ರಾತ್ರಿ ಮಲಗುವ ಮೊದಲು ಇವುಗಳನ್ನು ತಿಂದರೆ ನೆಮ್ಮದಿಯ ನಿದ್ರೆ ಬರದಿರಲು ಸಾಧ್ಯವೇ ಇಲ್ಲ..!

Insomnia: ಕಣ್ಣು ಮುಚ್ಚುತ್ತಿದ್ದಂತೆ ನೆಮ್ಮದಿಯ ನಿದ್ರೆ  ಪಡೆಯಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಇದಕ್ಕೆ ಕೆಲವು ಆಹಾರಗಳು ತುಂಬಾ ಸಹಾಯಕವಾಗಿವೆ. 

Written by - Yashaswini V | Last Updated : Apr 22, 2025, 03:06 PM IST
  • ಉತ್ತಮ ನಿದ್ರೆಗೆ ಕೆಲವು ಆಹಾರಗಳು ಸಹಕಾರಿ ಎನ್ನಲಾಗುತ್ತದೆ
  • ಕೆಲವು ಆಹಾರಗಳ ಸೇವನೆಯು ನಿದ್ರಾಹೀನತೆ ಸಮಸ್ಯೆಗೆ ಅತ್ಯುತ್ತಮ ಮದ್ದು
  • ನೆಮ್ಮದಿಯ ನಿದ್ರೆಗಾಗಿ ರಾತ್ರಿ ವೇಳೆ ಯಾವ ಆಹಾರಗಳನ್ನು ಸೇವಿಸಬೇಕು ತಿಳಿಯಿರಿ
ರಾತ್ರಿ ಮಲಗುವ ಮೊದಲು ಇವುಗಳನ್ನು ತಿಂದರೆ ನೆಮ್ಮದಿಯ ನಿದ್ರೆ ಬರದಿರಲು ಸಾಧ್ಯವೇ ಇಲ್ಲ..!

Tips To Get Good Sleep: ಇಂದಿನ ಒತ್ತಡದ ಜೀವನಶೈಲಿಯಿಂದಾಗಿ ಅನೇಕ ಜನರು ನೆಮ್ಮದಿಯಿಂದ ನಿದ್ರೆ ಸಹ ಮಾಡಲಾಗದೆ ನಿದ್ರಾ ಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆಹಾರದಂತೆಯೇ ಉತ್ತಮ ಆರೋಗ್ಯಕ್ಕೆ ನಿದ್ರೆಯೂ ಕೂಡ ತುಂಬಾ ಅಗತ್ಯ. ನಿತ್ಯ ಸಾಕಾಗುವಷ್ಟು ನಿದ್ರೆ ಮಾಡದಿದ್ದರೆ ನಿದ್ರಾಹೀನತೆ ಸಮಸ್ಯೆಯಿಂದಾಗಿ ಮಾನಸಿಕ ಖಿನ್ನತೆ, ರಕ್ತದೊತ್ತಡ, ಬೊಜ್ಜು ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ, ಕೆಲವು ಆಹಾರಗಳ ಸೇವನೆಯಿಂದ ನೆಮ್ಮದಿಯ ನಿದ್ರೆ ಪಡೆಯಬಹುದು ಎನ್ನಲಾಗುತ್ತದೆ. 

Add Zee News as a Preferred Source

ವಾಸ್ತವವಾಗಿ, ಉತ್ತಮ ನಿದ್ರೆಯನ್ನು ಪಡೆಯಲು ಆಹಾರ ಸೇವನೆ ಕೂಡ ಬಹಳಷ್ಟು ಮುಖ್ಯವಾಗಿದೆ. ನೀವು ತಿನ್ನುವ ಆಹಾರದಲ್ಲಿ ಮೆಗ್ನೀಸಿ ಯಮ್, ಕ್ಯಾಲ್ಸಿಯಂ, ಜೀವಸತ್ವಗಳಂತಹ ಅಗತ್ಯ ಪೋಷಕಾಂಶಗಳಿದ್ದರೆ ನಿದ್ರಾಹೀನತೆಯನ್ನು ಹೋಗಲಾಡಿಸಲು ಸಹಾಯಕವಾಗಿದೆ. ಹಾಗಿದ್ದರೆ, ಉತ್ತಮ ನಿದ್ರೆಗಾಗಿ ರಾತ್ರಿ ಊಟದಲ್ಲಿ ಯಾವೆಲ್ಲಾ ಆಹಾರಗಳಿದ್ದರೆ ಉತ್ತಮ ಎಂದು ನೋಡುವುದಾದರೆ...  

