Coconut Water: ಎಳನೀರಿನ ಸೇವನೆಯಿಂದ ಸಿಗುವ ಅದ್ಭುತ ಪ್ರಯೋಜನಗಳಿವು

Coconut Water: ಎಳನೀರು ಸೇವನೆಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ವಾರಕ್ಕೊಮ್ಮೆ ಆದರೂ ಎಳನೀರನ್ನು ಕುಡಿಯುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

Written by - Yashaswini V | Last Updated : May 25, 2022, 01:37 PM IST
  • ಎಳನೀರು ತುಂಬಾ ಪೌಷ್ಟಿಕ ಪಾನೀಯವಾಗಿದೆ.
  • ಇದು ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಸೋಡಿಯಂ ಅನ್ನು ಹೊಂದಿರುತ್ತದೆ.
  • ಇದರಲ್ಲಿ 94 ಪ್ರತಿಶತದಷ್ಟು ನೀರು ಕಂಡುಬರುತ್ತದೆ
Coconut Water: ಎಳನೀರಿನ ಸೇವನೆಯಿಂದ ಸಿಗುವ ಅದ್ಭುತ ಪ್ರಯೋಜನಗಳಿವು  title=
Coconut Water Benefits

ಎಳನೀರಿನ ಸೇವನೆಯಿಂದ ಸಿಗುವ ಪ್ರಯೋಜನಗಳು: ಸುಡುವ ಬಿಸಿಲು ಮತ್ತು ಶಾಖದಲ್ಲಿ ದೇಹವನ್ನು ತಂಪಾಗಿರಿಸುವುದು ಅವಶ್ಯಕ. ಹಾಗಾಗಿ, ಈ ಋತುವಿನಲ್ಲಿ ಜನರು ಎಳನೀರನ್ನು ಸೇವಿಸುತ್ತಾರೆ. ಆದರೆ, ಕೇವಲ ಬೇಸಿಗೆಯಲ್ಲಿ ಮಾತ್ರವಲ್ಲ ಎಲ್ಲಾ ಋತುಮಾನಗಳಲ್ಲೂ ವಾರಕ್ಕೊಮ್ಮೆ ಆದರೂ ಎಳನೀರನ್ನು ಕುಡಿಯುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ? 

ಹೌದು, ಎಳನೀರು ತುಂಬಾ ಪೌಷ್ಟಿಕ ಪಾನೀಯವಾಗಿದೆ. ಇದು ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಸೋಡಿಯಂ ಅನ್ನು ಹೊಂದಿರುತ್ತದೆ. ಇದರಲ್ಲಿ 94 ಪ್ರತಿಶತದಷ್ಟು ನೀರು ಕಂಡುಬರುತ್ತದೆ ಮತ್ತು ಕಡಿಮೆ ಪ್ರಮಾಣದ ಕೊಬ್ಬು ಇದೆ. ಅದೂ ಸಹ ದೇಹಕ್ಕೆ ಅಗತ್ಯವಾದ ಆರೋಗ್ಯಕರ ಕೊಬ್ಬಾಗಿದೆ. ಹಾಗಾಗಿಯೇ ಎಳನೀರನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಎಳನೀರು ಕುಡಿಯುವುದರಿಂದ ಸಿಗುವ ಅಪಾರ ಪ್ರಯೋಜನಗಳಿವು :
ಶಕ್ತಿ ವರ್ಧಕ:

ಸಾಮಾನ್ಯವಾಗಿ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದರೆ ಎಳನೀರನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಕಾರಣ ಇದು ದೇಹಕ್ಕೆ ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಎಳನೀರು ಶಕ್ತಿಯನ್ನು ಹೆಚ್ಚಿಸಲು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇದರೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ- Weight Loss Mistakes: ಪ್ರತಿದಿನ 5000 ಹೆಜ್ಜೆ ನಡೆದರೂ ತೂಕ ಕಡಿಮೆಯಾಗುತ್ತಿಲ್ಲವೇ? ನೀವೂ ಈ ತಪ್ಪು ಮಾಡುತ್ತೀದ್ದೀರಾ!

ಇನ್ಸುಲಿನ್: 
ಜೊತೆಗೆ, ಇದು ದೇಹದಲ್ಲಿನ ಸಕ್ಕರೆಯನ್ನು ಸಹ ನಿಯಂತ್ರಣದಲ್ಲಿ ಇಡುತ್ತದೆ, ಇನ್ಸುಲಿನ್ ಕೊರತೆಯಿಂದ ಮಧುಮೇಹದ ಸಮಸ್ಯೆ ಉಂಟಾಗುತ್ತದೆ, ಇಂತಹ ಸಂದರ್ಭದಲ್ಲಿ ಎಳ ನೀರು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ಮೂತ್ರಪಿಂಡಗಳಿಗೂ ಪ್ರಯೋಜನಕಾರಿ:
ಮೂತ್ರಪಿಂಡದಂತಹ ಕಾಯಿಲೆಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ, ಎಳನೀರನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- White Hair Problem: ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಸರಳ ಮನೆಮದ್ದು

ಕಾಂತಿಯುತ ತ್ವಚೆ:
ಉತ್ತಮ ಕಾಂತಿಯುತವಾದ ತ್ವಚೆ ಪಡೆಯಲು ತ್ವಚೆಯನ್ನು ತೇವಾಂಶದಿಂದ ಇಡುವುದು ಬಹಳ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ ಎಳ ನೀರು ತುಂಬಾ ಪರಿಣಾಮಕಾರಿಯಾಗಿದೆ, ಈ ನೀರನ್ನು ಕುಡಿಯುವುದರ ಜೊತೆಗೆ ಎಳ ನೀರಿನಿಂದ ಮುಖವನ್ನು ತೊಳೆಯುವುದರಿಂದ ಮೊಡವೆಗಳು ಮಾಯವಾಗಿ ಕಾಂತಿಯುತವಾದ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News