Bhagyashree chair exercise : ಮೈನೆ ಪ್ಯಾರ್ ಕಿಯಾ ಚಿತ್ರದ ಮೂಲಕ ಖ್ಯಾತಿ ಪಡೆದ ನಟಿ ಭಾಗ್ಯಶ್ರೀ ಅವರಿಗೆ 56 ವರ್ಷ ವಯಸ್ಸಾಗಿದೆ. ಆದರೂ ಇಂದಿಗೂ 16ರ ಯುವತಿಯರನ್ನು ಮೀರಿಸುವ ಮೈಮಾಟ ಅವರದ್ದು. ಫಿಟ್ನೆಸ್ ವಿಷಯದಲ್ಲಿ ಹದಿ ಹರೆಯದವರನ್ನು ಕೂಡಾ ಮೀರಿಸುತ್ತಾರೆ. ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸದಾ ಕನೆಕ್ಟ್ ಆಗಿರುತ್ತಾರೆ. ಇಲ್ಲಿ ತಮ್ಮ ತ್ವಚೆಯ ಆರೈಕೆಯ ರಹಸ್ಯಗಳನ್ನು ಈ ಹಿಂದೆ ಹಲವು ಬಾರಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ, ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ಸುಲಭ ಮತ್ತು ಪರಿಣಾಮಕಾರಿ ಮಾರ್ಗವನ್ನು ಹೇಳಿದ್ದಾರೆ.
ಕುರ್ಚಿಯ ಮೇಲೆ ಕುಳಿತೇ ಹೊಟ್ಟೆಯ ಕೊಬ್ಬು ಕರಗಿಸಬಹುದು :
ಕುರ್ಚಿ ಮೇಲೆ ಕುಳಿತು ಮಾಡುವ ವ್ಯಾಯಾಮ ಎಲ್ಲರಿಗೂ ಸರಿ ಹೊಂದುತ್ತದೆ. ಇದು ಸ್ಲೀಪಿ ಮಸಲ್ಸ್ ಗೆ ಸರ್ಕ್ಯೂಟ್‌ಗಳಾಗಿ ಕೆಲಸ ಮಾಡುತ್ತದೆ. ಇನ್ನು ಭಾಗ್ಯಶ್ರೀ ಹೇಳುವ ಪ್ರಕಾರ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಕುರ್ಚಿಯಿಂದ ಇಳಿಯುವ ಅಗತ್ಯವಿಲ್ಲ. 3 ಕುರ್ಚಿ ವ್ಯಾಯಾಮವನ್ನು ಮಾಡುವ ಮೂಲಕ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.
ಇದನ್ನೂ ಓದಿ : ಮಧುಮೇಹ ತಡೆಗೆ ಈ ಪಾನೀಯಗಳು ಪ್ರಯೋಜನಕಾರಿ! ಬೇಸಿಗೆಯಲ್ಲಿ ಸೇವಿಸಿದರೆ ಖಂಡಿತಾ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !
1.ಕುಳಿತು ಚಪ್ಪಾಳೆ ತಟ್ಟುವುದು (Seated claps):
ಈ ವ್ಯಾಯಾಮ ಮಾಡಲು ಗಟ್ಟಿಮುಟ್ಟಾದ ಕುರ್ಚಿಯ ಮೇಲೆ ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಪಾದಗಳನ್ನು ನೆಲದ ಮೇಲೆ ದೃಢವಾಗಿ ಇರಿಸಿ. ನಿಮ್ಮ ತೋಳುಗಳನ್ನು ನಿಮ್ಮ ಮುಂದೆ ನೇರವಾಗಿ ಚಾಚಿ ಚಪ್ಪಾಳೆ ತಟ್ಟಿ. ನಂತರ ದೊಡ್ಡ ಅಪ್ಪುಗೆಯನ್ನು ಪಡೆಯಲು ಕಾಯುತ್ತಿರುವಂತೆ ನಿಮ್ಮ ತೋಳುಗಳನ್ನು ಅಗಲವಾಗಿ ತೆರೆಯಿರಿ. ಈ ಚಟುವಟಿಕೆಯು ಭುಜದ ಚಲನಶೀಲತೆ, ಭಂಗಿ ಮತ್ತು ಒಟ್ಟಾರೆ ಸಮನ್ವಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
2.ಮೊಣಕಾಲು-ಮೊಣಕೈ ಟ್ವಿಸ್ಟ್ ಮಾಡುವುದು (Knee-elbow twists):
ನಿಮ್ಮ ಬಲ ಮೊಣಕೈ ನಿಮ್ಮ ಎಡ ಮೊಣಕಾಲಿನ ಕಡೆಗೆ ಬರುವಂತೆ ನಿಮ್ಮ ಮೇಲಿನ ದೇಹವನ್ನು ಸ್ವಲ್ಪ ತಿರುಗಿಸಿ. ನಂತರ ಇನ್ನೊಂದು ಬದಿಗೆ ಪುನರಾವರ್ತಿಸಿ. ಈ ತಿರುಚುವ ಚಲನೆಗಳು ಓರೆಯಾದ ಸ್ನಾಯುಗಳ ಮೇಲೆ ಕೆಲಸ ಮಾಡುತ್ತವೆ. ನಮ್ಯತೆ ಮತ್ತು ಸಮತೋಲನವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
3.ಕುಳಿತಲ್ಲೇ ಕಾಲು ಎತ್ತಿ -(Seated leg raise)
ಕುಳಿತಲ್ಲೇ ಇದ್ದು ಒಂದು ಕಾಲನ್ನು ನೇರವಾಗಿ ಮೇಲಕ್ಕೆತ್ತಿ. ಕೆಲವು ಸೆಕೆಂಡುಗಳವರೆಗೆ ಕಾಲ ಹಿಡಿದುಕೊಳ್ಳಿ ನಂತರ ನಿಧಾನವಾಗಿ ಕೆಳಕ್ಕೆ ಇಳಿಸಿ. ನಿಮ್ಮ ಕಾಲುಗಳನ್ನು ಪರ್ಯಾಯವಾಗಿ ಮೇಲಕ್ಕೆತ್ತಿ. ಈ ಸರಳ ಚಲನೆಯು ನಿಮ್ಮ ತೊಡೆಯ ಸ್ನಾಯುಗಳನ್ನು ಗುರಿಯಾಗಿರಿಸಿಕೊಂಡು, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









