)
Drumstick Disadvantages: ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಹಲವು ಬಗೆಯ ತರಕಾರಿಗಳು ಬರುತ್ತವೆ. ಇವುಗಳಲ್ಲಿ ಹಲವು ಬಗೆಯ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಜನರು ಇವುಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ತರಕಾರಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನ ಪಡೆಯಬಹುದು. ಬೇಸಿಗೆಯಲ್ಲಿ ಹೇರಳವಾಗಿ ಲಭ್ಯವಿರುವ ತರಕಾರಿ ಎಂದರೆ ಅದು ನುಗ್ಗೆಕಾಯಿ. ನುಗ್ಗೆಕಾಯಿಯನ್ನು ಪ್ರೋಟೀನ್ನ ಉಗ್ರಾಣವೆಂದು ಕರೆಯಲಾಗುತ್ತದೆ. ಇದರ ಸೇವನೆಯು ಹಲವು ರೀತಿಯ ಕಾಯಿಲೆಗಳಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ ಕೆಲವರಿಗೆ ಇದರ ಸೇವನೆಯು ಹಾನಿಕಾರಕ. ಯಾವ ಸಮಸ್ಯೆ ಇರುವರ ಜನರು ನುಗ್ಗೆಕಾಯಿ ಸೇವಿಸಬಾರದು ಎಂದು ತಿಳಿಯಿರಿ...
ಈ 4 ಜನರು ಅಪ್ಪಿತಪ್ಪಿಯೂ ನುಗ್ಗೆಕಾಯಿ ಸೇವಿಸಬಾರದು...
ಪ್ರತಿಯೊಂದು ಹಣ್ಣು ಮತ್ತು ತರಕಾರಿಗಳಲ್ಲಿ ಪ್ರಯೋಜನಗಳಿರುಂತೆ ಕೆಲವು ಅನಾನುಕೂಲಗಳಿರುತ್ತವೆ. ಅದೇ ರೀತಿ ನುಗ್ಗೆಕಾಯಿ ಕೂಡ ಕೆಲವು ನ್ಯೂನತೆಗಳನ್ನ ಹೊಂದಿದೆ. ಇದರಿಂದ ಕೆಲವು ಕಾಯಿಲೆಗಳಲ್ಲಿ ಇದನ್ನ ಸೇವಿಸುವುದು ನಿಮಗೆ ಹಾನಿಕಾರಕ.
ಗರ್ಭಿಣಿಯರು: ಗರ್ಭಿಣಿಯರು ನುಗ್ಗೆಕಾಯಿ ಸೇವಿಸುವುದನ್ನ ತಪ್ಪಿಸಬೇಕು. ವಾಸ್ತವವಾಗಿ ಇದು ಉಷ್ಣಗುಣ ಹೊಂದಿರುತ್ತದೆ. ಆದ್ದರಿಂದ ಇದನ್ನ ಅತಿಯಾಗಿ ಸೇವಿಸುವುದು ಹಾನಿಕಾರಕವಾಗಿದೆ. ಹೆಚ್ಚಿನ ರಕ್ತಸ್ರಾವದ ಸಮಸ್ಯೆ ಇರುವ ಮಹಿಳೆಯರು ಸಹ ಇದನ್ನ ಅತಿಯಾಗಿ ತಿನ್ನುವುದನ್ನ ತಪ್ಪಿಸಬೇಕು.
ಕಡಿಮೆ ರಕ್ತದೊತ್ತಡ: ಕಡಿಮೆ ರಕ್ತದೊತ್ತಡ ಸಮಸ್ಯೆ ಇರುವವರು ನುಗ್ಗೆಕಾಯಿ ತಿನ್ನುವುದನ್ನ ತಪ್ಪಿಸಬೇಕು. ವಾಸ್ತವವಾಗಿ ಇದರ ಸೇವನೆಯು ಅಧಿಕ ರಕ್ತದೊತ್ತಡದಲ್ಲಿ ಪ್ರಯೋಜನಕಾರಿ. ಇದು ಅಧಿಕ ರಕ್ತದೊತ್ತಡವನ್ನ ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಕಡಿಮೆ ರಕ್ತದೊತ್ತಡ ಸಮಸ್ಯೆ ಇರುವವರು ಇದನ್ನ ಸೇವಿಸುವುದನ್ನ ತಪ್ಪಿಸಬೇಕು.
ಗ್ಯಾಸ್ಟ್ರಿಕ್ ಮತ್ತು ಹುಣ್ಣು: ಗ್ಯಾಸ್ ಮತ್ತು ಅಲ್ಸರ್ನಂತಹ ಸಮಸ್ಯೆಗಳಿರುವ ಜನರು ಕೂಡ ನುಗ್ಗೆಕಾಯಿ ಸೇವಿಸುವುದನ್ನ ತಪ್ಪಿಸಬೇಕು.
ಸ್ತನ್ಯಪಾನ: ಮಗುವಿಗೆ ಜನ್ಮ ನೀಡಿದ ನಂತರ ತಾಯಂದಿರು ನುಗ್ಗೆಕಾಯಿ ಸೇವಿಸುವುದನ್ನ ತಪ್ಪಿಸಬೇಕು. ಯಾವುದೇ ಒಬ್ಬ ಮಹಿಳೆ ಎದೆಹಾಲುಣಿಸುತ್ತಿದ್ದರೆ, ಯಾವುದೇ ಕಾರಣಕ್ಕೂ ನುಗ್ಗೆಕಾಯಿ ಸೇವಿಸಬಾರದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)