ಕೀಲುಗಳಲ್ಲಿ ಶೇಖರವಾಗಿರುವ ಯೂರಿಕ್ ಆಮ್ಲದ ಜೊತೆಗೆ ಹೊಟ್ಟೆಯ ಕಠಿಣ ಬೊಜ್ಜನ್ನೂ ಕರಗಿಸುತ್ತೆ ಈ ಮಸಾಲೆ ನೀರು..!

Uric Acid, Weight Loss Remedy: ಭಾರತವು ಅದರ ಮಸಾಲೆಗಳಿಂದಾಗಿ ಸುಪ್ರಸಿದ್ಧವಾಗಿದೆ. ಖಾದ್ಯಗಳ ರುಚಿ ಹೆಚ್ಚಿಸುವ ಮಸಾಲೆಗಳು ಆರೋಗ್ಯಕ್ಕೂ ಕೂಡ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. 

Written by - Yashaswini V | Last Updated : Mar 3, 2025, 11:03 AM IST
  • ಒಗ್ಗರಣೆಗೆ ಅತ್ಯಗತ್ಯವಾಗಿ ಬೇಕಾಗಿರುವ ಈ ಮಸಾಲೆಯು ಹಲವು ಪೋಷಕಾಂಶಗಳನ್ನು ಒಳಗೊಂಡಿದೆ
  • ಇದರ ಸರಿಯಾದ ಬಳಕೆಯಿಂದ ಯೂರಿಕ್ ಆಸಿಡ್ ಕರಗಿ ನೀರಾಗಿ ಹೋಗುತ್ತದೆ.
  • ಡೊಳ್ಳು ಹೊಟ್ಟೆಯಲ್ಲಿ ಶೇಖರವಾಗಿರುವ ಕಠಿಣ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ.
ಕೀಲುಗಳಲ್ಲಿ ಶೇಖರವಾಗಿರುವ ಯೂರಿಕ್ ಆಮ್ಲದ ಜೊತೆಗೆ ಹೊಟ್ಟೆಯ ಕಠಿಣ ಬೊಜ್ಜನ್ನೂ ಕರಗಿಸುತ್ತೆ ಈ ಮಸಾಲೆ ನೀರು..!

Jeera Water Benefits: ಬದಲಾದ ಜೀವನಶೈಲಿಯಲ್ಲಿ ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆ ಬೊಜ್ಜು ಹಾಗೂ ಯೂರಿಕ್ ಆಸಿಡ್ ಹೆಚ್ಚಳ. ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾಗುವುದರಿಂದ ಕೀಲುಗಳಲ್ಲಿ ಅಸಹನೀಯ ನೋವು, ಊತದ ಸಮಸ್ಯೆಗಳು ಕಾಡಿದರೆ, ತೂಕ ಹೆಚ್ಚಳ ಅಥವಾ ಬೊಜ್ಜಿನ ಸಮಸ್ಯೆಯು ದೇಹವನ್ನು ಕಾಯಿಲೆಗಳ ಉಗ್ರಾಣವಾಗಿಸುತ್ತದೆ. ಆದಾಗ್ಯೂ, ಅಡುಗೆ ಮನೆಯ ಮಸಾಲೆ ಡಬ್ಬದಲ್ಲಿರುವ ಪದಾರ್ಥವೊಂದು ಇವೆರಡಕ್ಕೂ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸಬಲ್ಲದು. 

Add Zee News as a Preferred Source

ಒಗ್ಗರಣೆಗೆ ಅತ್ಯಗತ್ಯವಾಗಿ ಬೇಕಾಗಿರುವ ಈ ಮಸಾಲೆಯು ಹಲವು ಪೋಷಕಾಂಶಗಳನ್ನು ಒಳಗೊಂಡಿದ್ದು ಇದರ ಸರಿಯಾದ ಬಳಕೆಯಿಂದ ಯೂರಿಕ್ ಆಸಿಡ್ ಕರಗಿ ನೀರಾಗಿ ಹೋಗುತ್ತದೆ. ಡೊಳ್ಳು ಹೊಟ್ಟೆಯಲ್ಲಿ ಶೇಖರವಾಗಿರುವ ಕಠಿಣ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ. ಅಂತಹ ದಿವ್ಯೌಷದ "ಜೀರಿಗೆ". 

ಇದನ್ನೂ ಓದಿ- ಕಣ್ಣಿನ ನಾನಾ ಸಮಸ್ಯೆಗಳಿಗೆ ಈ ಹಣ್ಣೆ ರಾಮಬಾಣ, ದಿನಕ್ಕೆ 4-5 ಎಸಳು ತಿಂದರೆ ಸಾಕು ನಿವಾರಣೆ ಆಗುತ್ತೆ ದೃಷ್ಟಿ ದೋಷ  

ಆರೋಗ್ಯಕ್ಕೆ ವರದಾನ ಜೀರಿಗೆ: 
ಜೀರಿಗೆಯಲ್ಲಿ ಸತು, ಕಬ್ಬಿಣ, ಕ್ಯಾಲಿಯಂ ಮತ್ತು ರಂಜಕ ಹೆರಳವಾಗಿದ್ದು ಇದು ಯೂರಿಕ್ ಆಮ್ಲದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಜೀರಿಗೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವುದರಿಂದ ಇದು ಆರೋಗ್ಯಕರ ತೂಕ ಇಳಿಕೆಗೂ ವರದಾನವಾಗಿದೆ. 

ಯೂರಿಕ್ ಆಸಿಡ್ ನಿಯಂತ್ರಣ, ತೂಕ ಇಳಿಕೆಗಾಗಿ ಜೀರಿಗೆಯನ್ನು ಹೇಗೆ ಬಳಸಬೇಕು? 
ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಸ್ಪೂನ್ ಜೀರಿಗೆ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಶೋಧಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೀಳುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಮ್ಲ ಕರಗುತ್ತದೆ. ಜೊತೆಗೆ ದೇಹದಲ್ಲಿ ಶೇಖರವಾಗಿರುವ ಕಠಿಣವಾದ ಬೊಜ್ಜು ಕೂಡ ಬೆಣ್ಣೆಯಂತೆ ಕರಗುತ್ತದೆ. 

ಇದನ್ನೂ ಓದಿ- ದುಬಾರಿ ಹೇರ್ ಪ್ರಾಡಕ್ಟ್ ಅಲ್ಲ..! ಈರುಳ್ಳಿ ಸಿಪ್ಪೆ ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿ..! 

ನಿಯಮಿತವಾಗಿ ಈ ರೀತಿ ಜೀರಿಗೆ ನೀರನ್ನು ಕುಡಿಯುವುದರಿಂದ ಯೂರಿಕ್ ಆಸಿಡ್ ನಿಯಂತ್ರಣ, ತೂಕ ಇಳಿಕೆ ಮಾತ್ರವಲ್ಲದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಚರ್ಮದ ಆರೋಗ್ಯಕ್ಕೆ ಲಾಭದಾಯಕವಾಗಿಯೂ ಈ ಪಾನೀಯ ಕಾರ್ಯನಿರ್ವಹಿಸುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News