ನಿಂಬೆ ರಸವನ್ನು ಈ ಆಹಾರದ ಜೊತೆ ಎಂದಿಗೂ ಸೇವಿಸಬಾರದು ! ಆದರೆ ಬಹುತೇಕರು ಈ ತಪ್ಪು ಮಾಡುತ್ತಾರೆ !

Bad Food Combination :  ಕೆಲವು ವಸ್ತುಗಳೊಂದಿಗೆ ನಿಂಬೆಹಣ್ಣು ತಿನ್ನುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಹೊಟ್ಟೆಯ ಸಮಸ್ಯೆಗಳು, ಆಸಿಡಿಟಿ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. 

Written by - Ranjitha R K | Last Updated : Mar 6, 2025, 11:07 AM IST
  • ನಿಂಬೆ ಆರೋಗ್ಯಕ್ಕೆ ಪ್ರಯೋಜನಕಾರಿ.
  • ಈ ಹುಳಿ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
  • ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುತ್ತದೆ
ನಿಂಬೆ ರಸವನ್ನು ಈ ಆಹಾರದ ಜೊತೆ ಎಂದಿಗೂ ಸೇವಿಸಬಾರದು ! ಆದರೆ ಬಹುತೇಕರು ಈ ತಪ್ಪು ಮಾಡುತ್ತಾರೆ !

Bad Food Combination : ನಿಂಬೆ ಆರೋಗ್ಯಕ್ಕೆ ಪ್ರಯೋಜನಕಾರಿ.  ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಈ ಹುಳಿ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುತ್ತದೆ. ತೂಕ ಇಳಿಸಿಕೊಳ್ಳಲು ಅನೇಕ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸವನ್ನು ಉಗುರು ಬೆಚ್ಚಗಿರುವ ನೀರಿಗೆ ಬೆರೆಸಿ ಕುಡಿಯುತ್ತಾರೆ. ಇನ್ನು ಕೆಲವರು ಆಹಾರದ ರುಚಿಯನ್ನು ಹೆಚ್ಚಿಸಲು ಇದನ್ನು ಬಳಸುತ್ತಾರೆ. ಆದರೆ ಕೆಲವು ವಸ್ತುಗಳೊಂದಿಗೆ ನಿಂಬೆಹಣ್ಣು ತಿನ್ನುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಹೊಟ್ಟೆಯ ಸಮಸ್ಯೆಗಳು, ಆಸಿಡಿಟಿ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. 

Add Zee News as a Preferred Source

ಆಯುರ್ವೇದದ ಪ್ರಕಾರ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಸ್ವಭಾವವಿದೆ. ಕೆಲವು ವಸ್ತುಗಳು ಶೀತ ಪರಿಣಾಮ ಬೀರುತ್ತವೆ, ಇನ್ನು ಕೆಲವು ಬಿಸಿ ಪರಿಣಾಮ ಬೀರುತ್ತವೆ. ವಿರುದ್ಧ ಸ್ವಭಾವದ ಎರಡು ಆಹಾರಗಳನ್ನು ಒಟ್ಟಿಗೆ ಸೇವಿಸಿದಾಗ, ದೇಹದಲ್ಲಿ ಕಲ್ಮಶಗಳು ರೂಪುಗೊಳ್ಳುತ್ತವೆ. ಇದು ಕಳಪೆ ಜೀರ್ಣಕ್ರಿಯೆಗೆ ಕಾರಣವಾಗಬಹುದು. ಇದೇ ರೀತಿ ನಿಂಬೆಯೊಂದಿಗೆ ಕೆಲವು ವಸ್ತುಗಳನ್ನು ಸೇವಿಸುವುದರಿಂದ ಗ್ಯಾಸ್, ಆಸಿಡಿಟಿ, ವಾಂತಿ ಅಥವಾ ಸೆಳೆತದಂತಹ ಹೊಟ್ಟೆ ಸಮಸ್ಯೆಗಳು ಉಂಟಾಗಬಹುದು. 

