ರಾತ್ರಿ ಊಟವಾದ ಮೇಲೆ ಒಂದು ಚಮಚ ಈ ಕಾಳನ್ನು ಬಾಯಿಗೆ ಹಾಕಿ ಅಗಿಯಿರಿ!ಎರಡೇ ವಾರದಲ್ಲಿ 5 ಕೆಜಿ ತೂಕ ಕಡಿಮೆಯಾಗುವುದು !

ಅನಾರೋಗ್ಯಕರ ಆಹಾರ, ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಬೊಜ್ಜು ಅನೇಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ದೇಹದ ತೂಕವು ಬಹಳ ವೇಗವಾಗಿ ಹೆಚ್ಚಾಗುತ್ತಿದೆ. 

Written by - Ranjitha R K | Last Updated : Jun 18, 2025, 01:11 PM IST
  • ಬೆಳಿಗ್ಗೆ ಬಿಸಿ ನೀರು ಕುಡಿಯಿರಿ.
  • ಬೆಳಗ್ಗಿನ ಉಪಾಹಾರ ಸ್ಕಿಪ್ ಮಾಡಬೇಡಿ .
  • ಬೇಗ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
ರಾತ್ರಿ ಊಟವಾದ ಮೇಲೆ ಒಂದು ಚಮಚ ಈ ಕಾಳನ್ನು ಬಾಯಿಗೆ ಹಾಕಿ ಅಗಿಯಿರಿ!ಎರಡೇ ವಾರದಲ್ಲಿ  5 ಕೆಜಿ ತೂಕ ಕಡಿಮೆಯಾಗುವುದು !

ಬೆಂಗಳೂರು : ತೂಕ ಇಳಿಸಿಕೊಳ್ಳಲು ಅನೇಕ ಜನರು ವಿವಿಧ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಕೆಲವರು ಜಿಮ್‌ಗೆ ಹೋಗುತ್ತಾರೆ, ಕೆಲವರು ಕಟ್ಟುನಿಟ್ಟಿನ ಆಹಾರ ಪದ್ಧತಿ ಅನುಸರಿಸುತ್ತಾರೆ. ಆದರೆ ಎಲ್ಲರಿಗೂ ಇದರಿಂದ ನಿರೀಕ್ಷಿತ ರಿಸಲ್ಟ್ ಸಿಗುವುದಿಲ್ಲ. ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ಶಿಸ್ತನ್ನು ತಂದರೆ, ಅದರ ಸಕಾರಾತ್ಮಕ ಫಲಿತಾಂಶಗಳು 10 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ.

Add Zee News as a Preferred Source

ಶೀಘ್ರ ತೂಕ ಕಳೆದುಕೊಳ್ಳಬೇಕು ಎಂದಾದರೆ ಈ ವಿಧಾನಗಳನ್ನು ಅನುಸರಿಸಿ : 
ಬೆಳಿಗ್ಗೆ ಬಿಸಿ ನೀರು ಕುಡಿಯಿರಿ : 

ಬೆಳಿಗ್ಗೆ ಬಿಸಿ  ನೀರು ಕುಡಿಯುವುದರಿಂದ ತೂಕ ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ. ಬಿಸಿ ನೀರಿಗೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ತೂಕ ಬೇಗನೆ ಕಡಿಮೆಯಾಗುತ್ತದೆ. ಇದಲ್ಲದೆ, ಜೀರಿಗೆ ನೀರು ಕುಡಿಯುವುದು ಸಹ ಪ್ರಯೋಜನಕಾರಿಯಾಗಿದೆ.

ಬೆಳಗ್ಗಿನ ಉಪಾಹಾರವನ್ನು ಎಂದಿಗೂ ಬಿಡಬೇಡಿ:
ತೂಕ ಇಳಿಸಿಕೊಳ್ಳುವ ಭರದಲ್ಲಿ ಅನೇಕರು ಬೆಳಗ್ಗಿನ ಉಪಾಹಾರವನ್ನು ಬಿಟ್ಟುಬಿಡುತ್ತಾರೆ. ಆದರೆ ಇದು ಸರಿಯಾದ ಕ್ರಮ ಅಲ್ಲ. ಬೆಳಿಗ್ಗೆ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ಉಪಾಹಾರವನ್ನು ಸೇವಿಸುವುದು ಉತ್ತಮ. ಉಪಾಹಾರಕ್ಕಾಗಿ ಮೊಟ್ಟೆ, ಓಟ್ಸ್ ಮತ್ತು ಮೊಳಕೆಯೊಡೆದ ಕಾಳನ್ನು  ಸೇವಿಸಬೇಕು.

