ಬೆಳಗ್ಗೆ ಎದ್ದ ತಕ್ಷಣ ಈ 5 ಲಕ್ಷಣ ಕಂಡುಬಂದ್ರೆ ಎಚ್ಚರ! ಇದು ಕಡಿಮೆ ಬಿಪಿಯ ಸಂಕೇತವಾಗಿರಬಹುದು!

Low Blood Pressure: ಅಧಿಕ ರಕ್ತದೊತ್ತಡದಂತೆಯೇ ಕಡಿಮೆ ರಕ್ತದೊತ್ತಡವೂ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಹೆಚ್ಚಿನ ಜನರು ಕಡಿಮೆ ರಕ್ತದೊತ್ತಡದ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಕಡಿಮೆ ರಕ್ತದೊತ್ತಡದ ಈ 5 ಲಕ್ಷಣಗಳು ಬೆಳಗ್ಗೆ ಕಾಣಿಸಿಕೊಳ್ಳುತ್ತವೆ. 

Written by - Puttaraj K Alur | Last Updated : May 11, 2025, 10:09 PM IST
  • ಬೆಳಗ್ಗೆ ಎದ್ದ ನಂತರ ತಲೆತಿರುಗುವಿಕೆ ಅನುಭವಿಸುವುದು ಕಡಿಮೆ ರಕ್ತದೊತ್ತಡದ ಸಂಕೇತವಾಗಿರಬಹುದು
  • ಬೆಳಗ್ಗೆ ವಾಕರಿಕೆ ಬಂದು ವಾಂತಿಯಾಗುವಂತೆ ಭಾಸವಾದರೆ ಕಡಿಮೆ ರಕ್ತದೊತ್ತಡದ ಲಕ್ಷಣವಾಗಿರಬಹುದು
  • ಬೆಳಗ್ಗೆ ಎದ್ದ ನಂತರವೂ ದೇಹದಲ್ಲಿ ಆಯಾಸವಿದ್ದರೆ ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷಿಸಬೇಡಿ
ಬೆಳಗ್ಗೆ ಎದ್ದ ತಕ್ಷಣ ಈ 5 ಲಕ್ಷಣ ಕಂಡುಬಂದ್ರೆ ಎಚ್ಚರ! ಇದು ಕಡಿಮೆ ಬಿಪಿಯ ಸಂಕೇತವಾಗಿರಬಹುದು!

Low Blood Pressure: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರು ಅಧಿಕ ರಕ್ತದೊತ್ತಡ ಅಂದರೆ ಅಧಿಕ ಬಿಪಿಯಿಂದ ಬಳಲುತ್ತಿದ್ದರೆ, ಕೆಲವರು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಹೆಚ್ಚಿನ ಜನರು ಕಡಿಮೆ ರಕ್ತದೊತ್ತಡದ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಏಕೆಂದರೆ ಕಡಿಮೆ ರಕ್ತದೊತ್ತಡವು ಹೆಚ್ಚಿನ ರಕ್ತದೊತ್ತಡಕ್ಕಿಂತ ಕಡಿಮೆ ಅಪಾಯಕಾರಿ ಎಂದು ಜನರು ನಂಬುತ್ತಾರೆ. ಆದರೆ ಇದು ಹಾಗಲ್ಲ, ಕಡಿಮೆ ರಕ್ತದೊತ್ತಡ ಕೂಡ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಕಡಿಮೆ ಬಿಪಿಯ ಲಕ್ಷಣಗಳ ಬಗ್ಗೆ ತಿಳಿಯಿರಿ...

ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವುದು: ಬೆಳಗ್ಗೆ ಎದ್ದ ನಂತರ ತಲೆತಿರುಗುವಿಕೆ ಅನುಭವಿಸುವುದು ಕಡಿಮೆ ರಕ್ತದೊತ್ತಡದ ಸಂಕೇತವಾಗಿರಬಹುದು. ಬೆಳಗ್ಗೆ ಎದ್ದ ತಕ್ಷಣ ಅಥವಾ ದಿನವಿಡೀ ತಲೆತಿರುಗುವಿಕೆ ಕಂಡುಬಂದರೆ, ನೀವು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ನೀವು ತಕ್ಷಣ ವೈದ್ಯರ ಬಳಿಗೆ ಹೋಗಿ ನಿಮ್ಮ ಬಿಪಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. 

ಇದನ್ನೂ ಓದಿ: ಮಜ್ಜಿಗೆಗೆ ಈ ಎಲೆ ಬೆರೆಸಿ ಕುಡಿದರೆ ಯೂರಿಕ್‌ ಆಸಿಡ್‌ ಕರಗಿಹೋಗುವುದು! ಕಿಡ್ನಿಸ್ಟೋನ್‌ಗೂ ಇದೇ ಮದ್ದು..

