)
ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣವನ್ನು ತೆಗೆದುಕೊಳ್ಳುವುದರಿಂದ ಅದರ ಸಂಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮೊಸರು ತಿನ್ನುವ ಸಮಯ ಮತ್ತು ವಿಧಾನದ ಬಗ್ಗೆ ಆಯುರ್ವೇದದಲ್ಲಿ ಕೆಲವು ನಿಯಮಗಳಿವೆ. ಆ ನಿಯಮಗಳನ್ನು ನೋಡೋಣ.
ಆಯುರ್ವೇದದ ಪ್ರಕಾರ ಮೊಸರು ತಣ್ಣಗಾಗಿಸಿ, ಮಧ್ಯಾಹ್ನ ಹೊತ್ತಲ್ಲಿ ತಿನ್ನುವುದು ಉತ್ತಮ. ಈ ಸಮಯದಲ್ಲಿ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ. ದೇಹವು ಮೊಸರಿನಲ್ಲಿರುವ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.
ಮೊಸರು ಪ್ರೋಬಯಾಟಿಕ್ಗಳ ಅದ್ಭುತ ಮೂಲವಾಗಿದೆ. ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹುರಿದ ಜೀರಿಗೆ ಬೆರೆಸಿ ಮೊಸರು ತಿನ್ನುವುದು ಜೀರ್ಣಕಾರಿ ವ್ಯವಸ್ಥೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಲಬದ್ಧತೆ ಅಥವಾ ಅಜೀರ್ಣ ಮುಂತಾದ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.
ಮೊಸರು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಅಲ್ಲದೆ, ನೀವು ದಣಿದಿದ್ದರೆ ಮತ್ತು ದುರ್ಬಲರಾಗಿದ್ದರೆ ನಿಯಮಿತವಾಗಿ ಮೊಸರು ತಿನ್ನುವುದು ಉತ್ತಮ. ಆಯುರ್ವೇದದ ಪ್ರಕಾರ ರಾತ್ರಿ ಸಮಯದಲ್ಲಿ ಮೊಸರು ತಿನ್ನಬಾರದು. ರಾತ್ರಿ ವೇಳೆ ಮೊಸರು ತಿಂದರೆ, ಶೀತ, ಕೆಮ್ಮು, ಸೈನಸ್ ಮತ್ತು ಕಫದ ಸಮಸ್ಯೆ ಹೆಚ್ಚಾಗಬಹುದು. ಇದು ತಂಪಾಗಿಸುವ ಗುಣಲಕ್ಷಣಗಳನ್ನು ಹೊಂದಿದೆ ಎಂಬುದು ಇದಕ್ಕೆ ಕಾರಣ. ರಾತ್ರಿಯಿಡೀ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಶೀತ ದಿನಗಳಲ್ಲಿ, ವಿಶೇಷವಾಗಿ ಬೆಳಿಗ್ಗೆ ಅಥವಾ ರಾತ್ರಿ ಮೊಸರು ತಿನ್ನದಿರಿ. ಮೊಸರಿನಲ್ಲಿ ಜೀರಿಗೆ ಪುಡಿಯನ್ನು ಸೇರಿಸುವುದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಅಲ್ಲದೆ, ಮೊಸರಿನಲ್ಲಿ ಸಕ್ಕರೆ ಅಥವಾ ಉಪ್ಪನ್ನು ಸೇರಿಸುವುದರಿಂದ ಅದರ ರುಚಿಯನ್ನು ಹೆಚ್ಚಿಸುವುದಲ್ಲದೆ ಅದರ ಪ್ರಯೋಜನಗಳನ್ನು ದ್ವಿಗುಣಗೊಳಿಸುತ್ತದೆ.
ಸೂಚನೆ: ಮೇಲಿನ ಎಲ್ಲಾ ಮಾಹಿತಿಯನ್ನು ಕೆಲವು ವರದಿಗಳಿಂದ ಬರೆಯಲಾಗಿದೆ. ಇದನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