close

News WrapGet Handpicked Stories from our editors directly to your mailbox

ಕ್ಯಾಡ್ಬರಿ ಡೈರಿ ಮಿಲ್ಕ್‌ನಿಂದ ಸಕ್ಕರೆ ರೋಗಿಗಳಿಗಾಗಿ ವಿಶೇಷ ಚಾಕೊಲೇಟ್!

ಖ್ಯಾತ ಚಾಕೊಲೇಟ್ ಕಂಪನಿ ಮೊಂಡೆಲೆಜ್ ಇಂಟರ್‌ನ್ಯಾಷನಲ್ ಮಾರುಕಟ್ಟೆಯಲ್ಲಿ ಕಡಿಮೆ ಸಕ್ಕರೆ ಡೈರಿ ಮಿಲ್ಕ್ ಚಾಕೊಲೇಟ್ ಪರಿಚಯಿಸಿದೆ. 'ಕ್ಯಾಡ್ಬರಿ ಡೈರಿ ಮಿಲ್ಕ್ 30% ಲೆಸ್ ಶುಗರ್' ಸಾಮಾನ್ಯ ಡೈರಿ ಮಿಲ್ಕ್ ಚಾಕೊಲೇಟ್ ಗಿಂತ 30 ಪ್ರತಿಶತ ಕಡಿಮೆ ಸಕ್ಕರೆಯನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 

Updated: Sep 6, 2019 , 01:53 PM IST
ಕ್ಯಾಡ್ಬರಿ ಡೈರಿ ಮಿಲ್ಕ್‌ನಿಂದ ಸಕ್ಕರೆ ರೋಗಿಗಳಿಗಾಗಿ ವಿಶೇಷ ಚಾಕೊಲೇಟ್!

ನವದೆಹಲಿ: ಪ್ರಸಿದ್ಧ ಚಾಕೊಲೇಟ್ ಕಂಪನಿ ಮೊಂಡೆಲೆಜ್ ಇಂಟರ್ನ್ಯಾಷನಲ್ ಮಾರುಕಟ್ಟೆಯಲ್ಲಿ ಕಡಿಮೆ ಸಕ್ಕರೆ ಡೈರಿ ಮಿಲ್ಕ್ ಚಾಕೊಲೇಟ್ ಅನ್ನು ಪರಿಚಯಿಸಿದೆ. 'ಕ್ಯಾಡ್ಬರಿ ಡೈರಿ ಮಿಲ್ಕ್ 30% ಲೆಸ್ ಶುಗರ್' ಸಾಮಾನ್ಯ ಡೈರಿ ಮಿಲ್ಕ್ ಚಾಕೊಲೇಟ್ ಗಿಂತ 30 ಪ್ರತಿಶತ ಕಡಿಮೆ ಸಕ್ಕರೆಯನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಲ್ಲಿ ಯಾವುದೇ ಕೃತಕ ಸಿಹಿಕಾರಕಗಳು ಇರುವುದಿಲ್ಲ ಮತ್ತು ಅಸ್ತಿತ್ವದಲ್ಲಿರುವ ಡೈರಿ ಮಿಲ್ಕ್ ಉತ್ಪನ್ನಗಳಂತೆ ಇದು ಗ್ರಾಹಕರಿಗೆ ಆರಾಮವಾಗಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

"ಭಾರತದಲ್ಲಿ ಕ್ಯಾಡ್ಬರಿ ಡೈರಿ ಮಿಲ್ಕ್ ಸ್ವೀಕರಿಸಿರುವ ಪ್ರೀತಿಯನ್ನು ಗಮನಿಸಿದರೆ, ಈ ಉತ್ಪನ್ನವನ್ನು ಭಾರತದಲ್ಲಿ ಪರಿಚಯಿಸಲು ನಾವು ತುಂಬಾ ಸಂತೋಷಪಡುತ್ತೇವೆ" ಎಂದು ಮಾಂಡೆಲೆಜ್ ಭಾರತದ ಅಧ್ಯಕ್ಷ ದೀಪಕ್ ಅಯ್ಯರ್ ಹೇಳಿದ್ದಾರೆ.

ಕ್ಯಾಡ್ಬರಿ ಡೈರಿ ಮಿಲ್ಕ್‌ನ 30% ಕಡಿಮೆ ಸಕ್ಕರೆ ಚಾಕೊಲೇಟ್ ಭಾರತ ಮತ್ತು ಯುಕೆ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿನ ವಿಜ್ಞಾನಿಗಳು, ಪೌಷ್ಟಿಕತಜ್ಞರು ಮತ್ತು ಚಾಕೊಲೇಟ್ ತಜ್ಞರ ಸಮರ್ಪಿತ ತಂಡದ ಪ್ರಯತ್ನಗಳ ಫಲವಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.