ಪ್ರತಿ ಮನೆಯಲ್ಲಿರುವ ಸಂಜೀವಿನಿ ಇದು ! ಮಧುಮೇಹ, ಬಿಪಿ, ಹಾರ್ಟ್ ಅಟ್ಯಾಕ್, ಕ್ಯಾನ್ಸರ್ ವರೆಗೆ ಈ ಹೂವೇ ಮದ್ದು!

ಪ್ರತಿ ಮನೆಯ ಮುಂದೆ ಬೆಳೆಯುವ ಈ ಹೂವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಹೂವನ್ನು ಹಲವು ರೋಗಗಳಿಗೆ ಮನೆಮದ್ದಾಗಿ ಬಳಸಬಹುದು. 

Written by - Ranjitha R K | Last Updated : Nov 6, 2025, 04:22 PM IST
  • ರೋಗಗಳಿಂದ ಮುಕ್ತವಾಗಿಡಲು ನೈಸರ್ಗಿಕ ಮಾರ್ಗ
  • ಆಹಾರ ಮತ್ತು ಗಿಡಮೂಲಿಕೆಗಳ ಬಳಕೆ
  • ಈ ಹೂವನ್ನು ಹಲವು ರೋಗಗಳಿಗೆ ಮನೆಮದ್ದಾಗಿ ಬಳಸಬಹುದು.
ಪ್ರತಿ ಮನೆಯಲ್ಲಿರುವ ಸಂಜೀವಿನಿ ಇದು ! ಮಧುಮೇಹ, ಬಿಪಿ, ಹಾರ್ಟ್ ಅಟ್ಯಾಕ್, ಕ್ಯಾನ್ಸರ್ ವರೆಗೆ ಈ ಹೂವೇ ಮದ್ದು!

ಅನೇಕ ಜನರು ನಮ್ಮ ದೇಹವನ್ನು ರೋಗಗಳಿಂದ ಮುಕ್ತವಾಗಿಡಲು  ನೈಸರ್ಗಿಕ ಮಾರ್ಗಗಳನ್ನು ಅನುಸರಿಸುತ್ತಾರೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಆಹಾರ ಮತ್ತು ಗಿಡಮೂಲಿಕೆಗಳನ್ನು ಬಳಸುತ್ತಾರೆ. ಬಹುತೇಕ ಪ್ರತಿ ಮನೆಯ ಮುಂದೆ ಬೆಳೆಯುವ ಈ ಹೂವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಹೂವನ್ನು ಹಲವು ರೋಗಗಳಿಗೆ ಮನೆಮದ್ದಾಗಿ ಬಳಸಬಹುದು. 

Add Zee News as a Preferred Source

ಮಧುಮೇಹಕ್ಕೆ  ಔಷಧ :
ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ದಾಸವಾಳದ ಹೂವು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ದಾಸವಾಳ ಕುದಿಸಿದ ನೀರನ್ನು ಕುಡಿಯುವುದರಿಂದ ರಕ್ತದ ಸಕ್ಕರೆ ನಿಯಂತ್ರಣದಲ್ಲಿ ಇರುತ್ತದೆ. 

ಇದನ್ನೂ ಓದಿ : ಹೈ ಬಿಪಿ ಕಡಿಮೆ ಮಾಡಿಕೊಳ್ಳಬೇಕಂದ್ರೆ ಈ ಆಹಾರ ತಿನ್ನುವುದನ್ನ ತಕ್ಷಣವೇ ನಿಲ್ಲಿಸಿ...

ಅಧಿಕ ರಕ್ತದೊತ್ತಡ :
ಅಧಿಕ ರಕ್ತದೊತ್ತಡ ತುಂಬಾ ಅಪಾಯಕಾರಿ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ದಾಸವಾಳದ ಚಹಾ ಕುಡಿಯುವುದರಿಂದ  ಹೈ ಬಿಪಿಯನ್ನು ನಿಯಂತ್ರಿಸಬಹುದು. ಇದು ಹೃದಯ ಅಪಧಮನಿಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ.

ಬೊಜ್ಜು ಕಡಿಮೆ ಮಾಡಲು :  
ದಾಸವಾಳವು ಕೊಬ್ಬನ್ನು ಸುಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಹೃದಯದ ಅಪಧಮನಿಗಳಲ್ಲಿ ಸಂಗ್ರಹವಾಗುವ ಕೆಟ್ಟ ಕೊಬ್ಬಾದ LDL ಕೊಲೆಸ್ಟ್ರಾಲ್ ಅನ್ನು ಸುಡುತ್ತದೆ. ಹೃದಯ ಕಾಯಿಲೆಯಿಂದ ರಕ್ಷಿಸುತ್ತದೆ. 

ಕ್ಯಾನ್ಸರ್ ವಿರುದ್ಧ ಮದ್ದು :
ದಾಸವಾಳದ ಹೂವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಪ್ರತಿಬಂಧಿಸಲು ಸಹಾಯ ಮಾಡುವ ಅಂಶಗಳನ್ನು ಹೊಂದಿದೆ.   ದಾಸವಾಳವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕಿಮೊಥೆರಪಿಯ ಪ್ರಯೋಜನಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಈ ‌ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ನುಗ್ಗೆಕಾಯಿ ಸೇವಿಸಬಾರದು: ನಿಮ್ಮ ಪ್ರಾಣಕ್ಕೆ ತುಂಬಾ ಡೇಂಜರ್!!

ದಾಸವಾಳ ಹೂವನ್ನು ಬಳಸುವ ಸರಳ ವಿಧಾನ : 
ದಾಸವಾಳದ ಹೂವುಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಸ್ವಲ್ಪ ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಪ್ರತಿದಿನ ಕುಡಿಯಬಹುದು. ದಾಸವಾಳದ ಹೂವಿನ ಮೊಗ್ಗುಗಳನ್ನು ಪೂರ್ತಿಯಾಗಿ ತಿನ್ನಬಹುದು. ನಿಮಗೆ ಯಾವುದು ಸೂಕ್ತವೋ ಆ ವಿಧಾನವನ್ನು ಆರಿಸಿಕೊಂಡು ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. 

(ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News