Easy Way To Control Sugar: ಮಧುಮೇಹ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದ ಒಂದು ಕಾಯಿಲೆಯಾಗಿದೆ. ಆದರೆ, ಆರೋಗ್ಯಕರ ಆಹಾರ ಪದ್ಧತಿ, ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ಇದಕ್ಕಾಗಿ ಯಾವುದೇ ಪಥ್ಯ ಬೇಕಿಲ್ಲ.... ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಕೆಲವು ಎಲೆಗಳನ್ನು ಅಗಿದು ತಿಂದರೆ ಶುಗರ್ ಲೆವೆಲ್ ಯಾವತ್ತೂ ಹೆಚ್ಚಾಗಲ್ಲ ಎನ್ನಲಾಗುತ್ತದೆ. ಹಾಗಿದ್ದರೆ, ಮಧುಮೆಹಿಗಳಿಗೆ ಸಂಜೀವಿನಿಯಾದ ಆ ಎಲೆಗಳು ಯಾವುವು? ಇದರಿಂದ ಮಧುಮೇಹ ಹೇಗೆ ಕಂಟ್ರೋಲ್ ಆಗುತ್ತದೆ ಎಂದು ತಿಳಿಯೋಣ...
ಕರಿಬೇವಿನ ಎಲೆಗಳು:
ಕರಿಬೇವಿನ ಎಲೆಗಳು ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುವಲ್ಲಿ ಪರಿಣಾಮಕಾರಿ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡೇ ಎರಡು ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಸುಧಾರಣೆಗೊಳ್ಳುತ್ತದೆ. ಶುಗರ್ ಎಂದಿಗೂ ಹೆಚ್ಚಾಗುವುದಿಲ್ಲ.
ಇದನ್ನೂ ಓದಿ- ದುಂಡು ಹೊಟ್ಟೆಯನ್ನು ಬೆಣ್ಣೆಯಂತೆ ಕರಗಿಸಬಲ್ಲ 5 ಮ್ಯಾಜಿಕಲ್ ಡ್ರಿಂಕ್ಸ್
ತುಳಸಿ ಎಲೆಗಳು:
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತುಳಸಿ ಎಲೆಗಳು ಮಧುಮೇಹ ರೋಗಿಗಳಿಗೆ ದಿವ್ಯೌಷಧವಿದ್ದಂತೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಸುಲಭವಾಗಿ ಕಡಿಮೆ ಆಗುತ್ತದೆ. ಹೀಗಾಗಿ, ಎಂದಿಗೂ ಶುಗರ್ ಲೆವೆಲ್ ಹೆಚ್ಚಾಗುವುದಿಲ್ಲ ಎನ್ನಲಾಗುತ್ತದೆ.
ಇದನ್ನೂ ಓದಿ- ಈ ಸಮಸ್ಯೆ ಇದ್ದವರೂ ಎಂಥ ಸಮಯದಲ್ಲೂ ಬಿಸಿ ನೀರನ್ನು ಕುಡಿಯಬಾರದು!
ನುಗ್ಗೆ ಸೊಪ್ಪು:
ಮನೆಯ ಹಿತ್ತಲಲ್ಲಿ ಸುಲಭವಾಗಿ ಬೆಳೆಯಬಹುದಾದ ನುಗ್ಗೆ ಸೊಪ್ಪು ಕೂಡ ಮಧುಮೇಹಿಗಳಿಗೆ ದಿವ್ಯೌಷಧವಾಗಿದೆ. ನುಗ್ಗೆ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ರೈಬೋಫ್ಲಾವಿನ್ ನಂತಹ ಪೋಷಕಾಂಶಗಳು ಹೇರಳವಾಗಿದ್ದು ಇದು ಬ್ಲಡ್ ಶುಗರ್ ಕಂಟ್ರೋಲ್ ಮಾಡುವುದು ಮಾತ್ರವಲ್ಲ, ಇದರಲ್ಲಿರುವ ಕ್ಲೋರೋಜೆನಿಕ್ ಆಮ್ಲ ದೇಹದಲ್ಲಿ ಸಕ್ಕರೆಯನ್ನು ಉತ್ತಮವಾಗಿ ಸಂಸ್ಕರಿಸಲು ಅನುವು ಮಾಡಿಕೊಡುತ್ತದೆ. ನುಗ್ಗೆ ಸೊಪ್ಪನ್ನು ನೇರವಾಗಿ ಅಗಿದು ತಿನ್ನಲು ಸಾಧ್ಯವಾಗದಿದ್ದರೆ ಅದನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿನಲ್ಲಿ ಸ್ವಲ್ಪ ಈ ಪುಡಿಯನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಲಾಭದಾಯಕವಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