ಇದನ್ನೂ ಓದಿ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆರಡು ಸಿಹಿ ಬೇವನ್ನು ಜಗಿದು ತಿಂದ್ರೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ..!

ನಿಂಬೆಯೊಂದಿಗೆ  ಈ 4 ವಸ್ತುಗಳನ್ನು ಸೇವಿಸಬಾರದು :
ಹಾಲು ಮತ್ತು ನಿಂಬೆ :

ಹಾಲು  ಸೇವಿಸಿದ ತಕ್ಷಣ ಅಥವಾ ನಿಂಬೆ ರಸ ಸೇವಿಸಿದ ಕೂಡಲೇ ಹಾಲು ಕುಡಿಯಬಾರದು. ನಿಂಬೆಯಲ್ಲಿರುವ ಆಮ್ಲವು ಹಾಲಿನಲ್ಲಿರುವ ಪ್ರೋಟೀನ್‌ಗಳನ್ನು ಒಡೆಯುತ್ತದೆ. ಇದರಿಂದಾಗಿ ಹಾಲು ಮೊಸರಾಗುತ್ತದೆ. ಇದು ಹೊಟ್ಟೆಯ ಕಿರಿಕಿರಿ, ಗ್ಯಾಸ್, ಆಸಿಡಿಟಿ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. 

2. ಸೌತೆಕಾಯಿ ಮತ್ತು ನಿಂಬೆಹಣ್ಣು:
ಜನರು ಸಾಮಾನ್ಯವಾಗಿ ಸೌತೆಕಾಯಿ ಮೇಲೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಸಲಾಡ್‌ನಲ್ಲಿ ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದ್ದರೆ, ನಿಂಬೆಯಲ್ಲಿ ಆಮ್ಲವಿದೆ. ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಜೊತೆಗೆ   ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. 

ಇದನ್ನೂ ಓದಿ : ಮದುವೆಯ ನಂತರ ಗಂಡ-ಹೆಂಡತಿಯರಿಬ್ಬರೂ ಒಂದೇ ರೀತಿ ಕಾಣುವುದೇಕೆ? ಕಾರಣ ತುಂಬಾ ಕುತೂಹಲಕಾರಿಯಾಗಿದೆ...!!

3. ಕ್ಯಾರೆಟ್ ಮತ್ತು ನಿಂಬೆಹಣ್ಣು:
ನಿಂಬೆಯೊಂದಿಗೆ ಕ್ಯಾರೆಟ್ ತಿನ್ನುವುದು ಸಹ ಹಾನಿಕಾರಕವಾಗಿದೆ. ಕ್ಯಾರೆಟ್‌ನಲ್ಲಿರುವ ಕೆಲವು ಅಂಶಗಳು ನಿಂಬೆಯಲ್ಲಿರುವ ಆಮ್ಲದೊಂದಿಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತವೆ. ಇದು ಹೊಟ್ಟೆ ಸೆಳೆತ, ಗ್ಯಾಸ್ ಮತ್ತು ಆಸಿಡಿಟಿಗೆ ಕಾರಣವಾಗಬಹುದು.  

4. ಮಸಾಲೆಯುಕ್ತ ಆಹಾರ ಮತ್ತು ನಿಂಬೆಹಣ್ಣು  :
ನೀವು ತುಂಬಾ ಮಸಾಲೆಯುಕ್ತ ಆಹಾರವನ್ನು ಸೇವಿಸಿದ್ದರೆ, ಅದಕ್ಕೆ ನಿಂಬೆಹಣ್ಣು ಸೇರಿಸುವುದನ್ನು ತಪ್ಪಿಸಿ. ನಿಂಬೆಹಣ್ಣಿನ ಆಮ್ಲೀಯತೆ ಮತ್ತು ಮಸಾಲೆಗಳ ಖಾರ ಸ್ವಭಾವವು ಒಟ್ಟಿಗೆ ಎದೆಯುರಿ, ಅಜೀರ್ಣ ಮತ್ತು  ಆಸಿಡ್ ರಿಫ್ಲೆಕ್ಸ್ ಗೆ ಕಾರಣವಾಗುತ್ತದೆ. 

 (ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News