ಜೀ ಕನ್ನಡ ವಾಹಿನಿ ಈಗ ಹೊಸತನದೊಂದಿಗೆ ನಿಮ್ಮ ಮುಂದೆ ಬರಲಿದೆ.

ಬೆಂಗಳೂರು: ಕನ್ನಡಿಗರ ನೆಚ್ಚಿನ ಜೀ ಕನ್ನಡ ವಾಹಿನಿ ಒಂದು ತಿಂಗಳಲ್ಲಿ 12.2ಮಿಲಿಯನ್ ಮನೆಗಳ 45 ಕ್ಕೂ ಅಧಿಕ ಮಿಲಿಯನ್ ವೀಕ್ಷಕರನ್ನು ತಲುಪಿದ್ದು, ಈಗ ‘ಸದಾ ನಿಮ್ಮೊಂದಿಗೆ’ ಎಂಬ ಬ್ರಾಂಡ್ ಟ್ಯಾಗ್ ಲೈನ್ ಮೂಲಕ ಹೊಸತನದೊಂದಿಗೆ ನಿಮ್ಮ ಮುಂದೆ ಬರಲಿದೆ. ಸದಾ ನಿಮ್ಮೊಂದಿಗೆ ಅಭಿಯಾನವು ಕರುನಾಡಿನ ಸಂಸ್ಕೃತಿ ಮತ್ತು ಒಗ್ಗಟ್ಟನ್ನು ಬಿಂಬಿಸುತ್ತದೆ.
‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಬಲವಾದ ಅಂಶವನ್ನು ಇಟ್ಟುಕೊಂಡು ಮಾಡಿರುವ ಈ ಅಭಿಯಾನವು ಎಲ್ಲರೂ ಜೊತೆಯಾಗಿ ಬೆಳೆಯೋಣ, ಜೊತೆಯಾಗಿ ಸಂಭ್ರಮಿಸೋಣ ಮತ್ತು ಜೊತೆಯಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಸುಂದರವಾಗಿ ತೋರಿಸಿಕೊಡುತ್ತದೆ. ಜೊತೆಯಾಗಿರುವ ಪ್ರತಿಯೊಂದು ಕ್ಷಣವೂ ಭರವಸೆಯನ್ನು ಕೊಡುತ್ತದೆ, ಬೆಂಬಲವನ್ನು ಸೂಚಿಸುತ್ತದೆ ಮತ್ತು ನಮ್ಮ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ನಾವು ಯಾವುದೇ ತರಹದ ಸವಾಲುಗಳನ್ನು ಎದುರಿಸಬಹುದು ಎಂಬುದನ್ನು ಸಾರಿ ಹೇಳುತ್ತದೆ.
ಜೀ ಕನ್ನಡದ ಬ್ರಾಂಡ್ ಫಿಲಂ ನಲ್ಲಿ ಕನ್ನಡಿಗರ ವಿಶ್ವಾಸ, ಪ್ರೀತಿ, ಒಗ್ಗಟ್ಟು ಹಾಗು ಹಳೆಯ ಮತ್ತು ಶ್ರೇಷ್ಠವಾದ ಪರಂಪರೆಯನ್ನು ತುಂಬಾ ಸುಂದರವಾಗಿ ಕಂಡುಬಂದಿದೆ. ಮಂಡ್ಯದ ಕಣ್ಣುಕುಕ್ಕುವ ಪ್ರಕೃತಿ ಸೌಂದರ್ಯದ ನಡುವೆ ಸೆರೆಹಿಡಿಯಲಾದ ಈ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಮದುವೆಯು ಕಂಡುಬರುತ್ತದೆ. ಇಲ್ಲಿ ಕಾಣಿಸುವ ಪುರಾತನ ದೇವಸ್ಥಾನ , ರಂಗುರಂಗಾದ ರಂಗೋಲಿ, ಚಪ್ಪರ, ಅರಶಿನ ಶಾಸ್ತ್ರ ಸೇರಿ ಬಗೆ ಬಗೆಯ ಸಾಂಸ್ಕೃತಿಕ ಅಂಶಗಳು ಸುಂದರವಾದ ದೃಶ್ಯಕಾವ್ಯವೇ ಸರಿ!
