ಕೆಮಿಕಲಾ, ನ್ಯಾಚುರಲ್ಲಾ?:ಮಾಗಿದ ಮಾವಿನ ರಹಸ್ಯ ತಿಳಿಯುವ ಸಿಂಪಲ್‌ ಟೆಸ್ಟ್‌! ಮನೆಯಲ್ಲಿಯೇ ಮಾಡಿ ನೋಡಿ !

ಮಾರುಕಟ್ಟೆಯಿಂದ ಮನೆಗೆ ತರುವ ಮಾವಿನ ಹಣ್ಣನ್ನು ಕೆಮಿಕಲ್ ಬಳಸಿ ಹಣ್ಣಾಗಿಸಲಾಗಿದೆಯಾ ಎನ್ನುವುದನ್ನು ಮನೆಯಲ್ಲಿಯೇ ನೋಡಬಹುದು. ಇದನ್ನು ಕೆಲವು ಟೆಸ್ಟ್ ಮಾಡುವ ಮೂಲಕ ಕಂಡುಕೊಳ್ಳಬಹುದು. 

Written by - Ranjitha R K | Last Updated : May 18, 2025, 11:36 AM IST
  • ಹೇಳಿ ಕೇಳಿ ಇದು ಮಾವಿನ ಹಣ್ಣಿನ ಸೀಸನ್.
  • ಮಾರುಕಟ್ಟೆಯಲ್ಲಿ ನಾನಾ ತಳಿಯ ಮಾವಿನ ಹಣ್ಣುಗಳು ನಮ್ಮನ್ನ ಆಕರ್ಷಿತ್ತಿರುತ್ತವೆ.
  • ತರಹೇವಾರಿ ಹಣ್ಣುಗಳನ್ನು ಮೆಲ್ಲುವ ಆಸೆಯಿಂದ ನಾಲಗೆಯಲ್ಲಿ ನೀರೂರುತ್ತೆ.
ಕೆಮಿಕಲಾ, ನ್ಯಾಚುರಲ್ಲಾ?:ಮಾಗಿದ ಮಾವಿನ ರಹಸ್ಯ ತಿಳಿಯುವ ಸಿಂಪಲ್‌ ಟೆಸ್ಟ್‌! ಮನೆಯಲ್ಲಿಯೇ ಮಾಡಿ ನೋಡಿ !

ಬೆಂಗಳೂರು : ಹೇಳಿ ಕೇಳಿ ಇದು ಮಾವಿನ ಹಣ್ಣಿನ ಸೀಸನ್. ಮಾರುಕಟ್ಟೆಯಲ್ಲಿ ನಾನಾ ತಳಿಯ ಮಾವಿನ ಹಣ್ಣುಗಳು ನಮ್ಮನ್ನ ಆಕರ್ಷಿತ್ತಿರುತ್ತವೆ.ತರಹೇವಾರಿ ಹಣ್ಣುಗಳನ್ನು ಮೆಲ್ಲುವ ಆಸೆಯಿಂದ ನಾಲಗೆಯಲ್ಲಿ ನೀರೂರುತ್ತೆ. ಜೊತೆಗೆ ನಿಮಗೊಂದು ಅತಂಕವೂ ಎದುರಾಗಬಹುದು. ಮಾವು ನೋಡಲು ಚೆನ್ನಾಗಿವೆ. ತಿನ್ನಲೂ ಸುರಕ್ಷಿತವೇ? ಎಂಬ ಪ್ರಶ್ನೆ ದಿಢೀರ್‌ ಎದುರಾಗುತ್ತದೆ. ಯಾಕಂದರೆ, ಮಾರುಕಟ್ಟೆಯಲ್ಲಿರುವ ಬಹಳಷ್ಟು ಮಾವಿನ ಹಣ್ಣಗಳನ್ನು ಕೆಮಿಕಲ್‌ ಬಳಸಿ ಹಣ್ಣು ಮಾಡಿರುವ ಸಾಧ್ಯತೆಗಳಿರುತ್ತವೆ. ಇದನ್ನು ತಿಂದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. 

ಹಾಗಾದರೆ, ಮಾರುಕಟ್ಟೆಯಲ್ಲಿರುವ ಹಣ್ಣುಗಳನ್ನು  ಕೆಮಿಕಲ್‌ ಬಳಸಿ ಹಣ್ಣು ಮಾಡಿದ್ದಾರಾ, ಅಥವಾ ನೈಸರ್ಗಿಕವಾಗಿ ಹಣ್ಣು ಮಾಡಿದ್ದಾರಾ ಎಂದು ತಿಳಿಯುವುದು ಹೇಗೆ. ನೈಸರ್ಗಿಕವಾಗಿ ಹಣ್ಣು ಮಾಡಿದ್ದಾರೆ ಎಂದು ಗೊತ್ತಾಗುವುದು ಹೇಗೆ? ಇಲ್ಲಿದೆ ಕೆಲವು ಸಿಂಪಲ್‌ ಟಿಪ್ಸ್‌.

