಸುಲಭವಾಗಿ ಹೇಳಬಹುದು!
ಒಟ್ಟಾರೆಯಾಗಿ.. ಯೋ ಯೋ ಹನಿಸಿಂಗ್ ಹಾಡಿಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದರ ನಡುವೆ ಮಲೈಕಾ ಡಾನ್ಸ್ ವಿರೋಧಕ್ಕೆ ಕಾರಣವಾಗಿದೆ. ಮುಂದಿನ ದಿನ ಇದು ಯಾವ ರೀತಿ ಟರ್ನ್ ಪಡೆದುಕೊಳ್ಳುತ್ತೆ ಅಂತ ಕಾಯ್ದು ನೋಡಬೇಕಿದೆ..









