ಬೆಂಗಳೂರು :ಕೊತ್ತಂಬರಿ ಬೀಜಗಳನ್ನು ಮಸಾಲೆಯಾಗಿ ಬಳಸಲಾಗುತ್ತದೆ. ಆಹಾರದ ರುಚಿಯ ಜೊತೆಗೆ,ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಕೊತ್ತಂಬರಿ ಬೀಜಗಳಿಂದ ಪುಡಿಯನ್ನು ತಯಾರಿಸಲಾಗುತ್ತದೆ.ಇದನ್ನು ತರಕಾರಿಗಳಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ.ಇದಲ್ಲದೇ ಕೊತ್ತಂಬರಿ ಸೊಪ್ಪು ಮತ್ತು ಪುಡಿಯನ್ನು ಇನ್ನೂ ಹಲವು ರೀತಿಯಲ್ಲಿ ಬಳಸುತ್ತಾರೆ. ಆದರೆ ಕೊತ್ತಂಬರಿ ಬೀಜವನ್ನು ಅನೇಕ ರೋಗಗಳನ್ನು ಗುಣಪಡಿಸಲು ಔಷಧಿಯಾಗಿ ಬಳಸಲಾಗುತ್ತದೆ ಎನ್ನುವುದು ವಿಶೇಷ.ಕೊತ್ತಂಬರಿ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಅನೇಕ ರೋಗಗಳನ್ನು ದೂರವಿಡಲು ಇದು ಸಹಾಯ ಮಾಡುತ್ತದೆ.
ಕೊತ್ತಂಬರಿ ಬೀಜಗಳ ಪ್ರಯೋಜನಗಳು :
ಮಧುಮೇಹ ನಿಯಂತ್ರಣಕ್ಕೆ ಸಹಾಯಕ :
ಮಧುಮೇಹವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗುತ್ತಿದೆ.ಪ್ರತಿಯೊಂದು ಮನೆಯಲ್ಲೂ ಒಬ್ಬ ರೋಗಿ ಇದ್ದೇ ಇರುತ್ತಾನೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.ಸಂಶೋಧನೆಯ ಪ್ರಕಾರ,ಕೊತ್ತಂಬರಿ ಬೀಜಗಳಲ್ಲಿ ಕಂಡು ಬರುವ ಕೆಲವು ಸಂಯುಕ್ತಗಳು ಹೈಪರ್ಗ್ಲೈಸೆಮಿಕ್ ವಿರೋಧಿಯಾಗಿದ್ದು, ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ : ಕ್ಯಾಲ್ಸಿಯಂ ಕೊರತೆ ನೀಗಿಸಲು ಮಹಿಳೆಯರು ತಿನ್ನಲೇಬೇಕಾದ ಆಹಾರಗಳಿವು
ಕೊಲೆಸ್ಟ್ರಾಲ್ ನಿಯಂತ್ರಣ :
ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದು ಎಂದರೆ ಅದು ಅಪಾಯಕಾರಿ ಸಂಕೇತ. ಕೊಲೆಸ್ಟ್ರಾಲ್ ಹೆಚ್ಚಾದಂತೆ ಹೃದ್ರೋಗದ ಅಪಾಯ ಕೂಡಾ ಹೆಚ್ಚಾಗುತ್ತದೆ.ಅಧಿಕ ಕೊಲೆಸ್ಟ್ರಾಲ್ ಪಾರ್ಶ್ವವಾಯು ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ.ಇಂಥಹ ಪರಿಸ್ಥಿತಿಯಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಕೊತ್ತಂಬರಿ ಬೀಜಗಳನ್ನು ಬಳಸಬಹುದು.ಕೊತ್ತಂಬರಿ ಬೀಜಗಳು ಕೊರಿಯಾನಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತವೆ.ಇದು ಲಿಪಿಡ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಯಂತ್ರಿಸುವ ಮೂಲಕ ಕೊಲೆಸ್ಟ್ರಾಲ್ ಇನ್ನು ಕಡಿಮೆ ಮಾಡುತ್ತದೆ.
ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ :
ಕೊತ್ತಂಬರಿ ಬೀಜಗಳು ಆಹಾರದ ಫೈಬರ್‌ನ ಪ್ರಮುಖ ಮೂಲವಾಗಿದೆ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ.ಇವು ಪಿತ್ತಜನಕಾಂಗವನ್ನು ಆರೋಗ್ಯಕರವಾಗಿಡಲು ಮತ್ತು ಅದರ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಕೊತ್ತಂಬರಿ ಬೀಜದ ನೀರು ಅಜೀರ್ಣದಿಂದ ಬಳಲುತ್ತಿರುವ ಜನರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ :ಬ್ಲಡ್ ಶುಗರ್ ನಾರ್ಮಲ್ ಮಾಡಲು ಒಂದೇ ಒಂದು ಲವಂಗದ ಮೊಗ್ಗು ಸಾಕು! ಬಳಕೆಯ ಸಮಯ ವಿಧಾನ ಹೀಗೆಯೇ ಇರಲಿ
ಚರ್ಮಕ್ಕೆ ಪ್ರಯೋಜನಕಾರಿ:
ಕೊತ್ತಂಬರಿ ಬೀಜಗಳು ಚರ್ಮಕ್ಕೆ ಪ್ರಯೋಜನಕಾರಿ ಎಂದು ಅನೇಕ ಸಂಶೋಧನೆಗಳು ಕಂಡುಕೊಂಡಿವೆ. ಇದು ಎಸ್ಜಿಮಾ, ತುರಿಕೆ, ದದ್ದುಗಳು ಮತ್ತು ಊತವನ್ನು ಗುಣಪಡಿಸುತ್ತದೆ.ಕೊತ್ತಂಬರಿ ಬೀಜದಲ್ಲಿ ಆಂಟಿಸೆಪ್ಟಿಕ್ ಗುಣವಿದ್ದು, ಬಾಯಿ ಹುಣ್ಣು ಮತ್ತು ಗಾಯಗಳನ್ನು ಬೇಗ ವಾಸಿ ಮಾಡಲು ಸಹಾಯ ಮಾಡುತ್ತದೆ.
ಕೂದಲು ಉದುರುವುದನ್ನು ತಡೆಯುತ್ತದೆ :
ಕೂದಲು ಉದುರುವಿಕೆಯಿಂದ ನೀವು ಬಳಲುತ್ತಿದ್ದರೆ,ಇಂದಿನಿಂದಲೇ ಕೊತ್ತಂಬರಿ ಬೀಜವನ್ನು ಬಳಸಲು ಪ್ರಾರಂಭಿಸಿ. ಕೊತ್ತಂಬರಿ ಬೀಜಗಳು ಕೂದಲು ಉದುರುವಿಕೆಯನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಹೊಸ ಕೂದಲ ಬೆಳವಣಿಗೆಯಲ್ಲಿಯೂ ಸಹಾಯ ಮಾಡುತ್ತದೆ.
ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸುವುದು? :
ಪಾಲಿ, ಸಾಂಬಾರ್, ಸಲಾಡ್‌ಗಳಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಇದಲ್ಲದೆ, ಕೊತ್ತಂಬರಿ ಪುಡಿಯನ್ನು ತರಕಾರಿಗಳಲ್ಲಿ ಮಸಾಲೆಯಾಗಿ ಬಳಸಬಹುದು. ಕೊತ್ತಂಬರಿ ಬೀಜ ನೆನೆಸಿಟ್ಟ ನೀರನ್ನು,ಕೊತ್ತಂಬರಿ ಕುದಿಸಿದ ನೀರನ್ನು ಬಳಸಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.