ಬಾಳೆ ಹಣ್ಣು: 
ರಾತ್ರಿ ಭೋಜನದ ಬಳಿಕ ಒಂದು ಏಲಕ್ಕಿ ಬಾಳೆಹಣ್ಣನ್ನು ತಿನ್ನುವುದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು. ಬಾಳೆಹಣ್ಣಿನ ಸೇವನೆಯಿಂದ ದೇಹದಲ್ಲಿ ಸೆರೊಟೊನಿನ್ ಮತ್ತು ಮೆಲಟೊನಿನ್ ಎಂಬ ಹಾರ್ಮೋನುಗಳು ಸಕ್ರಿಯಗೊಂಡು ಇವು ಉತ್ತಮ ನಿದ್ರೆಗೆ ಸಹಕರಿಸುತ್ತವೆ.  

ಇದನ್ನೂ ಓದಿ- ಜಿಮ್, ಡಯಟ್ ಬೇಕಿಲ್ಲ..! ನೀರಿನಲ್ಲಿ ಈ ಎಲೆ ಬೆರೆಸಿ ಕುಡಿದ್ರೆ ಬೆಣ್ಣೆಯಂತೆ ಕರಗುತ್ತೆ ಡೊಳ್ಳು ಹೊಟ್ಟೆ...!

ಕಿತ್ತಳೆ:
ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿ ವಿಟಮಿನ್ ಸಿ ಕೊರತೆ ಇದ್ದರೂ ಕೂಡ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ರಾತ್ರಿ ಊಟದ ನಂತರ ಕಿತ್ತಳೆ ಹಣ್ಣಿನ ಸೇವನೆಯು ಉತ್ತಮ ನಿದ್ರೆಗೆ ಸಹಾಯಕವಾಗಿದೆ.  

ಓಟ್ಸ್: 
ರಾತ್ರಿ ಭೋಜನದಲ್ಲಿ ಓಟ್ಸ್ ಸೇವಿಸುವುದರಿಂದ ಇದು ದೇಹದಲ್ಲಿ ಸಿರೊಟೋನಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚು ಪ್ರಮಾಣದಲ್ಲಿದೆ. ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬುಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ತುಂಬಿರುರುವ  ಓಟ್ಸ್‌ ನಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿದ್ದು ಇದು ರಾತ್ರಿಯ ಸಮಯದಲ್ಲಿ ಉತ್ತಮ ನಿದ್ರೆಗೆ ಸಹಕಾರಿ ಆಗಿದೆ. 

ಕಿವಿ ಹಣ್ಣು: 
ಕಿವಿ ಹಣ್ಣಿನಲ್ಲಿ ಗುಣಮಟ್ಟದ ನಿದ್ರೆಗೆ ಸಹಕಾರಿಯಾದ ಸಿರೊಟೋನಿನ್ ಅಂಶ ಅಧಿಕವಾಗಿದೆ. ಹಾಗಾಗಿ ಊಟದ ನಂತರ ಒಂದು ಕಿವಿ ಹಣ್ಣನ್ನು ತಿಂದರೆ ಆನಂದದಾಯಕ ನಿದ್ರೆ ಬರುತ್ತದೆ.  .

ಇದನ್ನೂ ಓದಿ- ಆಗಾಗ ಬಾಯಾರಿಕೆಯಾಗುವುದು ಈ ರೋಗಗಳ ಲಕ್ಷಣ..! ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ

ಹಾಲು:
ರಾತ್ರಿ ಮಲಗುವ ಮೊದಲು ಒಂದು ಲೋಟ ಉಗುರುಬೆಚ್ಚಗಿನ ಹಾಲಿನಲ್ಲಿ ಚಿಟಿಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.  

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News