Obesity Increasing Rapidly: ಕಳೆದ 10-15 ವರ್ಷಗಳಲ್ಲಿ ಜೀವನಶೈಲಿ ಸಂಬಂಧಿತ ಕಾಯಿಲೆಗಳ ಅಪಾಯವು ವೇಗವಾಗಿ ಹೆಚ್ಚಾಗಿದೆ. ಅನಾರೋಗ್ಯಕರ ಆಹಾರ ಮತ್ತು ತ್ವರಿತ ಆಹಾರದ ಹೆಚ್ಚುತ್ತಿರುವ ಪ್ರವೃತ್ತಿಯಿಂದ ಹೃದಯ, ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಬೊಜ್ಜು ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಈಗ ದಿ ಲ್ಯಾನ್ಸೆಟ್‌ನ ಹೊಸ ವರದಿಯು ಆತಂಕಕಾರಿ ಮಾಹಿತಿ ಬಹಿರಂಗಪಡಿಸಿದ್ದು, 2050ರ ವೇಳೆಗೆ ಭಾರತದಲ್ಲಿ 25 ವರ್ಷಕ್ಕಿಂತ ಮೇಲ್ಪಟ್ಟ ಬೊಜ್ಜು ಅಥವಾ ಅಧಿಕ ತೂಕ ಹೊಂದಿರುವ ಜನರ ಸಂಖ್ಯೆ 450 ಮಿಲಿಯನ್ ಅಂದರೆ ಸುಮಾರು 45 ಕೋಟಿ ತಲುಪಬಹುದು ಎಂದು ಹೇಳಿದೆ. ಈ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನದಲ್ಲಿದ್ದು, ಅಲ್ಲಿ 2050ರ ವೇಳೆಗೆ 627 ದಶಲಕ್ಷಕ್ಕೂ ಹೆಚ್ಚು ಜನರು ಬೊಜ್ಜು ಹೊಂದಿರುತ್ತಾರಂತೆ. ಅದೇ ರೀತಿ ಅಮೆರಿಕದಲ್ಲಿ ಬೊಜ್ಜಿನಿಂದ ಬಳಲುತ್ತಿರುವವರ ಸಂಖ್ಯೆ 214 ಮಿಲಿಯನ್ ತಲುಪುತ್ತದೆ ಎಂದು ಹೇಳಲಾಗಿದೆ.
ಸಂಶೋಧನೆಯ ಪ್ರಕಾರ, ಎಲ್ಲವೂ ಹೀಗೆಯೇ ಮುಂದುವರಿದರೆ ಪ್ರಪಂಚದಾದ್ಯಂತ 25 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 3.8 ಶತಕೋಟಿ ಜನರು ಬೊಜ್ಜಿನ ಸಮಸ್ಯೆಯಿಂದ ಬಳಲಬಹುದು. ಈ ಅಂಕಿ ಅಂಶದಲ್ಲಿ, 1.95 ಶತಕೋಟಿ ಜನರು ಬೊಜ್ಜು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಅದೇ ರೀತಿ ಆಫ್ರಿಕಾದ ಸೂಪರ್ ಪ್ರದೇಶದಲ್ಲಿ ವಾಸಿಸುವವರಲ್ಲಿ ಬೊಜ್ಜುತನದಿಂದ ಬಳಲುತ್ತಿರುವ ಜನರ ಸಂಖ್ಯೆಯು ಶೇ.254.8ರಷ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ನೆನೆಸಿದ ಒಣದ್ರಾಕ್ಷಿ ತಿನ್ನಿರಿ, ಈ ಸಮಸ್ಯೆಗಳು 7 ದಿನಗಳಲ್ಲಿ ದೂರವಾಗುತ್ತವೆ
ಪುರುಷರು ಅಥವಾ ಮಹಿಳೆಯರಲ್ಲಿ ಯಾರಿಗೆ ಹೆಚ್ಚು ಬೊಜ್ಜು?
