Banana Benefits : ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಪ್ರತಿದಿನ ಬಾಳೆಹಣ್ಣು ಸೇವಿಸಿ 

ಬಾಳೆಹಣ್ಣಿನಲ್ಲಿರುವ ವಿಶೇಷ ಪ್ರೋಟೀನ್ ಆಂಟಿಮೈಕ್ರೊಬಿಯಲ್ ಮತ್ತು ಆಂಟಿ-ವೈರಲ್ ಗುಣಗಳನ್ನು ಹೊಂದಿದೆ. ಬಾಳೆಹಣ್ಣಿನಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳಾದ ಫೆರುಲಿಕ್ ಆಸಿಡ್, ಲುಪಿಯೋಲ್ ಮತ್ತು ಲೆಪ್ಟಿನ್ ಕೂಡ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿವೆ. ಬಾಳೆಹಣ್ಣಿನ ಸೇವನೆಯು ಅನೇಕ ರೀತಿಯ ಸೋಂಕುಗಳನ್ನು ತಡೆಯಲು ಪ್ರಯೋಜನಕಾರಿಯಾಗಿದೆ.

Written by - Channabasava A Kashinakunti | Last Updated : Sep 3, 2021, 09:44 AM IST
  • ಬಾಳೆಹಣ್ಣಿನಲ್ಲಿ ಕಂಡುಬರುವ ವಿಶೇಷ ಪ್ರೋಟೀನ್ ವೈರಸ್ ವಿರೋಧಿ ಗುಣಗಳನ್ನು ಹೊಂದಿದೆ.
  • ಇದು ಅನೇಕ ರೀತಿಯ ಸೋಂಕುಗಳನ್ನು ಗುಣಪಡಿಸಲು ಪರಿಣಾಮಕಾರಿ ಬಾಳೆಹಣ್ಣು
  • ನಿಮ್ಮ ರೋಗನಿರೋಧಕ ಶಕ್ತಿಗೆ ಸೇವಿಸಿ ಬಾಳೆಹಣ್ಣು
Banana Benefits : ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಪ್ರತಿದಿನ ಬಾಳೆಹಣ್ಣು ಸೇವಿಸಿ  title=

ನವದೆಹಲಿ : ಪ್ರತಿನಿತ್ಯ ಒಂದು ಬಾಳೆಹಣ್ಣು ತಿನ್ನುವುದರಿಂದ ನಿಮ್ಮ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಬಾಳೆಹಣ್ಣು ವಿಟಮಿನ್ ಬಿ 6 ನ ಉತ್ತಮ ಮೂಲವಾಗಿದೆ ಮತ್ತು ನಿಮ್ಮ ದೇಹಕ್ಕೆ ಈ ವಿಟಮಿನ್ ದೈನಂದಿನ ಅಗತ್ಯದ ಶೇ.25 ರಷ್ಟು ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ಸಿಗುತ್ತದೆ. ಇದಲ್ಲದೇ, ನೀವು ದಿನ ಬಾಳೆಹಣ್ಣನ್ನು ತಿನ್ನುವುದರಿಂದ ಶೇ.10  ರಷ್ಟು ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಅನ್ನು ಸಹ ಪಡೆಯಬಹುದು.

ಪೋಷಕಾಂಶಗಳಿಂದ ಸಮೃದ್ಧವಾಗಿದೆ ಬಾಳೆಹಣ್ಣು 

ಬಾಳೆಹಣ್ಣು(Banana) ನೈಸರ್ಗಿಕವಾಗಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ರಹಿತವಾಗಿದ್ದು, ಈ ಕಾರಣದಿಂದಾಗಿ ಇದನ್ನು ಆಹಾರದ ಜೊತೆಗೆ ಸೇವಿಸುವುದು ತುಂಬಾ ಪ್ರಯೋಜನಕಾರಿ. ಆಹಾರ ಗುಣಮಟ್ಟ ಮತ್ತು ಸುರಕ್ಷತೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಬಾಳೆಹಣ್ಣಿನಲ್ಲಿ ಜೈವಿಕ ಸಕ್ರಿಯ ಸಂಯುಕ್ತಗಳಾದ ಕ್ಯಾರೊಟಿನಾಯ್ಡ್‌ಗಳು ಮತ್ತು ಫ್ಲೇವನಾಯ್ಡ್‌ಗಳು ಇರುತ್ತವೆ. ಅವು ನಿಮ್ಮ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು, ಹೃದಯ ಸಮಸ್ಯೆ ತಡೆಯಲು ಮತ್ತು ಹಲವು ವಿಧದ ಕ್ಯಾನ್ಸರ್‌ಗೆ ರಾಮಬಾಣವಾಗಿದೆ.