ವಾಕರಿಕೆ: ಬೆಳಗ್ಗೆ ಎದ್ದ ತಕ್ಷಣ ವಾಕರಿಕೆ ಬಂದು ವಾಂತಿಯಾಗುವಂತೆ ಭಾಸವಾದರೆ, ಅದು ಕಡಿಮೆ ರಕ್ತದೊತ್ತಡದ ಸಂಕೇತವಾಗಿರಬಹುದು. ಈ ಲಕ್ಷಣವನ್ನ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ, ಸಾಧ್ಯವಾದಷ್ಟು ಬೇಗ ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬೇಕು.

ಆಯಾಸ: ಬೆಳಗ್ಗೆ ಎದ್ದ ನಂತರವೂ ದೇಹದಲ್ಲಿ ಆಯಾಸವಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಕೂಡಲೇ ವೈದ್ಯರ ಬಳಿಗೆ ಹೋಗಿ ಆರೋಗ್ಯ ತಪಾಸನೆ ಮಾಡಿಸಿಕೊಳ್ಳಿರಿ. ಯಾವುದೇ ಕೆಲಸ ಮಾಡದಿದ್ದರೂ ದೇಹದಲ್ಲಿ ಆಯಾಸವಿದ್ದರೆ, ಈ ಲಕ್ಷಣವನ್ನ ನಿರ್ಲಕ್ಷಿಸಬಾರದು. 

ಮಸುಕಾದ ದೃಷ್ಟಿ: ಬೆಳಗ್ಗೆ ಎದ್ದ ನಂತರ ದೃಷ್ಟಿ ಮಂದವಾಗಿದ್ದರೆ, ಅದು ಕಡಿಮೆ ರಕ್ತದೊತ್ತಡದ ಸಂಕೇತವಾಗಿರಬಹುದು. ನಿಮಗೆ ದೃಷ್ಟಿ ಮಂದವಾಗಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. 

ತಣ್ಣಗಾದ ಚರ್ಮ: ಬೆಳಗ್ಗೆ ಎದ್ದಾಗ ನಿಮ್ಮ ಚರ್ಮವು ತಣ್ಣಗಾಗಿದ್ದರೆ ಅಥವಾ ಜಿಗುಟಾಗಿದ್ದರೆ, ಅದು ಕಡಿಮೆ ರಕ್ತದೊತ್ತಡದ ಸಂಕೇತವಾಗಿರಬಹುದು. ನಿಮ್ಮ ದೇಹದಲ್ಲಿ ತಣ್ಣನೆಯ ಅನುಭವ ಇದ್ದರೆ ನೀವು ಕೂಡಲೇ ವೈದ್ಯರ ಬಳಿಗೆ ಹೋಗಬೇಕು. 

ಇದನ್ನೂ ಓದಿ: ವೀಳ್ಯದೆಲೆ ರಸಕ್ಕೆ ಇದನ್ನು ಬೆರೆಸಿ ತಿಂದರೆ ಕಿಡ್ನಿ ಸ್ಟೋನ್‌ ಕರಗಿ ನೋವಿಲ್ಲದೇ ಹೊರ ಬರುತ್ತೆ! ಆಪರೇಷನ್‌ ಕೂಡ ಅಗತ್ಯವಿಲ್ಲ!!

ಉಪ್ಪು ನೀರು: ನಿಮ್ಮ ರಕ್ತದೊತ್ತಡ ಕಡಿಮೆಯಿದ್ದರೆ ಉಪ್ಪು ನೀರು ಕುಡಿಯಿರಿ. ಉಪ್ಪು ನೀರು ಕುಡಿಯುವುದರಿಂದ ಕಡಿಮೆ ರಕ್ತದೊತ್ತಡದಿಂದ ತಕ್ಷಣ ಪರಿಹಾರ ಸಿಗುತ್ತದೆ. 

ಕಾಫಿ: ನಿಮ್ಮ ರಕ್ತದೊತ್ತಡ ಕಡಿಮೆಯಿದ್ದರೆ ನೀವು ಕಾಫಿ ಕುಡಿಯಬಹುದು. ಕಡಿಮೆ ರಕ್ತದೊತ್ತಡದ ಸಮಸ್ಯೆಯನ್ನು ಕಾಫಿ ಕುಡಿಯುವ ಮೂಲಕವೂ ಗುಣಪಡಿಸಬಹುದು. 

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News