Weight Loss Drink: ಬಿರು ಬೇಸಿಗೆಯಲ್ಲಿ ದಾಹ ನೀಗಿಸುವ ಅಮೃತ 'ಎಳನೀರು'. ನ್ಯಾಚುರಲ್ ಕೂಲ್ ಡ್ರಿಂಕ್ ಎಂತಲೇ ಕರೆಯಲ್ಪಡುವ ಎಳನೀರು ಕೇವಲ ಹೊಟ್ಟೆ ತಣ್ಣಗಾಗಿಸುವುದಷ್ಟೇ ಅಲ್ಲ ಆರೋಗ್ಯಕರವಾಗಿ ತೂಕ ನಿರ್ವಹಣೆಗೂ ಲಾಭದಾಯಕವಾಗಿದೆ.

Natural Weight Loss Drink: ಬೇಸಿಗೆಯಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಹಲವು ಅತ್ಯದ್ಭುತವಾದ ಪ್ರಯೋಜನಗಳನ್ನು ಒದಗಿಸುತ್ತದೆ. ಎಲೆಕ್ಟ್ರೋಲೈಟ್ಗಳ ನೈಸರ್ಗಿಕ ಮೂಲವಾಗಿರುವ ಎಳನೀರಿನಲ್ಲಿ ಕ್ಯಾಲೋರಿ ಕಡಿಮೆ ಇರುವುದರ ಜೊತೆಗೆ ಹೇರಳವಾದ ಪೋಷಕಾಂಶಗಳು ಕಂಡು ಬರುವುದರಿಂದ ಡೊಳ್ಳು ಹೊಟ್ಟೆಯನ್ನು ಕರಗಿಸಿ, ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಈ ನೈಸರ್ಗಿಕ ಪಾನೀಯ ನೆರವಾಗುತ್ತದೆ.
ಈ ವರ್ಷ ನಿಗದಿತ ಸಮಯಕ್ಕಿಂತಲೂ ಮೊದಲೇ ಬೇಸಿಗೆ ಆರಂಭವಾಗಿದೆ. ಮಾತ್ರವಲ್ಲ, ತಾಪಮಾನ ದಿನೇ ದಿನೇ ಹೊಸ ದಾಖಲೆಯನ್ನೇ ಸೃಷ್ಟಿಸುತ್ತಿದೆ. ಈ ಸಂದರ್ಭದಲ್ಲಿ ನಿರಂತರವಾದ ಬೆವರುವಿಕೆಯಿಂದಾಗಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುತ್ತದೆ. ಇದು ನಿರ್ಜಲೀಕರಣದಂತಹ ಸಮಸ್ಯೆಗೂ ಕಾರಣವಾಗಬಹುದು. ಆದರೆ, ನೈಸರ್ಗಿಕ ತಂಪು ಪಾನೀಯವಾದ 'ಎಳನೀರು' ಸೇವನೆಯಿಂದ ಈ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಮಾತ್ರವಲ್ಲ, ಬೇಸಿಗೆಯಲ್ಲಿ ದಾಹ ನೀಗಿಸುವ ಎಳನೀರು ಬಲೂನ್ ನಂತೆ ಊದಿರುವ ಹೊಟ್ಟೆಯ ಸುತ್ತಲೂ ಶೇಖರವಾಗಿರುವ ಕೊಲೆಸ್ಟ್ರಾಲ್ ಕರಗಿಸಿ, ಚಪ್ಪಟೆ ಹೊಟ್ಟೆಯನ್ನು ಪಡೆಯಲು ಕೂಡ ಸಹಕಾರಿ ಆಗಿದೆ.
ವಾಸ್ತವವಾಗಿ ಬೇಸಿಗೆಯಲ್ಲಿ ಚಯಾಪಚಯ ಅಧಿಕವಾಗಿರುತ್ತದೆ. ಹಾಗಾಗಿ, ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಹಸಿವು ಕಡಿಮೆ ಇರುತ್ತದೆ. ಇದರೊಂದಿಗೆ ನೀರಿನ ಅಂಶ ಹೆಚ್ಚಿರುವ ಹಣ್ಣು ತರಕಾರಿಗಳ ಬಳಕೆಯಿಂದ ದೇಹದಲ್ಲಿ ಅಧಿಕ ಕೊಬ್ಬಿನಾಂಶವನ್ನು ವೇಗವಾಗಿ ಸುಡಬಹುದು. ಎಳನೀರು ಸ್ವಾಭಾವಿಕವಾಗಿ ಕಡಿಮೆ ಕ್ಯಾಲೋರಿ ಹೊಂದಿರುವ, ಇದೇ ವೇಳೆ ದೇಹವನ್ನು ಹೈಡ್ರೀಕರಿಸುವ ಅತ್ಯುತ್ತಮ ಪಾನೀಯವಾಗಿದೆ. ಇದು ಚಯಾಪಚಯವನ್ನು ಹೆಚ್ಚಿಸಲೂ ಸಹಕಾರಿ ಆದ್ದರಿಂದ ನೇರವಾಗಿ ತೂಕ ನಷ್ಟಕ್ಕೂ ಕೊಡುಗೆ ನೀಡುತ್ತದೆ.
