Weight Lose Journey : ಜನರು ತೂಕ ಇಳಿಸುವ ಅನುಭವಗಳ ಬಗ್ಗೆ ಹೇಳುತ್ತಿದ್ದರೆ ಖಂಡಿತವಾಗಿಯೂ ಬೊಜ್ಜು ಹೊಂದಿರುವ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಪ್ರೇರಣೆ ನೀಡುತ್ತದೆ. ಆ ಅರ್ಥದಲ್ಲಿ, 26 ವರ್ಷದ ಸುಭಾಷಿಶ್ ಅವರ ತೂಕ ಇಳಿಸುವ ಅನುಭವವು ಖಂಡಿತವಾಗಿಯೂ ಅನೇಕರಿಗೆ ಸ್ಫೂರ್ತಿ ನೀಡುತ್ತದೆ. 104 ಕೆಜಿಯಿಂದ 71 ಕೆಜಿ ವರೆಗೆ ಸುಭಾಷಿಶ್ ಅವರು ತೂಕ ಇಳಿಸಿಕೊಂಡ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಸಂಪೂರ್ಣ ವೆಯಿಟ್ ಲಾಸ್ ಜರ್ನಿಯ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇದರ ಜೊತೆ ಅವರು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕೂಡಾ ಎಷ್ಟು ಮುಖ್ಯ ಎನ್ನುವುದನ್ನು ಹೇಳಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಸುಭಾಷಿಶ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ತಮ್ಮ ವೆಯಿಟ್ ಲಾಸ್ ಜರ್ನಿಯಲ್ಲಿ ತಾನು ಹೆಚ್ಚು ತಿನ್ನುತ್ತಿದ್ದ ದಿನಗಳು ಮತ್ತು ಜಿಮ್‌ಗೆ ಹೋಗದ ದಿನಗಳು ಕೂಡಾ ಸೇರಿವೆ ಎಂದು ಹೇಳಿದ್ದಾರೆ. ತೂಕ ಇಳಿಸುವಿಕೆ ಎನ್ನುವುದು ಮೈಂಡ್ ಗೇಮ್. ಆದ್ದರಿಂದ ತೂಕ ಇಳಿಸುವ ಪ್ರಕ್ರಿಯೆಯನ್ನು ಮಿತವಾಗಿ ಪ್ರಾರಂಭಿಸಿ ಎನ್ನುವ ಕಿವಿಮಾತನ್ನು ಕೂಡಾ ಹೇಳಿದ್ದಾರೆ.
ಇದನ್ನೂ ಓದಿ : ಮೊಸರನ್ನು ಹೀಗೆ ಸೇವಿಸಿದರೆ ಮಾತ್ರ ಅಮೃತ ! ಇಲ್ಲವಾದರೆ ನಯಾಪೈಸೆ ಪ್ರಯೋಜನ ದೇಹಕ್ಕೆ ಸಿಗುವುದಿಲ್ಲ !
ತೂಕ ಇಳಿಸಿಕೊಳ್ಳಲು ಮಾಡಿರುವುದು ಹೀಗೆ :
ಸುಭಾಷಿಶ್ ದಿನಕ್ಕೆ ಕೇವಲ 1,600-1800 ಕ್ಯಾಲೊರಿಗಳನ್ನು ಮಾತ್ರ ಸೇವಿಸುತ್ತಾರೆ. ಸಿಹಿ ಪಾನೀಯಗಳತ್ತ ಮುಖ ಕೂಡಾ ಮಾಡುವುದಿಲ್ಲ. ಸಮತೋಲಿತ ಆಹಾರ ಸೇವಿಸುವ ಮೂಲಕ ತೂಕ ಇಳಿಕೆಗೆ ಸಹಾಯವಾಗಿದೆ ಎನ್ನುತ್ತಾರೆ ಸುಭಾಷಿಶ್. ಅವರು ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಿದ್ದು, ಹಣ್ಣುಗಳು, ತರಕಾರಿಗಳು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಆಹಾರಕ್ಕೆ ಆದ್ಯತೆ ನೀಡಿದ್ದಾರೆ.