ಇದನ್ನೂ ಓದಿ : Diet For Heart Health : ಹೃದಯದ ಆರೋಗ್ಯಕ್ಕೆ ಖಂಡಿತಾ ಸೇವಿಸಲೇ ಬೇಕು ಈ ಆಹಾರಗಳನ್ನು

ಆಹಾರ ಸ್ನೇಹಿ ಬಾಳೆಹಣ್ಣು

ಒಂದು ಬಾಳೆಹಣ್ಣಿನಲ್ಲಿ(Banana Benefits) 110 ಕ್ಯಾಲೋರಿಗಳು, 30 ಗ್ರಾಂ ಕಾರ್ಬ್ಸ್ ಮತ್ತು 3 ಗ್ರಾಂ ಫೈಬರ್ ಇರುತ್ತದೆ. ಬಾಳೆಹಣ್ಣಿನಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದರಿಂದ ನಿಮಗೆ ದೀರ್ಘಕಾಲದವರೆಗೆ ಹಸಿವು ಉಂಟಾಗುವುದಿಲ್ಲ. ಇದಲ್ಲದೆ ಇದು ನಿಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಉತ್ತಮವಾದ ಕಾರ್ಬೋಹೈಡ್ರೇಟ್ ನ ಒಂದು ವಿಧದ ನಿರೋಧಕ ಪಿಷ್ಟವನ್ನು ಹೊಂದಿರುತ್ತದೆ. ಇದು ಅನೇಕ ಗಂಭೀರ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಇದು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಹ ನಿರ್ವಹಿಸುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸಲು ಬಾಳೆಹಣ್ಣು

ಬಾಳೆಹಣ್ಣು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಬಾಳೆಹಣ್ಣಿನಲ್ಲಿ 422 ಮಿಗ್ರಾಂ ಪೊಟ್ಯಾಶಿಯಂ ಇದೆ ಮತ್ತು ಸೋಡಿಯಂ ರಹಿತವಾಗಿರುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಪ್ರಕಾರ, ನೀವು ಪೊಟ್ಯಾಸಿಯಮ್ ಸಮೃದ್ಧ ಆಹಾರ(Food)ವನ್ನು ಸೇವಿಸಿದರೆ, ಅದು ರಕ್ತದೊತ್ತಡವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ. ಇದು ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ದಿನನಿತ್ಯದ ಪೊಟ್ಯಾಶಿಯಂನ ಶೇ.10 ರಷ್ಟು ಪೂರೈಸುತ್ತದೆ.

ಆಂಟಿವೈರಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು

ಬಾಳೆಹಣ್ಣಿನಲ್ಲಿರುವ ವಿಶೇಷ ಪ್ರೋಟೀನ್ ಆಂಟಿಮೈಕ್ರೊಬಿಯಲ್ ಮತ್ತು ಆಂಟಿ-ವೈರಲ್ ಗುಣಗಳನ್ನು ಹೊಂದಿದೆ. ಬಾಳೆಹಣ್ಣಿನಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳಾದ ಫೆರುಲಿಕ್ ಆಸಿಡ್, ಲುಪಿಯೋಲ್ ಮತ್ತು ಲೆಪ್ಟಿನ್ ಕೂಡ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿವೆ. ಬಾಳೆಹಣ್ಣಿನ ಸೇವನೆಯು ಅನೇಕ ರೀತಿಯ ಸೋಂಕುಗಳನ್ನು(Viral) ತಡೆಯಲು ಪ್ರಯೋಜನಕಾರಿಯಾಗಿದೆ. ಇದನ್ನು ಅತಿಸಾರ ಮತ್ತು ಚಿಕನ್ ಪಾಕ್ಸ್ ರೋಗಿಗಳಿಗೆ ತಿನ್ನಲು ಸಹ ಶಿಫಾರಸು ಮಾಡಲಾಗಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲವಾಗಿರಿಸುತ್ತದೆ.

ಇದನ್ನೂ ಓದಿ : Heart attack : ಶರೀರದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಖಂಡಿತಾ ನಿರ್ಲಕ್ಷ್ಯ ಬೇಡ

ಖಿನ್ನತೆ ಸಮಸ್ಯೆಗೆ ಬಾಳೆಹಣ್ಣು

ಬಾಳೆಹಣ್ಣು ತಿನ್ನುವುದರಿಂದ ನಿಮ್ಮ ಮನಸ್ಥಿತಿಯೂ ಚೆನ್ನಾಗಿರುತ್ತದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ 6(Vitamin B-6) ನರಪ್ರೇಕ್ಷಕಗಳಾದ ಸಿರೊಟೋನಿನ್ ಮತ್ತು ಡೋಪಮೈನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ, ನಿಮ್ಮ ದೇಹದಲ್ಲಿ ವಿಟಮಿನ್ ಬಿ 6 ಕೊರತೆಯಿದ್ದರೆ, ಅದು ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ನೀವು ಪ್ರತಿ ದಿನ ಬಾಳೆಹಣ್ಣು ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರವಿರಬಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News