2021ರವರೆಗಿನ ಡೇಟಾವನ್ನು ನೋಡಿದರೆ, ಪ್ರಪಂಚದಾದ್ಯಂತ ಒಟ್ಟು 2.11 ಶತಕೋಟಿ ಯುವಕರು ಬೊಜ್ಜು ಅಥವಾ ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಈ ಪೈಕಿ 1 ಬಿಲಿಯನ್ ಪುರುಷರು ಮತ್ತು 1.11 ಬಿಲಿಯನ್ ಮಹಿಳೆಯರಿದ್ದಾರೆ. ಇದರಲ್ಲಿ ಚೀನಾದಲ್ಲಿ ಸುಮಾರು 402 ಮಿಲಿಯನ್ ಜನರು ಬೊಜ್ಜುತನದಿಂದ ಬಳಲುತ್ತಿದ್ದರೆ, ಭಾರತದಲ್ಲಿ 180 ಮಿಲಿಯನ್ ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದೇ ರೀತಿ ಅಮೆರಿಕದಲ್ಲಿ 172 ಮಿಲಿಯನ್ ಜನರು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಚೀನಾ, ಭಾರತ ಮತ್ತು ಅಮೆರಿಕಲ್ಲಿ ವೇಗವಾಗಿ ಹೆಚ್ಚುತ್ತಿದೆ
ಚೀನಾ, ಭಾರತ ಮತ್ತು ಅಮೆರಿಕಗಳಲ್ಲಿ ಅತಿಹೆಚ್ಚು ಬೊಜ್ಜು ಅಥವಾ ಅಧಿಕ ತೂಕ ಹೊಂದಿರುವ ಜನರು ಇದ್ದಾರೆ ಎಂದು ಅಧ್ಯಯನ ಹೇಳಿದೆ. ಆದರೆ ಬೊಜ್ಜು ಹೊಂದಿರುವ ಜನರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಹಲವು ದೇಶಗಳಿವೆ. ಭಾರತದ ಜೊತೆಗೆ, ಚೀನಾ, ಅಮೆರಿಕ, ಬ್ರೆಜಿಲ್, ರಷ್ಯಾ, ಮೆಕ್ಸಿಕೊ, ಇಂಡೋನೇಷ್ಯಾ ಮತ್ತು ಈಜಿಪ್ಟ್‌ನಂತಹ ದೇಶಗಳ ಅರ್ಧದಷ್ಟು ಜನಸಂಖ್ಯೆಯು ಬೊಜ್ಜಿನತ್ತ ಸಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಫಾಸ್ಟ್ ಫುಡ್ ಎಂದು ನಂಬಲಾಗಿದೆ.
ಇದನ್ನೂ ಓದಿ: ಯಾವ ಟ್ರೀಟ್‌ಮೆಂಟ್ ಅವಶ್ಯಕತೆಯಿಲ್ಲ.. ಈ ವ್ಯಾಯಾಮ ಮಾಡಿದ್ರೆ ಸಾಕು ವೃದ್ದಾಪ್ಯದಲ್ಲೂ ಹೃದಯಾಘಾತವಾಗಲ್ಲ!
ಬೊಜ್ಜುತನಕ್ಕೆ ಫಾಸ್ಟ್ ಫುಡ್ ಪ್ರಮುಖ ಕಾರಣ
ಫಾಸ್ಟ್ ಫುಡ್ ವಿಷಯಕ್ಕೆ ಬಂದರೆ, 2009 ಮತ್ತು 2019ರ ನಡುವೆ ಅತಿ ಸಂಸ್ಕರಿಸಿದ ಆಹಾರ ಮತ್ತು ಪಾನೀಯಗಳ ತಲಾ ಮಾರಾಟದಲ್ಲಿ ಅತಿಹೆಚ್ಚು ವಾರ್ಷಿಕ ಬೆಳವಣಿಗೆ ಕಂಡ ಮೂರು ದೇಶಗಳು ಭಾರತ, ಕ್ಯಾಮರೂನ್ ಮತ್ತು ವಿಯೆಟ್ನಾಂ ಇವೆ. ಈ ಫಾಸ್ಟ್ ಫುಡ್ ಸಂಸ್ಕೃತಿಯೇ ಬೊಜ್ಜುತನಕ್ಕೆ ದೊಡ್ಡ ಕಾರಣವಾಗುತ್ತಿವೆ. ಸಕಾಲದಲ್ಲಿ ಇದರ ಬಗ್ಗೆ ಗಮನ ಹರಿಸದಿದ್ದರೆ, ಹೆಚ್ಚಿನ ಜನಸಂಖ್ಯೆ ಜನರು ವಿವಿಧ ರೀತಿಯ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಾರೆಂದು ಎಚ್ಚರಿಕೆ ನೀಡಲಾಗಿದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.









