Weight Lose Journey : ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ತೂಕ ಇಳಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕುವಾಗ ನೆಚ್ಚಿನ ಆಹಾರವನ್ನು ಹೆಚ್ಚು ತಿನ್ನಲು ಸಾಧ್ಯವಾಗುವುದಿಲ್ಲ. ವ್ಯಾಯಾಮವನ್ನು ತಪ್ಪದೇ ಮಾಡಬೇಕಾಗುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅತ್ಯಗತ್ಯ. ಆದರೆ ಕೆಲವೊಮ್ಮೆ ನೆಚ್ಚಿನ ಆಹಾರ ಸೇವಿಸಿಯೂ, ತೂಕವನ್ನು ಕಳೆದುಕೊಳ್ಳಬಹುದು.
ನಟ ಜಾಕಿ ಭಗ್ನಾನಿ ವೇಟ್ ಲಾಸ್ ಜರ್ನಿ :
ಆ ನಿಟ್ಟಿನಲ್ಲಿ, ಪ್ರಸಿದ್ಧ ನಟಿ ರಕುಲ್ ಪ್ರೀತ್ ಸಿಂಗ್ ಪತಿ ನಟ ಜಾಕಿ ಭಗ್ನಾನಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರ ತೂಕ ಇಳಿಕೆಯ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನವನ್ನು ರಕುಲ್ ಮತ್ತು ಜಾಕಿ ಇಬ್ಬರೂ ನೀಡಿದ್ದಾರೆ.
ಇದನ್ನೂ ಓದಿ : ಈ ಕಾಯಿಲೆ ಇದ್ದವರಿಗೆ ಬ್ರೆಡ್ ಯಾವತ್ತಿಗೂ ಒಳ್ಳೆಯದಲ್ಲ...! ಆಸೆ ಅಂತ ತಿಂದರೆ ವಿಷವಾಗಿ ಪರಿಣಮಿಸಿ ಹಾಸಿಗೆ ಹಿಡಿಯಬೇಕಾದೀತು
150 ಕೆಜಿ ತೂಕವಿದ್ದ ಜಾಕಿ, ತನ್ನ ತೂಕವನ್ನು ಕಳೆದುಕೊಳ್ಳುವ ಮತ್ತು ನಿಯಂತ್ರಿಸಿಕೊಳ್ಳುವ ನಿಟ್ಟಿನಲ್ಲಿ ವೇಟ್ ಲಾಸ್ ಜರ್ನಿ ಆರಂಭಿಸಿದರು. ಹೀಗೆ ತನ್ನ ಪ್ರಯತ್ನ ಮುಂದುವರಿಸಿದ ಅವರು ನೋಡ ನೋಡುತ್ತಲೇ 75 ಕೆ.ಜಿ ತೂಕವನ್ನು ಕಳೆದುಕೊಂಡಿದ್ದಾರೆ.
75 ಕೆಜಿ ತೂಕ ಇಳಿಸಿಕೊಂಡ ಜಾಕಿ ತೂಕ ಇಳಿಸಿಕೊಳ್ಳಲು ಮಾಡಿದ್ದೇನು ? :
ತೂಕ ಇಳಿಸಿಕೊಳ್ಳುವ ಬಗ್ಗೆ ಮಾತನಾಡಿದ ಜಾಕಿ, ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡಲು ತನ್ನ ಆಹಾರದಲ್ಲಿ ಹೆಚ್ಚಿನ ಪ್ರಮಾನದಲ್ಲಿ ಪ್ರೋಟೀನ್ ಸೇವಿಸುವುದಾಗಿ ಹೇಳಿದ್ದಾರೆ. ಅವರ ದೈನಂದಿನ ಆಹಾರದಲ್ಲಿ ಪ್ರೋಟೀನ್ ಸ್ಮೂಥಿಗಳು, ಮೊಟ್ಟೆಯ ಬಿಳಿಭಾಗ, ಚಿಕನ್, ಬ್ರೌನ್ ರೈಸ್, ಸಲಾಡ್‌ಗಳಿಗೆ ಜಾಗ ಇದೆ. ತಮ್ಮ ಉಪ್ಪಿನ ಸೇವನೆಯ ಮೇಲೆ ಸಂಪೂರ್ಣ ನಿಯಂತ್ರಣ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ : ನಿಮ್ಮ ಕಿಡ್ನಿ ಸ್ಟೋನ್ ನಿವಾರಣೆಗೆ ಈ ಒಂದು ಜ್ಯೂಸ್ ಕುಡಿಯಿರಿ..!
ಲೈಟ್ ಮತ್ತು ಆರೋಗ್ಯಕರ ಆಹಾರಕ್ಕೆ ಆದ್ಯತೆ :
ಇವರು ಯಾವಾಗಲೂ ಲೈಟ್ ಮತ್ತು ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡುತ್ತಾರೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಮಿತವಾಗಿ ಆಹಾರವನ್ನು ಸೇವಿಸುತ್ತಾರೆ.ಸಾಮಾನ್ಯವಾಗಿ ಭಾನುವಾರದಂದು ತನ್ನ ನೆಚ್ಚಿನ ಆಹಾರವನ್ನು ಸೇವಿಸುತ್ತಾರೆ . ಅವರು ಬಾಕ್ಸಿಂಗ್ ಮತ್ತು ವೇಟ್‌ಲಿಫ್ಟಿಂಗ್‌ನಂತಹ ವ್ಯಾಯಾಮದಲ್ಲೂ ತೊಡಗಿಸಿಕೊಂಡಿದ್ದಾರೆ.
(ಸೂಚನೆ :ಇವೆಲ್ಲವೂ ಜಾಕಿ ಭಗ್ನಾನಿಯವರ ವೈಯಕ್ತಿಕ ಅನುಭವಗಳು. ಇದನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಇದನ್ನು ಜೀ ಕನ್ನಡ ನ್ಯೂಸ್ ದೃಢಪಡಿಸಿಲ್ಲ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









