Covishield Side Effects:ಕೊವಿಶೀಲ್ದ್ ಲಸಿಕೆಯ ನಾಲ್ಕು ಹೊಸ ಅಡ್ಡ ಪರಿಣಾಮಗಳು..! ಈ ಲಕ್ಷಣಗಳು ಕಂಡು ಬಂದರೆ ಕಡೆಗಣಿಸಬೇಡಿ
ಕೋವಿಶೀಲ್ಡ್ ಲಸಿಕೆಯ ಬಳಕೆಯ ನಂತರ ಜ್ವರ ಮತ್ತು ಜ್ವರ ತರಹದ ರೋಗಲಕ್ಷಣಗಲು ಕಂಡು ಬಂದಿವೆ. ಕೋವಿಶೀಲ್ಡ್ ಲಸಿಕೆ ಪಡೆದ ಪ್ರತಿ ವ್ಯಕ್ತಿಯ ಮೇಲೆ ವಿಭಿನ್ನ ಪರಿಣಾಮ ಬೀರಿರುವ ಪ್ರಕರಣ ಕೂಡಾ ಬೆಳೆಕಿಗೆ ಬಂದಿವೆ.
ನವದೆಹಲಿ : ಕೋವಿಡ್ -19 ಲಸಿಕೆ (Corona vaccine) ಬಂದಾಗಿನಿಂದಲೂ ಅದರ ಅಡ್ಡಪರಿಣಾಮಗಳ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಇವುಗಳಲ್ಲಿ, Oxford-Astrazeneca ಲಸಿಕೆಯ ಅಡ್ಡಪರಿಣಾಮಗಳು (Side effects of vaccine) ಆರೋಗ್ಯ ತಜ್ಞರ ಚಿಂತೆಯನ್ನು ಕೂಡಾ ಹೆಚ್ಚಿಸಿದೆ. ಆರಂಭದಲ್ಲಿ, ಲಸಿಕೆಯಿಂದ ನರಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳು, ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳು ವರದಿಯಾಗುತ್ತಿವೆ. ಆದರೂ ಲಸಿಕೆಯನ್ನು ಬಳಕೆಗೆ ಅನುಮೋದಿಸಲಾಗಿದೆ ಮತ್ತು ಇದು ಸುರಕ್ಷಿತವೆಂದು ಹೇಳಲಾಗಿದೆ.
ಪ್ರತಿ ವ್ಯಕ್ತಿಯ ಮೇಲೆ ವಿಭಿನ್ನ ಪರಿಣಾಮ :
ಕೋವಿಶೀಲ್ಡ್ (Covishield) ಲಸಿಕೆಯ ಬಳಕೆಯ ನಂತರ ಜ್ವರ ಮತ್ತು ಜ್ವರ ತರಹದ ರೋಗಲಕ್ಷಣಗಲು ಕಂಡು ಬಂದಿವೆ. ಕೋವಿಶೀಲ್ಡ್ ಲಸಿಕೆ ಪಡೆದ ಪ್ರತಿ ವ್ಯಕ್ತಿಯ ಮೇಲೆ ವಿಭಿನ್ನ ಪರಿಣಾಮ ಬೀರಿರುವ ಪ್ರಕರಣ ಕೂಡಾ ಬೆಳೆಕಿಗೆ ಬಂದಿವೆ.
ಇದನ್ನೂ ಓದಿ : Benefits Of Jaggery: ಈ ನಾಲ್ಕು ಕಾರಣಗಳಿಗಾಗಿ ನಿತ್ಯ ಬೆಲ್ಲವನ್ನು ಸೇವಿಸಬೇಕು, ಸಿಗಲಿವೆ ಈ ಲಾಭಗಳು
ವರದಿಯ ಪ್ರಕಾರ, ಇತ್ತೀಚೆಗೆ ಕೋವಿಶೀಲ್ಡ್ ಲಸಿಕೆಯ 4 ಅಡ್ಡಪರಿಣಾಮಗಳು ಕಂಡುಬಂದಿದ್ದು, ಜನರು ಗಮನ ಹರಿಸಬೇಕಾಗಿದೆ ಎನ್ನಲಾಗಿದೆ.
