)
Low blood pressure
: ಬೀಟ್ರೂಟ್ಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಯಮಿತವಾಗಿ ಬೀಟ್ರೂಟ್ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅವುಗಳನ್ನ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಗುಣವಾಗುತ್ತವೆ. ಆದರೆ ಕೆಲವರು ಈ ಬೀಟ್ರೂಟ್ ರಸವನ್ನ ಕುಡಿಯಲೇಬಾರದು. ಆರೋಗ್ಯ ತಜ್ಞರ ಪ್ರಕಾರ, ಇದು ಅವರಿಗೆ ಪ್ರಯೋಜನಕಾರಿಯಾಗುವ ಬದಲು ಹೆಚ್ಚು ಅಪಾಯಕಾರಿಯಾಗುತ್ತದಂತೆ.
ವಾಸ್ತವವಾಗಿ ಬೀಟ್ರೂಟ್ನಲ್ಲಿ ಆರೋಗ್ಯಕ್ಕೆ ಉತ್ತಮವಾದ ಪೋಷಕಾಂಶಗಳು ಸಮೃದ್ಧವಾಗಿವೆ. ಪ್ರತಿದಿನ ಬೀಟ್ರೂಟ್ ರಸವನ್ನ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಖಾಲಿ ಹೊಟ್ಟೆಯಲ್ಲಿ ಬೀಟ್ರೂಟ್ ರಸವನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಬಿಟ್ರೂಟ್ನಲ್ಲಿ ಖನಿಜಗಳು, ಫೈಬರ್, ಉತ್ಕರ್ಷಣ ನಿರೋಧಕಗಳು, ಫೋಲೇಟ್, ಪೊಟ್ಯಾಸಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇವು ದೇಹವನ್ನ ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಆದರೆ ಇದರ ರಸವು ಕೆಲವು ಜನರಿಗೆ ವಿಷದಂತೆ ಪರಿಣಮಿಸಬಹುದು. ಆರೋಗ್ಯ ತಜ್ಞರ ಪ್ರಕಾರ, ಕೆಲವು ಜನರು ಅಪ್ಪಿತಪ್ಪಿಯೂ ಬೀಟ್ರೂಟ್ ರಸವನ್ನು ಕುಡಿಯಬಾರದು. ಕಡಿಮೆ ರಕ್ತದೊತ್ತಡ ಇರುವವರು ಬೀಟ್ರೂಟ್ ರಸ ಕುಡಿಯುವುದನ್ನ ತಪ್ಪಿಸಬೇಕು. ಬೀಟ್ರೂಟ್ನಲ್ಲಿರುವ ಸಂಯುಕ್ತಗಳು ರಕ್ತದೊತ್ತಡವನ್ನ ಮತ್ತಷ್ಟು ಕಡಿಮೆ ಮಾಡುತ್ತದೆ.
ಒಂದು ವೇಳೆ ಅವರು ಆಕಸ್ಮಿಕವಾಗಿ ಬೀಟ್ರೂಟ್ ರಸವನ್ನ ಕುಡಿದರೆ, ಹಠಾತ್ ತಲೆತಿರುಗುವಿಕೆ ಮತ್ತು ತಲೆನೋವಿನಂತಹ ಲಕ್ಷಣಗಳು ಕಂಡುಬರಬಹುದು. ಅದಕ್ಕಾಗಿಯೇ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಯಾವಾಗಲೂ ಬೀಟ್ರೂಟ್ ರಸವನ್ನ ಸೇವಿಸುವುದನ್ನ ತಪ್ಪಿಸಬೇಕು.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)