ಮಗಳ ಮದುವೆಯ ಹಿಂದಿನ ದಿನ ಕರ್ತವ್ಯ ನಿಷ್ಠೆಯ ನಿಮಿತ್ತ ಮತ್ತೆ ಸೈನ್ಯಕ್ಕೆ ಹೋಗುವ ಅಪ್ಪನ ಭಾಗಣೆಗಳನ್ನು ಈ ಚಿತ್ರದಲ್ಲಿ ತುಂಬಾ ಭಾವನಾತ್ಮಕವಾಗಿ ತೋರಿಸಲಾಗಿದೆ. ತಂದೆಯ ಅನುಪಸ್ಥಿತಿಯಲ್ಲಿ ಇಡೀ ಗ್ರಾಮವೇ ತಾಯಿಯ ಬೆಂಬಲಕ್ಕೆ ಬಂದು ಮದುವೆಯ ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರು ಹೊತ್ತುಕೊಂಡು ಸಲೀಸಾಗಿ ಮಗಳ ಮದುವೆಯನ್ನು ನೆರವೇರಿಸಲು ಸಹಾಯ ಮಾಡುತ್ತಾರೆ. ಸೈನಿಕ ವಾಪಾಸಾದಾಗ ಆತನ ಹೆಂಡತಿ "ಇಷ್ಟು ದೊಡ್ಡ ಕುಟುಂಬವೇ ನಮ್ಮ ಜೊತೆ ಇದ್ದ ಮೇಲೆ, ನಮಗೇನು ಚಿಂತೆ" ಎನ್ನುತ್ತಾಳೆ. "ಕೂಡಿ ಬಾಳಿದರೆ ಸ್ವರ್ಗ ಸುಖ" ಎಂಬುದು ಈ ಅಭಿಯಾನದ ಮುಖ್ಯ ಅಂಶ!
ಜೀ಼ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು " ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ ಅಭಿಯಾನವು ನಾವು ನಮ್ಮ ವೀಕ್ಷಕರ ಜೊತೆಗೆ ಹೊಂದಿರುವ ಭಾವನೆಗಳ ಸಂಭ್ರಮಾಚರಣೆ. ಜೀ಼ ಕನ್ನಡದ ಬ್ರಾಂಡ್ ಫಿಲಂ ಕರ್ನಾಟಕದ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುತ್ತದೆ. ಇದು ಬರೀ ರಿಬ್ರ್ಯಾಂಡಿಂಗ್ ಆಗಿರದೆ ವೀಕ್ಷಕರ ಜೊತೆಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಮಾಡಲಿದೆ" ಎಂದರು.
23ನೇ ಜೀ ಸಿನಿ ಅವಾರ್ಡ್ಸ್ 2025 ರ ಪ್ರಸಾರದ ಸಂದರ್ಭದಲ್ಲಿ ಈ ಅಭಿಯಾನವನ್ನು ಅನಾವರಣಗೊಳಿಸಲಾಯಿತು. ಎಲ್ಲಾ ಏಳು ಭಾಷೆಯಲ್ಲಿ ಈ ಅಭಿಯಾನವು ಏಕಕಾಲದಲ್ಲಿ ಪ್ರದರ್ಶನಗೊಳ್ಳುವುದರೊಂದಿಗೆ ಒಂದೇ ಸಮಯದಲ್ಲಿ ಏಳು ವಿಭಿನ್ನ ಧ್ವನಿಗಳ ಮೂಲಕ ಒಂದೇ ಕಲ್ಪನೆಯನ್ನು ಅನುಭವಿಸುವ ವಿಭಿನ್ನ ಅವಕಾಶ ಪ್ರೇಕ್ಷಕರಿಗೆ ದೊರಕಿತು.
ಜೀ ಕನ್ನಡದ ‘ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’ ಅಭಿಯಾನ ಪ್ರಸಾರ ಆದ ನಂತರ, ಧಾರಾವಾಹಿಗಳು, ನಾನ್ ಫಿಕ್ಷನ್ ಷೋಗಳಲ್ಲಿ ಅಭಿಯಾನದ ಮುಖ್ಯ ದ್ಯೇಯವನ್ನು ಕಥೆ, ಸ್ಕಿಟ್ ಗಳ ಮೂಲಕ ವೀಕ್ಷಕರಿಗೆ ಇನ್ನಷ್ಟು ತಲುಪಿಸುವ ಪ್ರಯತ್ನ ಮಾಡಲಾಗುತ್ತದೆ ‘ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’ ಅಭಿಯಾನದಿಂದ ಜೀ಼ ಕನ್ನಡ ಬರೀ ಕಂಟೆಂಟ್ ಪ್ರೊವೈಡರ್ ಆಗಿರದೇ, ಒಗ್ಗಟ್ಟು, ಮೌಲ್ಯಗಳು, ಸಾಂಸ್ಕೃತಿಕ ಹಾಗು ಕನ್ನಡನಾಡಿನ ಪರಂಪರೆಯನ್ನು ಎತ್ತಿಹಿಡಿಯುವ ಕಲ್ಚರಲ್ ಪ್ರೊವೈಡರ್ ಆಗಲಿದೆ.
ಒಟ್ಟಾಗಿ ಇರುವುದು ಎಂದೆಂದಿಗೂ ವಿಶೇಷ; ಹೆಮ್ಮೆಯೊಡನೆ ಜೀ ಪ್ರಸ್ತುತ ಪಡಿಸುತ್ತಿದೆ ಸ್ನೇಹ ಪ್ರೀತಿ ಮತ್ತು ಕುಟುಂಬದ ಕಥೆಗಳು. ಪ್ರತಿದಿನ, ಪ್ರತಿಕ್ಷಣ ‘ಸದಾ ನಿಮ್ಮೊಂದಿಗೆ ನಿಮ್ಮ ಜೀ ಕನ್ನಡ’!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.