ವಾರಕ್ಕೆ 4-5 ಬಾರಿ ನಿರಂತರವಾಗಿ ವ್ಯಾಯಾಮ ಮಾಡುತ್ತಿದ್ದು, ಸ್ನಾಯುಗಳನ್ನು ಬಲಪಡಿಸುವತ್ತ ಗಮನಹರಿಸಿದ್ದಾರೆ. ಪ್ರತಿದಿನ 12,000 ಹೆಜ್ಜೆಗಳು ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಪರಿಣಾಮವಾಗಿ, ಅವರ ಕೊಬ್ಬು ಕಡಿಮೆಯಾಗಿದೆ ಮತ್ತು ಅವರ ಒಟ್ಟಾರೆ ಆರೋಗ್ಯ ಸುಧಾರಿಸಿದೆ. ತೂಕ ಇಳಿಕೆ ರಾತ್ರೋರಾತ್ರಿ ಆಗುವುದಿಲ್ಲ ಆತ್ಮವಿಶ್ವಾಸದಿಂದ ಮತ್ತು ಸ್ಥಿರವಾಗಿ ನಿಮ್ಮ ಅಪೇಕ್ಷಿತ ಗುರಿಯತ್ತ ಕೆಲಸ ಮಾಡಿದರೆ ಮಾತ್ರ ಆರೋಗ್ಯಕರ ಫಲಿತಾಂಶಗಳನ್ನು ಸಾಧಿಸುವಿರಿ ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಮದ್ಯದ ಅಮಲಿನಲ್ಲಿ ದೈಹಿಕ ಸಂಪರ್ಕ ಬೆಳೆಸುವುದು ಒಳ್ಳೆಯದೇ? ಈ ವಿಚಾರ ತಿಳಿದುಕೊಂಡಿರಲೇಬೇಕು..
ತೂಕ ಇಳಿಕೆಗೆ ಸಹಾಯ ಮಾಡಿರುವ ಆಹಾರಕ್ರಮ :
6 ತಿಂಗಳಲ್ಲಿ 34 ಕೆಜಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದ ಆಹಾರ ಪದ್ಧತಿಗಳನ್ನು ಕೂಡಾ ಅವರು ಹಂಚಿಕೊಂಡಿದ್ದಾರೆ. ಬೆಳಿಗ್ಗೆ, ಪ್ರೋಟೀನ್ ಶೇಕ್, ಇಡ್ಲಿ ಅಥವಾ ಪನೀರ್ ದೋಸೆ. ಮಧ್ಯಾಹ್ನದ ಊಟಕ್ಕೆ, ಗ್ರಿಲ್ಡ್ ಚಿಕನ್, ಅನ್ನ, ಸಲಾಡ್ ಅಥವಾ ಚಪಾತಿ ಮತ್ತು ಪನೀರ್.
ಸಾಂದರ್ಭಿಕವಾಗಿ ಹಸಿವಾದಾಗ ಸ್ನಾಕ್ ರೂಪದಲ್ಲಿ ಹುರಿದ ಮಖಾನ, ಮೊಟ್ಟೆಯ ಬಿಳಿಭಾಗ ಮತ್ತು ಕಾಯಿ ಹಾಲನ್ನು ಸೇವಿಸುತ್ತಿದ್ದರು. ರಾತ್ರಿ ಊಟಕ್ಕೆ ಅವರು ಚಿಕನ್ ಸಲಾಡ್, ಬ್ರೆಡ್ ಮತ್ತು ಕಡಲೆಕಾಯಿ ಮಸಾಲ ತಿನ್ನುತ್ತಾರೆ. ಮಲಗುವ ಮುನ್ನ ಅರಿಶಿನ ಪುಡಿಯೊಂದಿಗೆ ಹಾಲು ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ ಎನ್ನುವುದು ಅವರ ಅನುಭವ.
ಚಯಾಪಚಯ ಬದಲಾವಣೆಯನ್ನು ವೇಗಗೊಳಿಸಲು :
ಎಣ್ಣೆಯಲ್ಲಿ ಹುರಿದ, ಕರಿದ ಆಹಾರದಿಂದ ದೂರ ಇರುವುದು. ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳುವುದು. ತಿಂದ ನಂತರ 10-15 ನಿಮಿಷಗಳ ಕಾಲ ನಡೆಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ : ಜೀರಿಗೆಯನ್ನು ಕುಟ್ಟಿ ಇದರಲ್ಲಿ ಬೆರೆಸಿ ಕುಡಿದರೆ 30 ದಿನದ ವರೆಗೆ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್!
(ಸೂಚನೆ : ಇವೆಲ್ಲವೂ ಸುಭಾಷಿಶ್ ಅವರ ವೈಯಕ್ತಿಕ ಅನುಭವಗಳು. ಇದನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆ ಪಡೆಯುವುದು ಸೂಕ್ತ. ಇದನ್ನು ಜೀ ಕನ್ನಡ ನ್ಯೂಸ್ ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ









