Bajra Benefits for Weight Loss: ಸುಡುವ ಬೇಸಿಗೆ ಕಾಲ ಬಂದಾಗಿದೆ, ಸುಡವ ಸೂರ್ಯನು ಮೈ ಸವರಿ ಬೆವರಿಳಿಸುತ್ತಿದ್ದಾನೆ. ಬೇಸಿಗೆ ಕಾಲ ಬಂತೆಂದರೆ ಸಾಕು, ಚರ್ಮದ ಆರೈಕೆ ಮತ್ತು ದೇಹದ ತೇವಾಂಶವನ್ನು ಕಾಪಾಡಿಕೊಳ್ಳುವಂತಹ ಹಲವು ವಿಷಯಗಳನ್ನು ನಾವು ಪ್ರಯತ್ನಿಸುತ್ತೇವೆ. ಕೆಲವೊಂದು ಆಹಾರ ಪದಾರ್ಥ ಹಾಗೂ ಪಾನಿಯಾಗಳನ್ನು ಸೇವಿಸುವ ಮೂಲಕ ದೇಹವನ್ನು ತಂಪಾಗಿಡಲು ಬಯಸುತ್ತೇವೆ.
ಈ ಬಿಸಿಲಿನ ವಾತಾವರಣಕ್ಕೆ ಹೆಚ್ಚು ಹಣ್ಣುಗಳು, ತಾಜಾ ರಸ ಮತ್ತು ಮಜ್ಜಿಗೆ ಉತ್ತಮ ಆಯ್ಕೆ. ಈ ರೀತಿ ದೇಹವನ್ನು ತಂಪಾಗಿಡುವ ಆಹಾರಗಳಲ್ಲಿ ಮೊಸರನ್ನ ಕೂಡ ಒಂದು. ಮೊಸರು ದೇಹವನ್ನು ತಂಪಾಗಿಡಲು ಅಷ್ಟೇ ಅಲ್ಲದೆ ತೂಕ ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ಆದರೆ, ಈ ಮೊಸರು ಅನ್ನವನ್ನು ಈ ಪಾದರ್ಥವನ್ನು ಬಳಸಿ ಮಾಡುವುದರಿಂದ ನೀವು ಹೆಚ್ಚು ಉಪಯೋಗ ಪಡೆಯಬಹುದು.
ಮೊಸರನ್ನ ತಯಾರಿಸಲು ಬೇಕಾದ ಪದಾರ್ಥಗಳು:
ಕಂಬು ಧಾನ್ಯ- 1 ಕಪ್
ಹಾಲು- ಹಾಲು - 1 ½ ಕಪ್
ಮೊಸರು - ½ ಕಪ್
ಕ್ಯಾರೆಟ್ - 1
ಸಾಸಿವೆ - ಸ್ವಲ್ಪ
ಉದ್ದಿನ ಬೇಳೆ - 1 ಟೀ ಚಮಚ
ಕಡಲೆಕಾಯಿ - 1 ಟೀ ಚಮಚ
ಹಸಿಮೆಣಸಿನ ಕಾಯಿ-1
ಒಣ ಮೆಣಸಿನಕಾಯಿ - 2
ಶುಂಠಿ - 1 ತುಂಡು
ಇಂಗು - ಸ್ವಲ್ಪ
ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
ಉಪ್ಪು - ಅಗತ್ಯಕ್ಕೆ ತಕ್ಕಷ್ಟು
ಪಾಕ ವಿಧಾನ
ಕಂಬು ದಾನ್ಯವನ್ನು ಚೆನ್ನಾಗಿ ತೊಳೆದು ಮಿಕ್ಸರ್‌ನಲ್ಲಿ ಹಾಕಿ ರುಬ್ಬಿ ತರಿ ತರಿಯಾಗಿ ಮಾಡಿಕೊಳ್ಳಿ. ಹಾಲನ್ನು ಕುದಿಸಿ ಅದನ್ನು ತಣ್ಣಗಾಗಲು ಬಿಡಿ. ಕೊತ್ತಂಬರಿ ಸೊಪ್ಪು ಹಾಗೂ ಹಸಿರು ಮೆಣಸಿನಕಾಯಿಯನ್ನು ಸಣ್ಣದಾಗಿ ಎಚ್ಚಿಟ್ಟುಕೊಳ್ಳಿ.
ಕ್ಯಾರೆಟ್ ಅನ್ನು ಸಿಪ್ಪೆ ತೆಗೆದು ತುರಿದುಕೊಳ್ಳಿ. ಕುಕ್ಕರ್ ಅನ್ನು ಒಲೆಯ ಮೇಲೆ ಇರಿಸಿ ಐದು ಕಪ್ ನೀರು ಸೇರಿಸಿ ಕುದಿಯಲು ಬಿಡಿ. ನೀರು ಕುದಿಯಲು ಪ್ರಾರಂಭಿಸಿದ ನಂತರ, ಅದಕ್ಕೆ ರಾಗಿ ಸೇರಿಸಿ, ಬೆರೆಸಿ, ಕುಕ್ಕರ್ ಮುಚ್ಚಿ. ಕುಕ್ಕರ್ ಇರುವ ಒಲೆಯನ್ನು ಮಧ್ಯಮ ಉರಿಯಲ್ಲಿ ಇರಿಸಿ ಕುದಿಯಲು ಬಿಡಿ. 4 ಸೀಟಿಗಳು ಬಂದಾಗ, ಅದನ್ನು ಕೆಳಗಿಳಿಸಿ ಮತ್ತು ಸೀಟಿ ನಿಲ್ಲುವವರೆಗೆ ಬಿಡಿ. ನಂತರ ಕುಕ್ಕರ್ ತೆರೆಯಿರಿ, ಅದಕ್ಕೆ ಬೇಯಿಸಿದ ಹಾಲನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಒಲೆಯ ಮೇಲೆ ಪ್ಯಾನ್ ಇಟ್ಟು, ಬಿಸಿಯಾದಾಗ ಎಣ್ಣೆ ಹಾಕಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
ಎಣ್ಣೆ ಬಿಸಿಯಾದಾಗ, ಸಾಸಿವೆ ಹಾಕಿ ಹುರಿಯಿರಿ. ಇದಕ್ಕೆ ಕಡಲೆಕಾಯಿ ಮತ್ತು ಉದ್ದಿನ ಬೇಳೆ ಸೇರಿಸಿ ಒಗ್ಗರಣೆ ಕೊಡಿ. ನಂತರ ಕರಿಬೇವು, ಶುಂಠಿ ಮತ್ತು ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿಗಳನ್ನು ಸೇರಿಸಿ ಹುರಿಯಿರಿ. ಕೊನೆಗೆ, ನೀವು ಒಲೆ ಆಫ್ ಮಾಡಿದಾಗ, ಸ್ವಲ್ಪ ಶುಂಠಿ ಸೇರಿಸಿ ಬೆರೆಸಿ. ನಂತರ ಇವೆಲ್ಲವನ್ನು ಕಂಬು ಅಕ್ಕಿಗೆ ಸೇರಿಸಿ. ಅದಕ್ಕೆ ಮೊಸರು ಮತ್ತು ತುರಿದ ಕ್ಯಾರೆಟ್ ಸೇರಿಸಿ. ಕೊನೆಗೆ, ಅಗತ್ಯವಿರುವ ಪ್ರಮಾಣದ ನೀರು ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಸಣ್ಣಗೆ ಕತ್ತರಿಸಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಹಾಕಿದರೆ. ಕಂಬು ದಾನ್ಯದ ಮೊಸರನ್ನ ಸವಿಯಲು ಸಿದ್ದ.