ತೂಕ ಇಳಿಕೆಗೆ ಎಳನೀರು ಸೇವನೆ ಅತ್ಯುತ್ತಮ ಹೇಗೆ?
ನೈಸರ್ಗಿಕ ಕೂಲ್ ಡ್ರಿಂಕ್ ಆಗಿರುವ ಎಳನೀರು ತೂಕ ಇಳಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಹೇಗೆ ಆರೋಗ್ಯಕರ ತೂಕ ಇಳಿಕೆಗೆ, ಹೊಟ್ಟೆ ಕೊಬ್ಬನ್ನು ಕರಗಿಸಲು ಎಂದು ನೆರವಾಗುತ್ತದೆ ಎಂದು ನೋಡುವುದಾದರೆ...
ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಎಳನೀರಿನಲ್ಲಿ ನೈಸರ್ಗಿಕ ಎಲೆಕ್ಟ್ರೋಲೈಟ್ ಅಧಿಕ ಪ್ರಮಾಣದಲ್ಲಿದ್ದು ಇದು ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಜೊತೆಗೆ ಚಯಾಪಚಯವನ್ನು ಹೆಚ್ಚಿಸಿ, ಹಸಿವನ್ನೂ ನಿಗ್ರಹಿಸುತ್ತದೆ.
ಕಡಿಮೆ ಕ್ಯಾಲೋರಿ:
ಇತರ ತಂಪು ಪಾನೀಯಗಳಿಗೆ ಹೋಲಿಸಿದರೆ ಎಳನೀರಿನಲ್ಲಿ ಕ್ಯಾಲೋರಿ ಕಡಿಮೆ ಇದ್ದು, ಇದು ದೇಹವನ್ನು ತಂಪಾಗಿಸುವುದರ ಜೊತೆಗೆ ಅನಗತ್ಯ ಆಹಾರ ಸೇವನೆಯನ್ನು ಸಹ ತಪ್ಪಿಸುತ್ತದೆ. ಪ್ರತಿದಿನ ಒಂದು ಎಳನೀರು ಕುಡಿಯುವುದರಿಂದ ಶೀಘ್ರದಲ್ಲೇ ತೂಕ ಇಳಿಕೆಯಾಗುತ್ತದೆ.
ಪೋಷಕಾಂಶಗಳ ಭರಿತ ಪಾನೀಯ:
ನೈಸರ್ಗಿಕ ಕೂಲ್ ಡ್ರಿಂಕ್ ಎನ್ನಲಾಗುವ ಎಳನೀರು ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಗಳನ್ನು ಒಳಗೊಂಡಿರುವುದರಿಂದ ಇದು ಚಯಾಪಚಯವನ್ನು ವೃದ್ಧಿಸಿ ಆರೋಗ್ಯಕರ ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ,.
ಹಸಿವನ್ನು ಕಡಿಮೆ ಮಾಡುತ್ತದೆ:
ಕಡಿಮೆ ಕ್ಯಾಲೋರಿ ಹೊಂದಿರುವ ಎಳನೀರನ್ನು ಊಟಕ್ಕೂ ಅರ್ಧಗಂಟೆ ಮೊದಲು ಕುಡಿಯುವುದರಿಂದ ಇದು ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಅತಿಯಾದ ಆಹಾರ ಸೇವನೆಯನ್ನು ನಿಯಂತ್ರಿಸುತ್ತದೆ. ಪರೋಕ್ಷವಾಗಿ ತೂಕ ಇಳಿಕೆಗೂ ಸಹಕಾರಿ ಆಗುತ್ತದೆ.
ದೈಹಿಕ ಕಾರ್ಯಕ್ಷಮತೆ:
ವಾಕ್, ವ್ಯಾಯಾಮ, ದೈಹಿಕ ಚಟುವಟಿಕೆಗಳಿಂದ ಉಂಟಾಗುವ ನಿರ್ಜಲೀಕರಣವನ್ನು ತಪ್ಪಿಸಲು ಎಳನೀರು ಸಹಕಾರಿ ಆಗಿದೆ. ಎಳನೀರು ನೈಸರ್ಗಿಕ ಎಲೆಕ್ಟ್ರೋಲೈಟ್ ಮೂಲವಾಗಿರುವುದರಿಂದ ಇದು ದೇಹದಲ್ಲಿ ನೀರಿನಾಂಶ ಕೊರತೆಯಾಗದಂತೆ ನಿಗಾವಹಿಸುತ್ತದೆ.
ಒಟ್ಟಾರೆಯಾಗಿ ದಿನಕ್ಕೆ ಒಂದು ಎಳನೀರು ಕುಡಿಯುವುದರಿಂದ ಇದು ತೂಕ ಇಳಿಕೆ, ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.
ಬೇಸಿಗೆಯಲ್ಲಿ ತೂಕ ಇಳಿಯಲು ಎಳನೀರು ಸೇವನೆ ಅತ್ಯುತ್ತಮ. ಆದರೆಊ, ಇದರೊಂದಿಗೆ ಸಮತೋಲಿತ ಆಹಾರ ಸೇವನೆ ಹಾಗೂ ಲಘು ವ್ಯಾಯಾಮಗಳಿಗೂ ಗಮನ ನೀಡಿದರೆ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ತೂಕ ಇಳಿಕೆ ಸಾಧ್ಯವಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.