ದಿನನಿತ್ಯ ಹಲ್ಲುಜ್ಜುತ್ತಿದ್ದರೂ ಬಾಯಿಯಿಂದ ದುರ್ವಾಸನೆ ಬರುತ್ತದೆ. ಇದು ಕೆಲವರನ್ನು ಅತಿಯಾಗಿ ಕಾಡುವ ಸಮಸ್ಯೆಯಾಗಿದೆ. ಅನೇಕ ಬಾರಿ ಬಾಯಿಯ ದರ್ವಾಸ‌ನೆಯಿಂದಾಗಿ ಎದುರಿಗಿರುವ ವ್ಯಕ್ತಿಯೇ ನಿಮ್ಮಿಂದ ದೂರವಿರುತ್ತಾರೆ. ಇದರಿಂದ ಹಲವೆಡೆ ಮುಜುಗರ ಅನುಭವಿಸಬೇಕಾಗುತ್ತದೆ. ಬ್ರಷ್‌ ಮಾಡಿದ ಬಳಿಕವೂ ನಿಮ್ಮ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಈ 5 ಮನೆಮದ್ದುಗಳನ್ನು ಅಳವಡಿಸಿಕೊಳ್ಳಿ. 


COMMERCIAL BREAK
SCROLL TO CONTINUE READING

ಸಾಕಷ್ಟು ನೀರು ಕುಡಿಯಿರಿ:


ಪ್ರತಿನಿತ್ಯ ಹಲ್ಲುಜ್ಜಿದ ನಂತರವೂ ಅನೇಕರಿಗೆ ಬಾಯಿ ದುರ್ವಾಸನೆ ಬರಲು ಪ್ರಾರಂಭಿಸುತ್ತದೆ. ಇದನ್ನು ಹೋಗಲಾಡಿಸಲು ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು. ನೀರು ಕುಡಿಯುವುದರಿಂದ ಬಾಯಿ ದುರ್ವಾಸನೆಯಿಂದ ಮುಕ್ತಿ ಪಡೆಯಬಹುದು.


ಲವಂಗವನ್ನು ಅಗಿಯಿರಿ: 


ಬೆಳಿಗ್ಗೆ ಎದ್ದ ಬಳಿಕ ಬ್ರಷ್‌ ಮಾಡಿ ಬಳಿಕ ಲವಂಗವನ್ನು ಅಗಿಯಿರಿ. ಇದು ಬಾಯಿಯ ದುರ್ವಾಸನೆಯನ್ನೂ ಹೋಗಲಾಡಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಜಗಿಯುವುದರಿಂದ ಬ್ಲಡ್‌ ಶುಗರ್‌ ಕೂಡ ಹೆಚ್ಚಾಗುವುದಿಲ್ಲ. 


ಇದನ್ನೂ ಓದಿ: ಮುಖದಲ್ಲಿ ಈ 6 ಬದಲಾವಣೆ ಕಂಡರೆ.. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ!


ತೆಂಗಿನ ಎಣ್ಣೆ:


ತೆಂಗಿನ ಎಣ್ಣೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಸ್ವಲ್ಪ ಸಮಯದವರೆಗೆ ಅದನ್ನು ಬಾಯಿಯಲ್ಲಿ ಇಟ್ಟುಕೊಂಡ ನಂತರ ಅದನ್ನು ತೊಳೆಯಿರಿ. ಇದು ವಾಸನೆಯನ್ನು ಮಾಯವಾಗಿಸುತ್ತದೆ.


ಸಾಸಿವೆ ಎಣ್ಣೆ:


ಸಾಸಿವೆ ಎಣ್ಣೆಗೆ ಉಪ್ಪನ್ನು ಬೆರೆಸಿ ಒಸಡುಗಳನ್ನು ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಬಾಯಿಯ ದುರ್ವಾಸನೆಯೂ ನಿಲ್ಲುತ್ತದೆ. ನಿಮ್ಮ ಹಲ್ಲುಗಳು ಸಹ ಹೊಳೆಯುತ್ತವೆ. 


ಪುದೀನ ಎಲೆಗಳು:


ಪುದೀನ ಎಲೆಗಳನ್ನು ಅಗಿಯಬೇಕು. ಇದರಿಂದ ಬಾಯಿ ತುಂಬಾ ತಂಪಾಗಿರುತ್ತದೆ ಮತ್ತು ಕೆಟ್ಟ ವಾಸನೆಯ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತದೆ.


ಇದನ್ನೂ ಓದಿ: ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿದ ಯುರಿಕ್‌ ಆಸಿಡ್‌ ಕರಗಿ ಹೋಗಿ, ಕಿಡ್ನಿ ಸ್ಟೋನ್‌ ಸಹ ಪುಡಿಯಾಗುವುದು!


 ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.