ಇದನ್ನೂ ಓದಿ : ನಿಮಗೆ ಹೀಗಾಗುತ್ತಿದ್ದರೆ ಕಿಡ್ನಿ ಆರೋಗ್ಯ ಕೆಡುತ್ತಿದೆ ಎಂದರ್ಥ!ದೇಹ ನೀಡುವ ಸೂಚನೆಯನ್ನು ನಿರ್ಲಕ್ಷಿಸದಿರಿ

ಟಿಪ್ಸ್‌ ೧: ಮಾವಿನ ಹಣ್ಣಿನ ಸಿಪ್ಪೆಯನ್ನು ಗಮನವಿಟ್ಟು ನೋಡಿ. ಅದರಲ್ಲಿ ಬಣ್ಣ ಒಂದೇ ಸಮದಲ್ಲಿ ಹರಡಿದ್ದರೆ, ಅದು ನೈಸರ್ಗಿಕವಾಗಿ ಮಾಗಿರಬಹುದು. ಒಂದು ವೇಳೆ ಅದರಲ್ಲಿ ಸಣ್ಣ ಸಣ್ಣ ಕಲೆಗಳಿದ್ದರೆ ಎಚ್ಚರವಹಿಸುವುದು ಉತ್ತಮ.

ಟಿಪ್ಸ್‌೨: ಒತ್ತಡದ ಟೆಸ್ಟ್‌: ನೈಸರ್ಗಿಕವಾಗಿ ಹಣ್ಣಾದ ಮಾವು ಗಟ್ಟಿಯಾಗಿರುತ್ತದೆ. ಅದರ ತಿರುಳು ಎಲ್ಲಾ ಕಡೆ ಸಮಾನವಾಗಿ ಗಟ್ಟಿಯಾಗಿರುತ್ತದೆ. ಆದರೆ, ಮಾವಿನ ಹಣ್ಣು ತುಂಬಾ ಸಾಫ್ಟ್‌ ಇದ್ದರೆ, ಕೆಲವು ಕಡೆ ಮಾತ್ರ ಗಟ್ಟಿ, ಇನ್ನು ಕೆಲವೆಡೆ ಸಾಫ್ಟ್‌ ಇದ್ದರೆ, ಸ್ವಲ್ಪ ನೋಡಿ ಖರೀದಿ ಮಾಡಿ. 

ಟಿಪ್ಸ್‌ ೩: ನೀರಿನ ಟೆಸ್ಟ್‌: ಇದು ಅತಿ ಮುಖ್ಯ ಪರೀಕ್ಷೆ. ಮಾವಿನ ಹಣ್ಣನ್ನು ಒಂದು ನೀರಿನ ಜಾರಿಗೆ ಹಾಕಿ ನೋಡಿ.ಅದು ಮುಳುಗಿದರೆ, ನಿಮ್ಮ ಊಹೆ ಸರಿ. ಅದು ನೈಸರ್ಗಿಕವಾಗಿ ಮಾಗಿದ ಹಣ್ಣು. ಅದರಲ್ಲಿ ತಿರುಳು ಧಾರಾಳವಾಗಿರುತ್ತದೆ. ಹಾಗಾಗಿ, ನ್ಯಾಚುರಲ್ಲಾಗಿ ಮಾಗಿದ ಹಣ್ಣು ಜಾರಿನ ನೀರಿನಲ್ಲಿ ಮುಳುಗುತ್ತದೆ. ಕೆಮಿಕಲ್‌ ಹಾಕಿ ಹಣ್ಣಾದ ಹಣ್ಣು, ಜಾರಿನ ನೀರಲ್ಲಿ ತೇಲುತ್ತದೆ. ಯಾಕಂದರೆ , ಅದರಲ್ಲಿ ತಿರುಳು ಕಡಿಮೆ ಇರುತ್ತದೆ. ಗಾಳಿ ಹೆಚ್ಚಿಗೆ ಇರುತ್ತದೆ. ಈ ಸಿಂಪಲ್‌ ಟ್ರಿಕ್ಸ್‌ ನಿಂದ ಮಾವು ತಿನ್ನಲು ಎಷ್ಟು ಸುರಕ್ಷಿತ ಎನ್ನುವುದನ್ನು ನೀವು ಪತ್ತೆ ಮಾಡಬಹುದು. 

ಇದನ್ನೂ ಓದಿ : ಮಹಿಳೆಯರಲ್ಲಿ ಮಧುಮೇಹದ ಆರಂಭಿಕ ಲಕ್ಷಣಗಳು ಪುರುಷರಿಗಿಂತ ವಿಭಿನ್ನ! ಈ ರೀತಿಯ ಬದಲಾವಣೆ ಕಂಡರೆ ಕೂಡಲೇ ವೈದ್ಯರ ಬಳಿ ತೆರಳಿ

ಈ ಎಲ್ಲಾ ಟೆಸ್ಟ್‌ಗಳನ್ನು ಮನೆಯಲ್ಲೇ ಮಾಡಬಹುದು. ಆದರೆ, ಇದು ಫೈನಲ್‌ ಅಥವಾ ಅಧಿಕೃತ ಟೆಸ್ಟ್‌ ಅಲ್ಲ. ಒಂದು ಗಮನದಲ್ಲಿರಲಿ, ಮಾವಿನ ಹಣ್ಣಿಗೆ ಕೆಮಿಕಲ್‌ ಬಳಸಿದ್ದಾರಾ ಇಲ್ಲವಾ ಎಂದು ಗೊತ್ತಾಗೋದು ಅಧಿಕೃತ ಲ್ಯಾಬ್‌ ಟೆಸ್ಟ್‌ ಫಲಿತಾಂಶದಲ್ಲಿ ಮಾತ್ರ. ಇವೆಲ್ಲಾ ಟೆಸ್ಟ್‌ಗಳು ಕೇವಲ ನಿಮ್ಮ ಸಾಮಾನ್ಯ ಜಾಣ್ಮೆಗೆ ಮಾತ್ರ!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

(ಸೂಚನೆ : ಈಲೇಖನವನ್ನು ಸಾಮಾನ್ಯ  ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ  ಇದನ್ನು ಅನುಮೊದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Trending News