Dipika Kakar Liver Cancer: ಖ್ಯಾತ ಕಿರುತೆರೆ ನಟಿ ದೀಪಿಕಾ ಕಕ್ಕರ್ ಗೆ 2 ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ಸುದ್ದಿ ದೀಪಿಕಾ ಕಕ್ಕರ್ ಅವರ ಅಭಿಮಾನಿಗಳು ಮತ್ತು ಟಿವಿ ಉದ್ಯಮದವರಿಗೆ ಆಘಾತ ಉಂಟು ಮಾಡಿದೆ. ದೀಪಿಕಾ ಕಕ್ಕರ್ ಬಹಳ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ದೀಪಿಕಾ ಕಕ್ಕರ್ ಅವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ದೀಪಿಕಾ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಲಿವರ್ ಕ್ಯಾನ್ಸರ್ ಬಗ್ಗೆ ಮಹಿಳೆಯರು ಹೆಚ್ಚು ಜಾಗರೂಕರಾಗಿರಬೇಕು. ಸಾಮಾನ್ಯವಾಗಿ ಮಹಿಳೆಯರು ಯಕೃತ್ತಿನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ಕ್ಯಾನ್ಸರ್ ಗಂಭೀರ ಹಂತವನ್ನು ತಲುಪುತ್ತದೆ. ದೀಪಿಕಾ ಕಕ್ಕರ್ ವಿಷಯದಲ್ಲಿ ಆಗಿದ್ದು ಕೂಡಾ ಇದೇ. ಅವರು ಜ್ವರ ಮತ್ತು ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾದಾಗ, ಅವರ ಯಕೃತ್ತಿನಲ್ಲಿ ಟೆನಿಸ್ ಬಾಲ್ ಗಾತ್ರದ ಗೆಡ್ಡೆ ಇರುವುದು ಪತ್ತೆಯಾಗಿದೆ. ಇದೀಗ ಈ ಗೆಡ್ಡೆ ಕ್ಯಾನ್ಸರ್ ನಿಂದ ಉಂಟಾಗಿದೆ ಎನ್ನುವುದು ಬಹಿರಂಗವಾಗಿದೆ.
ಇದನ್ನೂ ಓದಿ: ಊಟಕ್ಕೆ 10 ನಿಮಿಷ ಮೊದಲು ಈ ಒಣಹಣ್ಣನ್ನು ತಿಂದರೆ 45 ದಿನದವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಇರುತ್ತೆ!
ತಜ್ಞರ ಪ್ರಕಾರ, ಯಕೃತ್ತಿನ ಕ್ಯಾನ್ಸರ್‌ನ ಲಕ್ಷಣಗಳು ಸಾಮಾನ್ಯ ಕಾಯಿಲೆಯನ್ನು ಹೋಲುತ್ತವೆ. ಬಹಳ ಸಮಯದ ನಂತರವೇ ಇದು ಪತ್ತೆಯಾಗುತ್ತವೆ. ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುವ ಬದಲು ಮೊದಲೇ ಟೆಸ್ಟ್ ಮಾಡಿಸಿಕೊಂಡರೆ ಇದನ್ನು ಬುಡದಿಂದಲೇ ತೆಗೆದು ಹಾಕಬಹುದು.
ಲಿವರ್ ಕ್ಯಾನ್ಸರ್ ಲಕ್ಷಣಗಳು :
1. ವಿನಾ ಕಾರಣ ದಣಿವಾಗುತ್ತಿದ್ದರೆ ಅಥವಾ ದೌರ್ಬಲ್ಯ ಕಾಡುತ್ತಿದ್ದರೆ ಅದು ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿರಬಹುದು.
2. ನಿಮ್ಮ ಹೊಟ್ಟೆಯ ಮೇಲಿನ ಬಲಭಾಗದಲ್ಲಿ ನಿರಂತರ ನೋವು ಅಥವಾ ಒತ್ತಡ ಕಾಣಿಸಿಕೊಳ್ಳುತ್ತಿದ್ದರೆ ಅದು ಕೂಡಾ ಕಳವಳಕ್ಕೆ ಕಾರಣವಾಗಬಹುದು.
3. ಯಾವುದೇ ಕಾರಣವಿಲ್ಲದೆ ಹಠಾತ್ ತೂಕ ನಷ್ಟ, ಹಸಿವಿನ ಕೊರತೆ ಯಕೃತ್ತಿನ ಕ್ಯಾನ್ಸರ್‌ನ ಆರಂಭಿಕ ಲಕ್ಷಣ.
ಇದನ್ನೂ ಓದಿ: ಇನ್ನು ಮುಂದೆ ಈರುಳ್ಳಿ ಕತ್ತರಿಸುವಾಗ ನಿಮ್ಮ ಕಣ್ಣಿನಿಂದ ಕಣ್ಣೀರು ಬರುವುದಿಲ್ಲ!ಕಾರಣವೇನು ಗೊತ್ತೇ?
4. ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ, ಅದು ಕಾಮಾಲೆಯ ಲಕ್ಷಣವಾಗಿದೆ. ಇದು ಯಕೃತ್ತಿನ ಸಮಸ್ಯೆಗಳ ಪ್ರಮುಖ ಲಕ್ಷಣವಾಗಿದೆ.
5. ಯಕೃತ್ತಿನ ಸಮಸ್ಯೆಗಳಲ್ಲಿ, ಮೂತ್ರದ ಬಣ್ಣವು ಗಾಢವಾಗುತ್ತದೆ ಮತ್ತು ಮಲದ ಬಣ್ಣವು ಜೇಡಿಮಣ್ಣಿನಂತೆ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಪಿತ್ತರಸವು ಸರಿಯಾಗಿ ಬಿಡುಗಡೆಯಾಗದ ಹೀಗಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









