ಬೆಂಗಳೂರು : ಹೆಣ್ಣಾಗಲಿ ಗಂಡಾಗಲಿ ತಲೆ ತುಂಬಾ ಕೂದಲು ಇರುವುದು ಎಲ್ಲರಿಗೂ ಇಷ್ಟ. ಹೀಗಿರುವಾಗ ಕೂದಲು ಉದುರಲು ಆರಂಭಿಸಿದರೆ ಅದು ಕೂದಲಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು, ಜನರು ಹೆಚ್ಚಾಗಿ ವಿವಿಧ ರೀತಿಯ ಚಿಕಿತ್ಸೆಗಳು ಮತ್ತು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ ಇದು ಅಡ್ಡ ಪರಿಣಾಮ ಬೀರುವ ಅಪಾಯ ಕೂಡಾ ಇರುತ್ತದೆ. ಕೂದಲನ್ನು ನೈಸರ್ಗಿಕ ರೀತಿಯಲ್ಲಿ ಬೆಳೆಸಬೇಕಾದರೆ ಈ ಎಣ್ಣೆಯಿಂದ ಕೂದಲ ಮಸಾಜ್ ಮಾಡಬೇಕು. ಕೇವಲ ಐದು ನಿಮಿಷಗಳ ಮಸಾಜ್ ಕೂದಲು ಉದುರುವ ಸಮಸ್ಯೆಯನ್ನು ಶಾಶ್ವತವಾಗಿ ನಿಲ್ಲಿಸುತ್ತದೆ.
ಕೂದಲು ಉದುರುವುದನ್ನು ತಡೆಯಲು ಎಣ್ಣೆ :
ಸಾಸಿವೆ ಎಣ್ಣೆ :
ಪ್ರಾಚೀನ ಕಾಲದಲ್ಲಿ, ಭಾರತೀಯ ಮನೆಗಳಲ್ಲಿ ಚರ್ಮ ಮತ್ತು ಕೂದಲಿಗೆ ಸಾಸಿವೆ ಎಣ್ಣೆಯನ್ನು ಹಚ್ಚಲಾಗುತ್ತಿತ್ತು. ಆದರೆ, ಕ್ರಮೇಣ ಜನರು ಸಾಸಿವೆ ಎಣ್ಣೆಯನ್ನು ದೂರ ಮಾಡುತ್ತಾ ಬಂದರು. ಆದರೆ ಸಾಸಿವೆ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ. ಸಾಸಿವೆ ಎಣ್ಣೆ ಕೂದಲನ್ನು ಬಲಪಡಿಸುತ್ತದೆ.ಕೂದಲು ಉದುರುವುದನ್ನು ತಡೆಯುತ್ತದೆ. ಇದಲ್ಲದೆ, ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ : ದುಬಾರಿ ಉತ್ಪನ್ನಗಳನ್ನು ಬಳಸದೆ ಹೊಳೆಯುವ ತ್ವಚೆಯನ್ನು ಪಡೆಯಲು ಈ ಸಲಹೆಗಳನ್ನು ಪಾಲಿಸಿ..!
ತೆಂಗಿನ ಎಣ್ಣೆ :
ತೆಂಗಿನ ಎಣ್ಣೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ.ತೆಂಗಿನ ಎಣ್ಣೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ನೆತ್ತಿಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆ ಕೂದಲಿಗೆ ಸಾಕಷ್ಟು ಪೋಷಣೆ ಮತ್ತು ತೇವಾಂಶವನ್ನು ಒದಗಿಸುತ್ತದೆ. ಇದು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ.
ನೆಲ್ಲಿಕಾಯಿ ಎಣ್ಣೆ :
ನೆಲ್ಲಿಕಾಯಿ ಎಣ್ಣೆ ಕೂದಲಿಗೆ ಸಾಕಷ್ಟು ಪೋಷಣೆಯನ್ನು ನೀಡುತ್ತದೆ.ಇದು ಕೂದಲನ್ನು ಬೇರುಗಳಿಂದ ಬಲಪಡಿಸುವ ಮೂಲಕ ಕೂದಲು ಉದುರುವುದನ್ನು ತಡೆಯುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ನೆತ್ತಿಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಬಾದಾಮಿ ಎಣ್ಣೆ :
ಬಾದಾಮಿ ಎಣ್ಣೆ ಚರ್ಮಕ್ಕೆ ಹಾಗೂ ಕೂದಲಿಗೆ ತುಂಬಾ ಪ್ರಯೋಜನಕಾರಿ. ಬಾದಾಮಿ ಎಣ್ಣೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಇದರಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ಇದು ಕೂದಲನ್ನು ಬೇರುಗಳಿಂದಲೇ ಬಲಪಡಿಸುತ್ತದೆ. ಬಾದಾಮಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ. ಬಾದಾಮಿ ಎಣ್ಣೆಯಲ್ಲಿರುವ ಪ್ರೋಟೀನ್ ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ.
ಇದನ್ನೂ ಓದಿ : ಪ್ರತಿದಿನ ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು..!
ಆಲಿವ್ ಎಣ್ಣೆ :
ಆಲಿವ್ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಆಲಿವ್ ಎಣ್ಣೆ ಕೂದಲಿಗೆ ಕೂಡಾ ಒಳ್ಳೆಯದು. ಆಲಿವ್ ಎಣ್ಣೆ ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ಈ ಎಣ್ಣೆಯಲ್ಲಿ ಕೂದಲಿಗೆ ಅಗತ್ಯವಾದ ವಿಟಮಿನ್ ಇ ಇದೆ. ಆಲಿವ್ ಎಣ್ಣೆ ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
ಮೇಲೆ ಹೇಳಿದ ಎಲ್ಲಾ ಎಣ್ಣೆ ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿಯೂ ಮಹತ್ತರ ಪಾತ್ರ ವಹಿಸುತ್ತದೆ. ಈ ಎನ್ನೆಯನು ನಿಯಮಿತವಾಗಿ ಹಚ್ಚುತ್ತಾ ಅಂದರೆ ಕೂದಲು ಬಿಳಿಯಾಗದಂತೆ ಕೂಡಾ ತಡೆಯುತ್ತದೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









