ನವದೆಹಲಿ : ಭಾರತೀಯ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕರಿಜೀರಿಗೆ (Black Cumin) ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಕರಿಜೀರಿಗೆಯನ್ನು ಮಂಗರೈಲ್ ಅಥವಾ ನಿಗೆಲ್ಲ ಸೈಟೈವಾ ಮತ್ತು ಕಪ್ಪು ಬೀಜ ಎಂದೂ ಕರೆಯುತ್ತಾರೆ. ಕರಿಜೀರಿಗೆಯನ್ನು ಮಸಾಲೆಯಾಗಿ ಬಳಸಲಾಗುತ್ತದೆ. ಇದು ಸಣ್ಣ ಕಪ್ಪು ಧಾನ್ಯವಾಗಿದೆ. ಕಲೋಂಜಿಯ ಸಣ್ಣ ಕಪ್ಪು ಧಾನ್ಯವಾಗಿದೆ. ಇದನ್ನು ಸಾಮಾನ್ಯವಾಗಿ ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೀಷಿಯಂ ಮತ್ತು ಸತುವಿನ ಅಂಶಗಳು ಇದರಲ್ಲಿ ಕಂಡುಬರುತ್ತವೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದನ್ನು ಮನೆಮದ್ದಾಗಿ ಬಳಸಲಾಗುತ್ತದೆ (Benefits of black cumin). ಇದನ್ನು ಸೇವಿಸುವುದರಿಂದ ಶೀತ-ಕೆಮ್ಮು ಇತ್ಯಾದಿ ಸಮಸ್ಯೆಗಳನ್ನು ತಪ್ಪಿಸಬಹುದು.
ಕರಿಜೀರಿಗೆಯ ಪ್ರಯೋಜನಗಳು:
1. ಶೀತ (Cold), ಕೆಮ್ಮು ಜ್ವರಕ್ಕೆ ಮನೆ ಮದ್ದು : ಶೀತ,ಕೆಮ್ಮಿಗೆ ಕರಿಜೀರಿಗೆ ಪ್ರಯೋಜನಕಾರಿಯಾಗಿದೆ. ನೆಗಡಿಯಿದ್ದಾಗ ಕರಿಜೀರಿಗೆ ಬೀಜಗಳನ್ನು ಬಿಸಿ ಮಾಡುವ ಮೂಲಕ ಅದರ ಸುಗಂಧವನ್ನು ತೆಗೆದುಕೊಳ್ಳುವ ಮೂಲಕ, ಶೀತ ಮತ್ತು ಜ್ವರದ (Fever) ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ : Food for Body Part: ದೇಹದ ಪ್ರತಿಯೊಂದು ಭಾಗಕ್ಕೂ ಅಗತ್ಯ ವಿಭಿನ್ನ ಆಹಾರ
2. ಹೃದಯದ ಸಮಸ್ಯೆಗೆ : ಕರಿ ಜೀರಿಗೆ ಅಥವಾ ಕಪ್ಪು ಜೀರಿಗೆ ಹೃದಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೃದಯದ ಸಮಸ್ಯೆಯಿಂದ (Heart disease) ಬಳಲುತ್ತಿರುವವರು, ಬಿಸಿ ನೀರು ಅಥವಾ ಚಹಾಕ್ಕೆ ಸೇರಿಸಿ, ಇದರ ಎಣ್ಣೆಯನ್ನು ಸೇರಿಸಿ ಕುಡಿಯುವುದರಿಂದ ಹೃದಯದ ಆರೋಗ್ಯವನ್ನು (Health) ಕಾಪಾಡಬಹುದು. ಅಂದರೆ, ಹೃದಯವನ್ನು ಆರೋಗ್ಯವಾಗಿಡಬಹುದು.
3. ತೂಕ ಇಳಿಕೆ : ಕರಿ ಜೀರಿಗೆಯನ್ನು ತೂಕ ನಷ್ಟಕ್ಕೂ ಬಳಸಲಾಗುತ್ತದೆ. ಜೇನುತುಪ್ಪ (Honey) ಮತ್ತು ಬಿಸಿನೀರಿನೊಂದಿಗೆ ಇದರ ಎಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ದೇಹದ ಕೊಬ್ಬು (Fat) ಕರಗುತ್ತದೆ. ಇದರಿಂದ ಸ್ಥೂಲಕಾಯದ ಸಮಸ್ಯೆಯನ್ನು ನಿವಾರಿಸಬಹುದು
4. ಚರ್ಮದ ಆರೋಗ್ಯಕ್ಕೆ : ಚರ್ಮ ಮತ್ತು ಮೊಡವೆಗಳ (Pimple) ಸಮಸ್ಯೆ ಇದ್ದರೆ, ಇದರ ಎಣ್ಣೆಯನ್ನು ನಿಂಬೆ ರಸದೊಂದಿಗೆ ಬೆರೆಸಿ ಹಚ್ಚಿದರೆ, ಚರ್ಮವು ಮೃದುವಾಗುತ್ತದೆ. ಮತ್ತು ಮೊಡವೆಯನ್ನು ಹೋಗಲಾಡಿಸಬಹುದು.
ಇದನ್ನೂ ಓದಿ : ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನಬೇಕು ಈ ಎಲೆಗಳನ್ನು ಚುರುಕಾಗಲಿದೆ ಮೆದುಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