ಇದನ್ನೂ ಓದಿ : White Hair: ʻಈʼ ಪುಡಿಯನ್ನು ಮೊಸರಿನಲ್ಲಿ ಬೆರಸಿ ಕೂದಲಿಗೆ ಹಚ್ಚಿದರೆ.. 10 ನಿಮಿಷದಲ್ಲಿ ಬುಡದಿಂದಲೇ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು

ಮಧ್ಯಾಹ್ನದ ಊಟ :
ಮಧ್ಯಾಹ್ನದ ಊಟ ಪೌಷ್ಟಿಕವಾಗಿರಬೇಕು. ಇದಕ್ಕಾಗಿ ಲಘು ಆಹಾರವನ್ನು ಸೇವಿಸಿ. ಆದರೆ ನಿಮ್ಮ ಊಟದಲ್ಲಿ ಚಪಾತಿ /ಅಕ್ಕಿ, ಬೇಳೆ, ಹಸಿರು ತರಕಾರಿಗಳು ಮತ್ತು ಸಲಾಡ್  ಇರಲೇಬೇಕು. ಸಂಸ್ಕರಿಸಿದ ಆಹಾರಗಳಿಂದ ಸಾಧ್ಯವಾದಷ್ಟು ದೂರವಿರಿ.  

ರಾತ್ರಿ ಊಟಕ್ಕೆ ಏನು ತಿನ್ನಬೇಕು? :
ರಾತ್ರಿ ಊಟವನ್ನು ಬೇಗ ಮಾಡಿ ಮುಗಿಸುವ ಅಭ್ಯಾಸ ಇಟ್ಟುಕೊಳ್ಳಿ.  ರಾತ್ರಿ 8 ಗಂಟೆಯೊಳಗೆ ಊಟ ಮಾಡಿ ಮುಗಿಸಿದರೆ ಒಳ್ಳೆಯದು. ರಾತ್ರಿ ಲಘು ಆಹಾರ ಸೇವಿಸುವುದು ಉತ್ತಮ. ಬೇಯಿಸಿದ ತರಕಾರಿಗಳು, ಖಿಚಡಿ, ಸಲಾಡ್, ಸೂಪ್ ಮತ್ತು ಗಂಜಿ ತಿನ್ನಬಹುದು.

ಹೆಚ್ಚು ನೀರು ಕುಡಿಯಿರಿ :
ಇದೆಲ್ಲದರ ಜೊತೆಗೆ, ತೂಕ ಇಳಿಸಿಕೊಳ್ಳಲು ಹೆಚ್ಚು ನೀರು ಕುಡಿಯುವುದು ಮುಖ್ಯ . ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ನಿಮ್ಮ ದೇಹದಿಂದ ವಿಷವನ್ನು ವೇಗವಾಗಿ ಹೊರಹಾಕಲು ಸಹಾಯ ಮಾಡುತ್ತದೆ. ರಾತ್ರಿ ಊಟವಾದ ಮೇಲೆ ಒಂದು ಚಮಚ ಓಮ ಕಾಳನ್ನು ಬಾಯಿಗೆ ಹಾಕಿ ಅಗಿಯಿರಿ, ಅಥವಾ ಓಮ ಕಾಳಿನ ನೀರು ಕೂಡಾ ಕುಡಿಯಬಹುದು. ಗ್ರೀನ್ ಟೀ ಮತ್ತು ಎಳನೀರು ಕುಡಿಯುವುದರಿಂದಲೂ  ಬೇಗನೆ ತೂಕ ಇಳಿಸಿಕೊಳ್ಳಬಹುದು.  

ಇದನ್ನೂ ಓದಿ : ನಿತ್ಯ ಒಂದೇ ಒಂದು ಈ ಹಣ್ಣನ್ನು ಸೇವಿಸಿದರೆ ಮಂಜಾಗಿರುವ ದೃಷ್ಟಿ ಚುರುಕಾಗುವುದು !ಹಣ್ಣು ಹಣ್ಣು ಮುದುಕರಾಗುವವರೆಗೂ ಬರುವುದಿಲ್ಲ ಕನ್ನಡಕ್ಕ !

ಒಳ್ಳೆಯ ನಿದ್ರೆ ಅತ್ಯಗತ್ಯ : 
ಇದೆಲ್ಲಾದರ ಜೊತೆಗೆ ತೂಕ ಇಳಿಸಿಕೊಳ್ಳಲು ಸರಿಯಾಗಿ ನಿದ್ದೆ ಮಾಡುವುದು ಕೂಡಾ ಅತ್ಯಗತ್ಯ. ನಿರಂತರವಾಗಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದರಿಂದಲೂ ತೂಕ ಇಳಿಕೆಗೆ ಸಹಾಯವಾಗುವುದು.  

ಏನು ತಿನ್ನಬಾರದು : 
ಬೇಗನೆ ತೂಕ ಇಳಿಸಿಕೊಳ್ಳಲು ಬಯಸುವವರು ಸಕ್ಕರೆ, ಸಿಹಿತಿಂಡಿಗಳು, ಬೇಕರಿ ಉತ್ಪನ್ನಗಳು, ಪಿಜ್ಜಾ, ಬರ್ಗರ್‌ಗಳು ಮತ್ತು ತಂಪು ಪಾನೀಯಗಳಿಂದ ದೂರವಿರುವುದು ಉತ್ತಮ. ಸಾಧ್ಯವಾದಷ್ಟು ಅನ್ನ ಸೇವನೆಯನ್ನು ಕಡಿಮೆ ಮಾಡಿ. ಬದಳಿಗೆ ಹಸಿವಾದಾಗ ಹಣ್ಣುಗಳು, ಬೀಜಗಳು ಅಥವಾ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ಸೇವಿಸಬಹುದು.

(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

  

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News