Cancer: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಹೊಸ ಆವಿಷ್ಕಾರ ನಡೆಸಲಾಗಿದ್ದು ಇದರಲ್ಲಿ ಹಿಂದೆಂದು ನೋಡಿರದ, ಕೇಳಿರದ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ಒಂದು 'ಸೌತೆಕಾಯಿ' ಕ್ಯಾನ್ಸರ್ ಗುಣಪಡಿಸುವಲ್ಲಿ ಅದ್ಭುತ ಜಾದು ಮಾಡುತ್ತದೆ ಎಂದರು ತಪ್ಪಾಗುವುದಿಲ್ಲ. ಇದು ಆಶ್ಚರ್ಯಕರವೆನಿಸಿದರೂ ಸಹ ಸತ್ಯ...

Cancer Treatment: ಕ್ಯಾನ್ಸರ್ ರೋಗದ ಹರುಡುವಿಕೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ವಿಜ್ಞಾನಿಗಳು ಈ ಅಪಾಯಕಾರಿ ಖಾಯಿಲೆಗೆ ಪರಿಣಾಮಕಾರಿಯಾಗಿ ಪರಿಹಾರ ನೀಡಲು ಸಂಶೋದನೆಗಳನ್ನು ನಡೆಸುತ್ತಲೇ ಇದ್ದಾರೆ. ಅದೇ ರೀತಿ ಈ ಕ್ಯಾನ್ಸರ್ ಅನ್ನು ಗುಣಪಡಿಸಲು ನೀಡಬೇಕಾದ ಚಿಕಿತ್ಸೆ ಬಹಳ ವೆಚ್ಚದಾಯಕವಾಗಿದೆ. ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಇತ್ತೀಚಿಗೆ ಒಂದು ಸಂಶೋಧನೆಯನ್ನು ನಡೆಸಲಾಗಿದ್ದು ಇದರಲ್ಲಿ ಒಂದು ವಿಚಿತ್ರ ಸಂಗತಿ ಬೆಳಕಿಗೆ ಬಂದಿದ್ದು ಇದು ನಿಮಗೆ ಅಚ್ಚರಿಯುಂಟುಮಾಡುತ್ತದೆ. ಅದುವೇ, ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ಸೌತೆಕಾಯಿ ಮದ್ದು ಎಂಬ ಸಂಗತಿ.
ಹೌದು, ಇತ್ತೀಚಿಗೆ, ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಸಮುದ್ರ ಸೌತೆಕಾಯಿಯಲ್ಲಿ ಅಪರೂಪದ ಸಕ್ಕರೆಯನ್ನು ಕಂಡುಹಿಡಿದಿದೆ. ಇದು ಯಾವುದೇ ಅಪಾಯಕಾರಿ ಅಥವಾ ಅಡ್ಡಪರಿಣಾಮಗಳಿಲ್ಲದೆ ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ- ಬ್ಲಾಕ್ ಕಾಫಿ ಕುಡಿದರೆ ಸಿಗುವ ಬೊಂಬಾಟ್ ಪ್ರಯೋಜನಗಳಿವು
ಈ ಸಂಶೋದನೆಯ ಅನುಸಾರ ಗ್ಲೈಕೋಬಯಾಲಜಿ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಫ್ಯೂಕೋಸಿಲೇಟೆಡ್ ಕೊಂಡ್ರೊಯಿಟಿನ್ ಸಲ್ಫೇಟ್ ಎಂಬ ಸಂಯುಕ್ತವು ಸಮುದ್ರ ಸೌತೆಕಾಯಿ ಹೊಲೊಥುರಿಯಾ ಫ್ಲೋರಿಡಾನಾದಲ್ಲಿ ಕಂಡುಬರುತ್ತದೆ ಎಂದು ಹೇಳಲಾಗಿದೆ. ಇದು ಕ್ಯಾನ್ಸರ್ ನ ಅಪಾಯಕಾರಿ ಹರಡಲು ಸಹಕರಿಸುವ ಸಲ್ಫ್ -2 ಕಿಣ್ವವನ್ನು ನಿರ್ಬಂಧಿಸುತ್ತದೆ.
ವಿಜ್ಞಾನಿಗಳು ಹೇಳಿರುವ ಪ್ರಕಾರ, ಈ ಸಲ್ಫ್-2 ಒಂದು ಕಿಣ್ವವಾಗಿದ್ದು ಅದು ಕ್ಯಾನ್ಸರ್ ಕೋಶಗಳು ಬೆಳೆಯಲು ಮತ್ತು ಹರಡಲು ಕಾರಣವಾಗುತ್ತದೆ. ಆದರೆ, ಸಮುದ್ರ ಸೌತೆಕಾಯಿಯು ಸಲ್ಫ್-2 ನಿರ್ಬಂಧಿಸಿ ಕ್ಯಾನ್ಸರ್ ಗೆಡ್ಡೆಗಳು ಆರೋಗ್ಯಕರ ಅಂಗಾಂಶವನ್ನು ಆಕ್ರಮಿಸುವುದನ್ನು ನಿಲ್ಲಿಸುತ್ತವೆ.
ಈ ಸಮುದ್ರ ಸೌತೆಕಾಯಿಯಲ್ಲಿರುವ ಸಕ್ಕರೆಯು ರಕ್ತ ಹೆಪ್ಪುಗಟ್ಟುವಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಇದು ಮಾನವರು ಸೇವಿಸಲು ಸುರಕ್ಷಿತವಾಗಿದೆ. ಆದರೂ ಇದೊಂದೆ ಏಕಮಾತ್ರವಾಗಿ ಕ್ಯಾನ್ಸರ್ ಹೋಗಲಾಡಿಸಲು ಸಹಕರಿಸುವುದಿಲ್ಲ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಯೋಗಗಳನ್ನು ವಿಜ್ಞಾನಿಗಳು ಕೈಗೊಳ್ಳಲಿದ್ದಾರೆ. ಪ್ರಯೋಗಾಲಯದಲ್ಲಿ ಸಲ್ಫ್-2 ಗ್ಲೈಕನ್ ಎಂಬ ಸಂಯುಕ್ತವನ್ನು ರಾಸಾಯನಿಕವಾಗಿ ರಚಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ, ಸದ್ಯಕ್ಕೆ ಅದನ್ನು ವಿವಿಧ ಪ್ರಾಣಿಗಳ ಮೇಲೆ ಪರೀಕ್ಷಿಸಬಹುದಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.