)
Cough Syrups: ಮಧ್ಯಪ್ರದೇಶದಲ್ಲಿ ಕಲಬೆರಕೆ ಕೆಮ್ಮಿನ ಸಿರಪ್ ಸೇವಿಸಿ ಹಲವಾರು ಮಕ್ಕಳು ಸಾವನ್ನಪ್ಪಿದ ಪ್ರಕರಣವು ಭಾರತ ಸೇರಿದಂತೆ ವಿಶ್ವದಾದ್ಯಂತ ಸಖತ್ ಸುದ್ದಿಯಾಗಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆಯು (WHO) ಭಾರತದಲ್ಲಿ ಅತ್ಯಂತ ಅಪಾಯಕಾರಿಯಾಗಿರುವ ಮೂರು ಕೆಮ್ಮಿನ ಸಿರಪ್ಗಳನ್ನ ಗುರುತಿಸಿದೆ. ಒಂದು ವೇಳೆ ಇವುಗಳಲ್ಲಿ ಯಾವುದಾದರೂ ಕಂಡುಬಂದರೆ ಆರೋಗ್ಯ ಸಂಸ್ಥೆಗೆ ವರದಿ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ. ಮಕ್ಕಳ ಸಾವಿನ ನಂತರ ಸಖತ್ ಸದ್ದು ಮಾಡಿದ್ದ ಕೋಲ್ಸಿಫ್ ಸಿರಪ್ (Cofsils Cough Syrup) WHO ಎಚ್ಚರಿಕೆ ನೀಡಿರುವ ಮೂರು ಜೀವಕ್ಕೆ ಹಾನಿಯನ್ನುಂಟು ಮಾಡುವ ಸಿರಪ್ಗಳ ಪೈಕಿ ಒಂದಾಗಿದೆ.
ಜಾಗತಿಕ ಆರೋಗ್ಯ ಸಂಸ್ಥೆಯು ಪ್ರೆಸನ್ ಫಾರ್ಮಾಸ್ಯುಟಿಕಲ್ಸ್ನ ಕೋಲ್ಸಿಫ್, ರೆಡ್ಡೆಕ್ಸ್ ಫಾರ್ಮಾಸ್ಯುಟಿಕಲ್ಸ್ನ ರೆಸ್ಸಿಫ್ರೆಶ್ ಟಿಆರ್ ಮತ್ತು ಶೇಪ್ ಫಾರ್ಮಾದ ರೆಲೈಫ್ನ ನಿರ್ದಿಷ್ಟ ಸಿರಪ್ಗಳನ್ನ ಆರೋಗ್ಯದ ಮೇಲೆ ಪರಿಣಾಮ ಬೀರುವ ಔಷಧಿಗಳೆಂದು ಗುರುತಿಸಿದೆ. ತಮಿಳುನಾಡು ಮೂಲದ ಸೆಸನ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯು ಕೋಲ್ಸಿಫ್ ಕೆಮ್ಮಿನ ಸಿರಪ್ ಬಗ್ಗೆ ಉಂಟಾದ ವಿವಾದದ ನಂತರ ಅದರ ಉತ್ಪಾದನಾ ಪರವಾನಗಿಯನ್ನ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಪ್ರಯೋಗಾಲಯ ಪರೀಕ್ಷೆಗಳು ಡೈಥಿಲೀನ್ ಗೋಕಾಲ್ (DEG) ಎಂಬ ರಾಸಾಯನಿಕವನ್ನ ಮಧ್ಯಪ್ರದೇಶದಲ್ಲಿ ಕನಿಷ್ಠ 22 ಮಕ್ಕಳ ಸಾವಿಗೆ ಕಾರಣವೆಂದು ಕಂಡುಹಿಡಿದಿವೆ.
ಮಕ್ಕಳ ಸಾವು ಮತ್ತು ಕೋಲ್ಸಿಫ್ ತಯಾರಕರ ವಿರುದ್ಧದ ಕಠಿಣ ಕ್ರಮದ ನಂತರ, ಜಾಗತಿಕ ಆರೋಗ್ಯ ಸಂಸ್ಥೆಯು ಈ ಹಿಂದೆ ಸಿರಪ್ ಅನ್ನ ಇತರ ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆಯೇ ಎಂದು ಭಾರತೀಯ ಅಧಿಕಾರಿಗಳಿಗೆ ಪ್ರಶ್ನಿಸಿತ್ತು. ಸಿರಪ್ಗಳಲ್ಲಿ ಅನುಮತಿಸಲಾದ ಮಿತಿಗಿಂತ ಸುಮಾರು 500 ಪಟ್ಟು ವಿಷಕಾರಿ ಡೈಥಿಲೀನ್ ಗ್ಲೋಕೋಲ್ ಇದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಸಾವನ್ನಪ್ಪಿದ ಐದು ವರ್ಷದೊಳಗಿನ ಮಕ್ಕಳು ಇವುಗಳನ್ನ ಸೇವಿಸಿದ್ದರೆಂದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) WHOಗೆ ತಿಳಿಸಿದೆ.
ಭಾರತೀಯ ಆರೋಗ್ಯ ಪ್ರಾಧಿಕಾರವು ಯಾವುದೇ ಕಲುಷಿತ ಔಷಧಿಗಳನ್ನ ಭಾರತದಿಂದ ರಫ್ತು ಮಾಡಿಲ್ಲವೆಂದು ಸ್ಪಷ್ಟಪಡಿಸಿದೆ. ವಿಷಕಾರಿ ಕೆಮ್ಮಿನ ಸಿರಪ್ಗಳನ್ನ ರವಾನಿಸಲಾಗಿಲ್ಲವೆಂದು ಅಮೆರಿಕ ಕೂಡ ದೃಢಪಡಿಸಿದೆ. ಮಕ್ಕಳ ಸಾವಿನ ನಂತರ, ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಕ್ಕಳಿಗೆ ಕೆಮ್ಮಿನ ಸಿರಪ್ಗಳನ್ನ ಶಿಫಾರಸು ಮಾಡುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಅಂತಹ ಔಷಧಿಗಳನ್ನ ಯಾವುದೇ ಕಾರಣಕ್ಕೂ ನೀಡಬಾರದು ಖಡಕ್ ಎಚ್ಚರಿಕೆ ಸಹ ನೀಡಿದೆ.