ಕಾಲು ಮತ್ತು ಕೈಗಳಲ್ಲಿ ನೋವು :
ಕೋವಿಶೀಲ್ಡ್ ಲಸಿಕೆ (Covishield Vaccine) ತೆಗೆದುಕೊಂಡ ನಂತರ ಕಾಲು ಮತ್ತು ಕೈಯಲ್ಲಿ ನೋವು ಕಾಣಿಸಿಕೊಳ್ಳಬಹುದು. . ಈ ನೋವು ಕಡಿಮೆಯಾಗಿದ್ದರೆ, ಇದು ಸಾಮಾನ್ಯ ಅಡ್ಡಪರಿಣಾಮವಾಗಿರಬಹುದು. ಆದರೆ ನೋವು ತೀವ್ರವಾಗಿದ್ದರೆ, ವೈದ್ಯರನ್ನು ಸಂಪರ್ಕಿಸಿ. ಅನೇಕ ಜನರಿಗೆ ಕಾಲುಗಳು ಮತ್ತು ಕೀಲುಗಳೆರಡರಲ್ಲೂ ನೋವು ಕಂಡು ಬರುತ್ತದೆ. ಮತ್ತು ಸುಸ್ತಾಗುತ್ತಾರೆ. ಇನ್ನು ಕೆಲವರಿಗೆ ಕೇವಲ ಒಂದು ಕಾಲಿನಲ್ಲಿ ಮಾತ್ರ ನೋವು ಕಾಣಿಸಿಕೊಳ್ಳುತ್ತದೆ. ಒಂದೇ ಕಾಲಿನಲ್ಲಿ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ವೈರಲ್ ಇನ್ಫ್ಲುಯೆನ್ಸದಂತಹ ಲಕ್ಷಣಗಳು :
ಲಸಿಕೆ (Vaccine) ಪಡೆದ ನಂತರ ಜ್ವರ ತರಹದ ರೋಗಲಕ್ಷಣಗಳನ್ನು ಅನುಭವಿಸಬಹುದು. ಯುರೋಪಿಯನ್ ವೈದ್ಯಕೀಯ ಅಧಿಕಾರಿಗಳ ಪ್ರಕಾರ, ವೈರಲ್ ಇನ್ಫ್ಲುಯೆನ್ಸಾದಂತೆ ಶೀತ, ಜ್ವರ (Fever) ಮತ್ತು ದೇಹದ ನೋವಿನಂತಹ ರೋಗಲಕ್ಷಣಗಳನ್ನು ಅನುಭವಿಸಬಹುದು. ಇದು ಎಲ್ಲರಲ್ಲೂ ಕಂಡು ಬರುವುದಿಲ್ಲ. , ಆದರೆ ಇದು ಲಸಿಕೆಯ ಅಡ್ಡ ಪರಿಣಾಮವಾಗಿರುವುದರಿಂದ (Side effects of vaccine), ಈ ಬಗ್ಗೆ ಗಮನ ಹರಿಸುವುದು ಅಗತ್ಯ. ಜ್ವರ, ಸ್ನಾಯು ನೋವು, ಸ್ರವಿಸುವ ಮೂಗು ಮತ್ತು ಯಾವುದೇ ರೀತಿಯಲ್ಲಿ ಉಸಿರಾಟದ ತೊಂದರೆ ಅನುಭವಿಸಿದರೆ, ಅದು ಲಸಿಕೆಯ ಅಡ್ಡ ಪರಿಣಾಮವಾಗಬಹುದು. ಹಿಂದಿನ ಅಧ್ಯಯನಗಳು ಸಹ ಸ್ರವಿಸುವ ಮೂಗು ಅಪರೂಪದ ಅಡ್ಡ ಪರಿಣಾಮವಾಗಿದೆ ಎನ್ನುವುದನ್ನು ಬಹಿರಂಗಪಡಿಸಿದೆ. ಮೊದಲು ಕೋವಿಡ್ ಸೋಂಕಿಗೆ ಒಳಗಾಗಿದ್ದರೂ, ಲಸಿಕೆ ತೆಗೆದುಕೊಂಡ ನಂತರ ಈ ಲಕ್ಷಣ ಕಂಡುಬರುತ್ತದೆ.
