ಹಾಲಿನೊಂದಿಗೆ ಇವುಗಳನ್ನ ಸೇವಿಸಿದ್ರೆ ವಿಟಮಿನ್ B12 ಕೊರತೆ ನಿವಾರಣೆಯಾಗುತ್ತದೆ!!

Vitamin B12 Deficiency: ನಿಮ್ಮ ದೇಹದಲ್ಲಿ ವಿಟಮಿನ್ B12 ಕೊರತೆಯನ್ನು ನೀಗಿಸಿಕೊಳ್ಳಲು ಬಯಸುವಿರಾ? ಹೌದು ಎಂದಾದರೆ, ನಿಮ್ಮ ಆಹಾರದಲ್ಲಿ ಹಾಲಿನೊಂದಿಗೆ ಕೆಲವು ಆಹಾರಗಳನ್ನ ಸೇರಿಸಲು ಪ್ರಯತ್ನಿಸಬೇಕು.

Written by - Puttaraj K Alur | Last Updated : May 20, 2025, 05:52 PM IST
  • ವಿಟಮಿನ್ B12 ಕೊರತೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
  • ವಿಟಮಿನ್ B12 ಕೊರತೆಯನ್ನು ನೀಗಿಸಲು ಖರ್ಜೂರ ಸೇವಿಸಬಹುದು
  • ಚೀಸ್‌ನಲ್ಲಿ ಉತ್ತಮ ಪ್ರಮಾಣದ ವಿಟಮಿನ್ B12 ಕಂಡುಬರುತ್ತದೆ
ಹಾಲಿನೊಂದಿಗೆ ಇವುಗಳನ್ನ ಸೇವಿಸಿದ್ರೆ ವಿಟಮಿನ್ B12 ಕೊರತೆ ನಿವಾರಣೆಯಾಗುತ್ತದೆ!!

Vitamin B12 Deficiency: ವಿಟಮಿನ್ B12 ಕೊರತೆಯು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಸಾಧ್ಯವಾದಷ್ಟು ಬೇಗ ಈ ಅಗತ್ಯ ಪೋಷಕಾಂಶದ ಕೊರತೆಯನ್ನು ನೀಗಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಹಾಲಿನೊಂದಿಗೆ ಕೆಲವು ಆಹಾರಗಳನ್ನ ಸೇವಿಸುವುದರಿಂದ ವಿಟಮಿನ್ B12 ಕೊರತೆ ನಿವಾರಣೆಯಾಗುತ್ತದೆ.

ಖರ್ಜೂರ ತಿನ್ನಬಹುದೇ?

ವಿಟಮಿನ್ B12 ಕೊರತೆಯನ್ನು ನೀಗಿಸಲು ಖರ್ಜೂರ ಸೇವಿಸಬಹುದು. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ಹಾಲಿನೊಂದಿಗೆ ಎರಡರಿಂದ ನಾಲ್ಕು ಖರ್ಜೂರ ಸೇವಿಸುವುದರಿಂದ ವಿಟಮಿನ್ B12 ಕೊರತೆಯನ್ನು ತ್ವರಿತವಾಗಿ ನೀಗಿಸಬಹುದು. ಇದಲ್ಲದೆ ಈ ರೀತಿ ಖರ್ಜೂರವನ್ನು ಸೇವಿಸುವುದರಿಂದ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸಹ ನೀವು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು.

ಇದನ್ನೂ ಓದಿ: ಬ್ಲಡ್ ಶುಗರ್ ಜಾಸ್ತಿಯಾದಾಗ ಮೊದಲು ಹಾನಿಯಾಗುವುದೇ ಈ ಅಂಗ !ದೇಹವನ್ನು ನಿರ್ವಿಷ ಮಾಡುವ ಈ ಆರ್ಗನ್ ಅನ್ನು ರಕ್ಷಿಸುವುದು ಹೇಗೆ ?

ಹಾಲಿನೊಂದಿಗೆ ಕಾಟೇಜ್ ಚೀಸ್ ತಿನ್ನಿರಿ

ಚೀಸ್‌ನಲ್ಲಿ ಉತ್ತಮ ಪ್ರಮಾಣದ ವಿಟಮಿನ್ B12 ಕಂಡುಬರುತ್ತದೆ. ಮಲಗುವ ಮುನ್ನ ಉಗುರು ಬೆಚ್ಚಗಿನ ಹಾಲಿನೊಂದಿಗೆ ಸ್ವಲ್ಪ ಕಾಟೇಜ್ ಚೀಸ್ ಸೇವಿಸಿ, ವಿಟಮಿನ್ B12 ಕೊರತೆಯನ್ನು ನೀಗಿಸಿ. ನೀವು ಮೊಟ್ಟೆಗಳನ್ನು ತಿನ್ನುತ್ತಿದ್ದರೆ, ಬೇಯಿಸಿದ ಮೊಟ್ಟೆಗಳನ್ನು ಹಾಲಿನೊಂದಿಗೆ ಸೇವಿಸಬಹುದು. ಹಾಲಿನೊಂದಿಗೆ ಚೀಸ್ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು.

ಮೆಂತ್ಯ ಬೀಜಗಳು ಪ್ರಯೋಜನಕಾರಿ  

ಮೆಂತ್ಯ ಬೀಜಗಳಲ್ಲಿ ವಿಟಮಿನ್ B12 ಸೇರಿದಂತೆ ಹಲವು ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಬೆಳಗ್ಗೆ ಒಂದು ಚಮಚ ಮೆಂತ್ಯ ಬೀಜಗಳನ್ನು ನೀರಿನಲ್ಲಿ ನೆನೆಸಿ. ನೀವು ರಾತ್ರಿ ಮಲಗುವ ಮುನ್ನ ಸ್ವಲ್ಪ ಮೆಂತ್ಯ ಬೀಜಗಳು ಅಥವಾ ಮೆಂತ್ಯ ಬೀಜದ ಪುಡಿಯನ್ನು ಉಗುರು ಬೆಚ್ಚಗಿನ ಹಾಲಿನೊಂದಿಗೆ ಸೇವಿಸಬಹುದು. ವಿಟಮಿನ್ B12 ಕೊರತೆಯನ್ನು ನೀಗಿಸಲು ಇದು ಉತ್ತಮ ನೈಸರ್ಗಿಕ ಪರಿಹಾರವಾಗಿದೆ.

ಇದನ್ನೂ ಓದಿ: ವಾಕರಿಕೆಯ ಜೊತೆಗೆ ಈ ಲಕ್ಷಣಗಳು ಕಂಡುಬಂದರೆ ಕಿಡ್ನಿ ಸ್ಟೋನ್‌ ಆಗಿದೆಯೇ ಎಂದರ್ಥ! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ..

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News