)
instant noodles health risk: ಹಸಿವಾದಾಗ ಬೇಗನೆ ತಿನ್ನಲು ಸಿಗುವ ತಿಂಡಿಗಳಲ್ಲಿ ನೂಡಲ್ಸ್ ಕೂಡ ಒಂದು. ಇದು ಮಕ್ಕಳಿಂದ ಹಿಡಿದು ದೊಡ್ಡವರಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ಸ್ನ್ಯಾಕ್. ಆದರೆ, ನೂಡಲ್ಸ್ ತಿನ್ನುವ ಮುನ್ನ ಒಂದು ಎಚ್ಚರಿಕೆ: ಅವುಗಳನ್ನು ಬೇಯಿಸದೇ ಅಥವಾ ಅರ್ಧಂಬರ್ಧ ತಯಾರಾದ ನಂತರ ತಿನ್ನುವುದು ಆರೋಗ್ಯಕ್ಕೆ ಮಾರಕ!
ಈಜಿಪ್ಟ್ನಲ್ಲಿ ನಡೆದ ದಾರುಣ ಘಟನೆ ಈ ವಿಚಾರವನ್ನು ಸಾಬೀತು ಮಾಡಿದೆ. 13 ವರ್ಷದ ಬಾಲಕನೊಬ್ಬ ಹಸಿವಿನಿಂದ ಕಚ್ಚಾ ನೂಡಲ್ಸ್ ತಿಂದಿದ್ದ. ಒಮ್ಮೆ ಅಲ್ಲ, ಮೂರು ಪ್ಯಾಕೆಟ್ ನೂಡಲ್ಸ್ ತಿಂದಿದ್ದ. ಸ್ವಲ್ಪ ಹೊತ್ತಿನಲ್ಲೇ ಅವನಿಗೆ ತೀವ್ರ ಹೊಟ್ಟೆನೋವು, ವಾಂತಿ ಪ್ರಾರಂಭವಾಯಿತು. ಕುಟುಂಬದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರಿಗೆ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ.
ಏಕೆ ನೂಡಲ್ಸ್ ಕಚ್ಚಾ ತಿನ್ನಬಾರದು?
ಇನ್ಸ್ಟಂಟ್ ನೂಡಲ್ಸ್ಗಳಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿರುತ್ತದೆ. WHO ಮಾರ್ಗಸೂಚಿಗಳ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ ಗರಿಷ್ಠ 2000mg ಸೋಡಿಯಂ ಸೇವಿಸಬೇಕು. ಆದರೆ ಒಂದು ಪ್ಯಾಕೆಟ್ ಇನ್ಸ್ಟಂಟ್ ನೂಡಲ್ಸ್ನಲ್ಲೇ ಸುಮಾರು 1829mg ಸೋಡಿಯಂ ಇರುತ್ತದೆ. ಅಂದರೆ ದಿನಕ್ಕೆ ಎರಡು ಪ್ಯಾಕೆಟ್ ನೂಡಲ್ಸ್ ತಿಂದರೆ, ದೇಹದ ಅಗತ್ಯಕ್ಕಿಂತ ಹೆಚ್ಚಿನ ಸೋಡಿಯಂ ಪ್ರಮಾಣ ಶೇಖರಣೆಯಾಗುತ್ತದೆ. ಇದು ನೇರವಾಗಿ ರಕ್ತದೊತ್ತಡ ಹೆಚ್ಚಿಸಲು, ಹೃದಯಕ್ಕೆ ಹಾನಿ ಮಾಡಿಸಲು ಕಾರಣವಾಗುತ್ತದೆ.
ಅಷ್ಟೇ ಅಲ್ಲದೆ, ಕಚ್ಚಾ ನೂಡಲ್ಸ್ ಜೀರ್ಣವಾಗುವುದು ಕಡಿಮೆ. ಇದು ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಗೆ ತೊಂದರೆ ಉಂಟುಮಾಡುತ್ತದೆ, ದೀರ್ಘಾವಧಿಯಲ್ಲಿ ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಕಚ್ಚಾ ನೂಡಲ್ಸ್ ದೇಹದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಇದರಿಂದ ಡೀಹೈಡ್ರೇಷನ್ ಉಂಟಾಗುತ್ತದೆ.
ತಜ್ಞರ ಸಲಹೆ
ನೂಡಲ್ಸ್ ತಿನ್ನುವ ಅಭ್ಯಾಸವನ್ನು ನಿಯಂತ್ರಿಸಬೇಕು.
ಯಾವಾಗಲೂ ಬೇಯಿಸಿದ ನಂತರ ಮಾತ್ರ ಸೇವಿಸಬೇಕು.
ಮಕ್ಕಳಿಗೆ ಕಚ್ಚಾ ಅಥವಾ ಅರ್ಧಂಬರ್ಧ ಬೇಯಿಸಿದ ನೂಡಲ್ಸ್ ಕೊಡಬಾರದು.
ಆಹಾರದಲ್ಲಿ ಹಣ್ಣು, ತರಕಾರಿ, ಪ್ರೋಟೀನ್ಗಳು ಸೇರಿದಂತೆ ಪೌಷ್ಟಿಕಾಂಶ ಹೆಚ್ಚಿರುವ ಪದಾರ್ಥಗಳನ್ನು ಸೇರಿಸಬೇಕು.
ಹಸಿವಿನಲ್ಲಿ ತ್ವರಿತ ತಿಂಡಿ ಬೇಕೆಂಬ ಆವೇಶ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರುತ್ತದೆ. ಆದ್ದರಿಂದ ನೂಡಲ್ಸ್ ತಿನ್ನುವಾಗ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಕಚ್ಚಾ ನೂಡಲ್ಸ್ಗಳ ಬದಲು, ಬೇಯಿಸಿದ ನಂತರ ಮಾತ್ರ ಹಾವುದೇ ಆಹಾರವನ್ನು ಸೇವಿಸುವುದೇ ಸುರಕ್ಷಿತ ಮಾರ್ಗ.