ಮನೆ ಅಂಗಳದಲ್ಲೇ ಇರುವ ಈ ಗಿಡದ ಎಲೆಯನ್ನು ನಿತ್ಯ ಜಗಿದು ರಸ ಹೀರಿ !ಕಿಡ್ನಿ ಸ್ಟೋನ್ ಅದರಷ್ಟಕ್ಕೆ ಕರಗಿ ನೀರಾಗುತ್ತದೆ !

ಹೆಚ್ಚಿನ ಯೂರಿಕ್ ಆಮ್ಲದ ಮಟ್ಟಗಳ ಹೊರತಾಗಿ, ಆಹಾರ ಮತ್ತು ಜೀವನಶೈಲಿಗೆ ಸಂಬಂಧಿಸಿದ ತಪ್ಪುಗಳು ಮೂತ್ರಪಿಂಡದ ಕಲ್ಲುಗಳಿಗೆ ಕಾರಣಗಳಾಗಿವೆ.  ದೇಹವನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ, ದೇಹದಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾಗಲು ಪ್ರಾರಂಭಿಸುತ್ತವೆ.  

Written by - Ranjitha R K | Last Updated : Mar 13, 2025, 10:57 AM IST
  • ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಸಾಕಷ್ಟು ಸಾಮಾನ್ಯವಾಗಿದೆ.
  • ಸ್ಟೋನ್ ಹೊರ ತೆಗೆಯಲು ಅನೇಕ ಮಂದಿ ಶಸ್ತ್ರಚಿಕಿತ್ಸೆ ಮಾಡಿಸುತ್ತಾರೆ.
  • ಜೀವನಶೈಲಿಗೆ ಸಂಬಂಧಿಸಿದ ತಪ್ಪುಗಳು ಮೂತ್ರಪಿಂಡದ ಕಲ್ಲುಗಳಿಗೆ ಕಾರಣಗಳಾಗಿವೆ.
ಮನೆ ಅಂಗಳದಲ್ಲೇ ಇರುವ ಈ ಗಿಡದ ಎಲೆಯನ್ನು ನಿತ್ಯ ಜಗಿದು ರಸ ಹೀರಿ !ಕಿಡ್ನಿ ಸ್ಟೋನ್ ಅದರಷ್ಟಕ್ಕೆ ಕರಗಿ ನೀರಾಗುತ್ತದೆ ! title=

Home remedies for kidney stones : ಮೂತ್ರಪಿಂಡದ ಕಲ್ಲುಗಳಿಂದ ಉಂಟಾಗುವ ನೋವು ಅಸಹನೀಯವಾಗಿರುತ್ತದೆ. ಈ ನೋವಿನಿಂದ ಪರಿಹಾರ ಪಡೆಯಲು, ಸ್ಟೋನ್ ಹೊರ ತೆಗೆಯಲು ಅನೇಕ ಮಂದಿ ಶಸ್ತ್ರಚಿಕಿತ್ಸೆ ಮಾಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಸಾಕಷ್ಟು ಸಾಮಾನ್ಯವಾಗಿದೆ. ಹೆಚ್ಚಿನ ಯೂರಿಕ್ ಆಮ್ಲದ ಮಟ್ಟಗಳ ಹೊರತಾಗಿ, ಆಹಾರ ಮತ್ತು ಜೀವನಶೈಲಿಗೆ ಸಂಬಂಧಿಸಿದ ತಪ್ಪುಗಳು ಮೂತ್ರಪಿಂಡದ ಕಲ್ಲುಗಳಿಗೆ ಕಾರಣಗಳಾಗಿವೆ.  ದೇಹವನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ, ದೇಹದಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಇದು ಮೂತ್ರಪಿಂಡದ ಕಲ್ಲುಗಳಾಗಿ ರೂಪುಗೊಳ್ಳಲು ಕಾರಣವಾಗುತ್ತದೆ. ಕೆಲವು ಮನೆಮದ್ದುಗಳು, ಆಹಾರ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳ ಸಹಾಯದಿಂದ, ಮೂತ್ರಪಿಂಡದ ಕಲ್ಲುಗಳಿಂದ ಪರಿಹಾರ ಪಡೆಯಬಹುದು. 

ಮೂತ್ರಪಿಂಡದ ಕಲ್ಲುಗಳಿಂದ ಪರಿಹಾರ ಪಡೆಯಲು ಮನೆಮದ್ದುಗಳು  :
ತುಳಸಿ ಎಲೆ : 

ಖಾಲಿ ಹೊಟ್ಟೆಯಲ್ಲಿ ತಾಜಾ ತುಳಸಿ ಎಲೆಗಳನ್ನು ಅಗಿಯುವುದರಿಂದ  ಮೂತ್ರಪಿಂಡದ ಕಲ್ಲುಗಳ ನೋವಿನಿಂದ ಪರಿಹಾರ ಸಿಗುತ್ತದೆ. ಮಾತ್ರವಲ್ಲ ಕಲ್ಲುಗಳನ್ನು ಕರಗಿಸಲು ಕೂಡಾ ಇದು ಸಹಾಯ ಮಾಡುತ್ತದೆ. ಪ್ರತಿದಿನ 3-4 ತುಳಸಿ ಎಲೆಗಳನ್ನು ಚೆನ್ನಾಗಿ ಅಗಿದು ರಸ ಹೀರುವುದರಿಂದ ಕಿಡ್ನಿ ಸ್ಟೋನ್ ನಿಂದ ಪರಿಹಾರ ಸಿಗುತ್ತದೆ. 

