)
coconut oil benefits: ಇತ್ತೀಚಿನ ದಿನಗಳಲ್ಲಿ ಅಧಿಕ ತೂಕ ಇರುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಈ ಅಧಿಕ ತೂಕ ಅನಗತ್ಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ವೈದ್ಯರು ತೂಕ ಹೆಚ್ಚಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳುತ್ತಾರೆ. ಅದರೆ ತೂಕ ಹೆಚ್ಚಾದ ನಂತರ ಅದನ್ನು ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ನೀವು ತುಂಬಾ ಶ್ರಮಿಸಬೇಕಾಗುತ್ತದೆ. ಆದ್ದರಿಂದ ಈ ಒಂದು ಮಾರ್ಗವನ್ನು ನೀವು ಪಾಲಿಸಿದರೇ ಸಾಕು ಸುಲಭವಾಗಿ ದೇಹದ ಹೆಚ್ಚುವರಿ ಬೊಜ್ಜನ್ನು ಕರಗಿಸಬಹುದು. ಇನ್ನು ದೇಹದ ತೂಕ ಇಳಿಸಿಕೊಳ್ಳಲು ಈ ಒಂದು ಎಣ್ಣೆಯನ್ನು ಬಳುಸುವುದು ಇನ್ನೂ ಉತ್ತಮ. ಈ ಎಣ್ಣೆಯನ್ನು ಸಾಮಾನ್ಯವಾಗಿ ತಲೆಕೂದಲಿಗೆ ಬಳಸಲಾಗುತ್ತದೆ. ಆದರೆ ಇದು ಕೇಶಆರೈಕೆ ಮಾಡುವುದಷ್ಟೇ ಅಲ್ಲ ಇದು ನಿಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹ ಸಹಕಾರಿಯಾಗಿದೆ. ಈ ವಿಶೇಷ ಎಣ್ಣೆ ಯಾವುದೆಂದರೆ ಅದುವೇ ತೆಂಗಿನೆಣ್ಣೆ.
ತೆಂಗಿನೆಣ್ಣೆ ದೇಹತೂಕವನ್ನು ಕಡಿಮೆ ಮಾಡಲು ಹೇಗೆ ಸಹಕರಿಸುತ್ತದೆ
ಸುಲಭವಾಗಿ ಜೀರ್ಣವಾಗುತ್ತದೆ
ತೆಂಗಿನ ಎಣ್ಣೆ ಕೂದಲಿಗೆ ಮಾತ್ರವಲ್ಲದೆ ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ತೆಂಗಿನ ಎಣ್ಣೆ ಇತರ ಎಣ್ಣೆಗಳಿಗಿಂತ ಸುಲಭವಾಗಿ ಜೀರ್ಣವಾಗುತ್ತದೆ. ಇದು ನಿಮ್ಮ ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಈ ಎಣ್ಣೆ ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಹಾರ್ಮೋನುಗಳ ಸಮತೋಲನ
ಕೆಲವರಿಗೆ ಹಾರ್ಮೋನುಗಳ ಅಸಮತೋಲನದಿಂದಾಗಿ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹಾರ್ಮೋನುಗಳು ಸಮತೋಲನದಲ್ಲಿದ್ದರೆ, ತೂಕ ಹೆಚ್ಚಾಗುವ ಸಾಧ್ಯತೆ ತುಂಬಾ ಕಡಿಮೆ. ತೆಂಗಿನ ಎಣ್ಣೆ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯಲ್ಲಿ ಪಾಲಿಫಿನಾಲ್ಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವು ನಮ್ಮ ದೇಹದಲ್ಲಿನ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ.
ಸಕ್ಕರೆ ಸಮತೋಲನ
ತೆಂಗಿನ ಎಣ್ಣೆ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ, ಹೆಚ್ಚಾಗುವುದೂ ಇಲ್ಲ ಕಡಿಮೆಯಾಗುವುದೂ ಇಲ್ಲ. ಇದು ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹ ಸಹಾಯ ಮಾಡುತ್ತದೆ. ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ತೂಕ ಇಳಿಸಿಕೊಳ್ಳಲು ನೀವು ಚಹಾದೊಂದಿಗೆ ತೆಂಗಿನ ಎಣ್ಣೆಯನ್ನು ಬೆರೆಸಿ ಕುಡಿಯಬಹುದು. ಅಥವಾ ಒಂದು ಚಮಚ ತೆಂಗಿನ ಎಣ್ಣೆಯನ್ನು ಚಹಾ ಅಥವಾ ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಬಹುದು. ನೀವು ಪ್ರತಿದಿನ ಬೆಳಿಗ್ಗೆ ಇದನ್ನು ಕುಡಿದರೆ, ಸುಲಬವಾಗಿ ತೂಕ ಇಳಿಸಿಕೊಳ್ಳಬಹುದು.
ಮಾಂಸದೊಂದಿಗೆ ಬಳಸಬಹುದು
ತೂಕ ಇಳಿಸಿಕೊಳ್ಳಲು ನೀವು ಮಾಂಸಾಹಾರಿ ಆಹಾರದಲ್ಲಿ ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು. ಇದಕ್ಕಾಗಿ, ಮೊದಲು ನೀವು ಮಾಂಸಕ್ಕೆ ಎಲ್ಲಾ ಮಸಾಲೆಗಳನ್ನು ಸೇರಿಸಬೇಕು. ಅಡುಗೆ ಮಾಡುವ ಮೊದಲು, ನೀವು ಈ ಮಾಂಸದ ಮೇಲೆ ತೆಂಗಿನ ಎಣ್ಣೆಯನ್ನು ಹಚ್ಚಬೇಕು. ಈ ತೆಂಗಿನ ಎಣ್ಣೆಯಿಂದ ಬೇಯಿಸಿದ ಮಾಂಸವನ್ನು ನೀವು ಸೇವಿಸಿದರೆ, ನಿಮ್ಮ ದೇಹದಲ್ಲಿನ ಹೆಚ್ಚುವರಿ ಕೊಬ್ಬು ಕಡಿಮೆಯಾಗುತ್ತದೆ.