ಇದನ್ನೂ ಓದಿ : Vitamin D Rich Foods: ಮೂಳೆಗಳನ್ನು ದುರ್ಬಲಗೊಳಿಸುತ್ತೆ ವಿಟಮಿನ್ ಡಿ ಕೊರತೆ, ಈ ಆಹಾರಗಳನ್ನು ಸೇವಿಸಿ ಪ್ರಯೋಜನ ಪಡೆಯಿರಿ
ಜೀರ್ಣಕಾರಿ ಸಮಸ್ಯೆಗಳು :
ವಾಕರಿಕೆ, ಕಿಬ್ಬೊಟ್ಟೆಯ ಸೆಳೆತಗಳು ಕೋವಿಶೀಲ್ಡ್ ಲಸಿಕೆಯ ನಂತರ ಕಾಣಿಸಿಕೊಳ್ಳಬಹುದಾದ ಲಕ್ಷಣಗಳು. ಈ ಲಕ್ಷಣಗಳು ಮೊದಲು ಬೇರೆ ಲಸಿಕೆ ಹಾಕಿಸಿಕೊಂಡವರಲ್ಲಿ ಕಂಡುಬಂದಿತ್ತು. ಆದರೆ ಕೋವಿಶೀಲ್ಡ್-ಅಸ್ಟ್ರಾಜೆನೆಕಾ ಲಸಿಕೆ ಪಡೆದ ನಂತರವೂ ಈ ರೋಗಲಕ್ಷಣಗಳು ಕಂಡು ಬರುತ್ತಿವೆ. ಲಸಿಕೆ ಪಡೆದ ನಂತರ ನೀವು ವಾಂತಿಯಾಗಬಹುದು (Vomiting). ಮೊದಲ ಡೋಸ್ ಸಮಯದಲ್ಲಿ ಈ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ.
ಹಸಿವಿನ ನಷ್ಟ :
ಕೋವಿಶೀಲ್ಡ್ ಲಸಿಕೆ ಹಾಕಿದ ನಂತರ ಹಸಿವಾಗದೆ ಇರುವುದು. ಸರಿಯಾಗಿ ತಿನ್ನಲು ಸಾಧ್ಯವಾಗದಿರುವುದು ಕೂಡ ಬೆಳಕಿಗೆ ಬಂದಿದೇ. ಕೋವಿಡ್ -19 ರಂತೆ, ಫ್ಲೂ ತರಹದ ಅನಾರೋಗ್ಯದಲ್ಲೂ ಹಸಿವಿನ ಕೊರತೆಯ ಲಕ್ಷಣಗಳು ಕಂಡುಬರುತ್ತವೆ.
ತಜ್ಞರ ಪ್ರಕಾರ, ಲಸಿಕೆ ಹಾಕಿಸಿಕೊಂಡ ನಂತರ ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಲಸಿಕೆಯ ಅಡ್ಡ ಪರಿಣಾಮವನ್ನು ಕಡಿಮೆ ಮಾಡಬಹುದು. ಆದರೂ, ಈ ಅಡ್ಡಪರಿಣಾಮಗಳು ಎಲ್ಲರಲ್ಲಿಯೂ ಕಂಡು ಬರುವುದಿಲ್ಲ. ವ್ಯಾಕ್ಸಿನೇಷನ್ (Vaccination) ಮಾಡಿಸಿಕೊಂಡ ಒಂದು ಅಥವಾ ಎರಡು ದಿನಗಳ ನಂತರ ಈ ರೋಗಲಕ್ಷಣಗಳನ್ನು ನೋಡಬಹುದು. ಈ ಸಮಸ್ಯೆಗಳು ತೀವ್ರವಾಗಿಲ್ಲದಿದ್ದರೆ, ಹಾಗೆಯೇ ಸರ್ ಹೋಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.