ಹರಿವೆ ಸೊಪ್ಪು :
ಈ ಹಸಿರು ಸೊಪ್ಪು ಕಿಡ್ನಿ ಸ್ಟೋನ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಈ ಸೊಪ್ಪನ್ನು ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ನಿಧಾನವಾಗಿ ಕರಗಲು ಪ್ರಾರಂಭಿಸುತ್ತವೆ. ಇದು ನೋವು ಮತ್ತು ಅಸ್ವಸ್ಥತೆಯಿಂದ ಪರಿಹಾರ ನೀಡುತ್ತದೆ.

ಇದನ್ನೂ ಓದಿ : ಈ ತರಕಾರಿಯನ್ನು ದಿನಕ್ಕೊಮ್ಮೆ ಸೇವಿಸಿ ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುವುದು !ನಿತ್ಯ ಬಳಸುವ ತರಕಾರಿಯೇ ಇದು !

ಮೂತ್ರವರ್ಧಕ ಆಹಾರವನ್ನು ಸೇವಿಸಿ : 
ರಾಷ್ಟ್ರೀಯ ಮೂತ್ರಪಿಂಡ ಪ್ರತಿಷ್ಠಾನದ ಮಾರ್ಗಸೂಚಿಗಳ ಪ್ರಕಾರ, ದೇಹದಲ್ಲಿ ಹೆಚ್ಚು ಮೂತ್ರ ಉತ್ಪತ್ತಿಯಾಗುತ್ತದೆ, ಮೂತ್ರಪಿಂಡದ ಕಲ್ಲುಗಳಿಂದ ಪರಿಹಾರ ಪಡೆಯುವುದು ಸುಲಭ. ವಾಸ್ತವವಾಗಿ, ಮೂತ್ರಪಿಂಡದ ಕಲ್ಲುಗಳು ಕರಗಿ ಮೂತ್ರದ ಮೂಲಕ ದೇಹದಿಂದ ಹೊರಬರುತ್ತವೆ. ಇದಕಾಗಿ ದಿನಕ್ಕೆ 8-10 ಗ್ಲಾಸ್ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದಲ್ಲದೆ, ನಿಮ್ಮ ಆಹಾರದಲ್ಲಿ ಸಾಧ್ಯವಾದಷ್ಟು ದ್ರವವನ್ನು ಸೇರಿಸಿ. ಮೂತ್ರವರ್ಧಕ  ಆಹಾರವನ್ನು ಸಹ ಸೇವಿಸಿ. ಎಳನೀರು, ಮೊಸರು, ದ್ವಿದಳ ಧಾನ್ಯಗಳು ಮತ್ತು ಆರೋಗ್ಯಕರ ಬೀಜಗಳ ಜೊತೆಗೆ, ನೈಸರ್ಗಿಕ ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಗರಿಷ್ಠ ಪ್ರಮಾಣದಲ್ಲಿ ಸೇವಿಸಿ.ಇವೆಲ್ಲವನ್ನೂ ಸೇವಿಸುವುದರಿಂದ ದೇಹದಲ್ಲಿನ ಆಕ್ಸಲೇಟ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಪ್ರಮಾಣದ ಮೂತ್ರ ಉತ್ಪತ್ತಿಯಾಗುತ್ತದೆ.

ನಿಂಬೆ ನೀರು :
ಕೆಲವು ಅಧ್ಯಯನಗಳು ಮತ್ತು ಸಂಶೋಧನೆಗಳ ಪ್ರಕಾರ, ನಿಯಮಿತವಾಗಿ ನಿಂಬೆ ನೀರನ್ನು ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ನೀವು ಪ್ರತಿದಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯಬಹುದು.

ಇದನ್ನೂ ಓದಿ : ಈ ಆರೋಗ್ಯ ಸಮಸ್ಯೆ ಇರುವವರಿಗೆ ಒಣ ದ್ರಾಕ್ಷಿ ವಿಷಕ್ಕೆ ಸಮಾನ! ಇದನ್ನು ಯಾರು ತಿನ್ನಲೇ ಬಾರದು ಗೊತ್ತಾ? 

ಕಡಿಮೆ ಉಪ್ಪು ಸೇವಿಸಿ :
ದಿನನಿತ್ಯದ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಉಪ್ಪನ್ನು ಸೇರಿಸುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸಿ. ಕಡಿಮೆ ಉಪ್ಪು ತಿನ್ನುವುದರಿಂದ ಕಲ್ಲುಗಳ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

( ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಇದನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

Trending News