ಬೆಳಗ್ಗೆ ಈ ಕೆಲಸ ಮಾಡಿದ್ರೆ ದೇಹದಲ್ಲಿ ವಿಟಮಿನ್ ಡಿ ಕೊರತೆ ಇರಲ್ಲ; ನೂರು ವರ್ಷ ಆರೋಗ್ಯವಾಗಿ ಇರ್ತೀರಿ!!

Vitamin D: ನಿಮ್ಮ ದೇಹವನ್ನು ಆರೋಗ್ಯಕರವಾಗಿರಿಸಲು ಮತ್ತು ಮೂಳೆಗಳನ್ನು ಬಲಪಡಿಸಲು ಬಯಸಿದರೆ, ವಿಟಮಿನ್ ʼಡಿʼ ಕೊರತೆಯಾಗದಂತೆ ನೋಡಿಕೊಳ್ಳಿರಿ. ವಿಟಮಿನ್ ʼಡಿʼ ಕೊರತೆಯನ್ನು ನೀಗಿಸಲು ಬೆಳಗ್ಗೆ ಸ್ವಲ್ಪ ಸಮಯದವರೆಗೆ ಕೆಲವು ಅಭ್ಯಾಸಗಳನ್ನ ರೂಢಿಸಿಕೊಳ್ಳಬೇಕು. ಇದರಿಂದ ನಿಮಗೆ ನೈಸರ್ಗಿಕವಾಗಿ ವಿಟಮಿನ್ ʼಡಿʼ ಸಿಗುತ್ತದೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ.

Written by - Puttaraj K Alur | Last Updated : Apr 21, 2025, 04:34 PM IST
  • ಪ್ರತಿದಿನ ಬೆಳಗ್ಗೆ ಅರ್ಧ ಗಂಟೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದನ್ನ ರೂಢಿಸಿಕೊಳ್ಳಬೇಕು
  • ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ದೇಹಕ್ಕೆ ವಿಟಮಿನ್ ʼಡಿʼ ನೈಸರ್ಗಿಕವಾಗಿ ಸಿಗುತ್ತದೆ
  • ನಾವು ಬಿಸಿಲಿನಲ್ಲಿರುವಾಗ ನಮ್ಮ ದೇಹವು ವಿಟಮಿನ್ ʼಡಿʼಯನ್ನ ಸ್ವತಃ ಉತ್ಪಾದಿಸಿಕೊಳ್ಳುತ್ತದೆ
ಬೆಳಗ್ಗೆ ಈ ಕೆಲಸ ಮಾಡಿದ್ರೆ ದೇಹದಲ್ಲಿ ವಿಟಮಿನ್ ಡಿ ಕೊರತೆ ಇರಲ್ಲ; ನೂರು ವರ್ಷ ಆರೋಗ್ಯವಾಗಿ ಇರ್ತೀರಿ!!

How do you get vitamin D: ಭಾರತದಲ್ಲಿ ವಾಸಿಸುವ ಜನರು ಬೇಸಿಗೆ, ಮಳೆ ಮತ್ತು ಚಳಿಗಾಲದಂತಹ ಋತುಗಳನ್ನು ಆನಂದಿಸುತ್ತಾರೆ. ಇಲ್ಲಿ ವಾಸಿಸುವ ಜನರು ವಿವಿಧ ಋತುಮಾನಗಳಿಗೆ ಅನುಗುಣವಾಗಿ ಆಹಾರ ಮತ್ತು ಅಗತ್ಯ ಪೋಷಕಾಂಶಗಳನ್ನು ಪಡೆಯುತ್ತಾರೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿವೆ. ಕೆಟ್ಟ ಆಹಾರ ಪದ್ಧತಿಯಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತಿದೆ. ನಗರಗಳಲ್ಲಿ ವಾಸಿಸುವ ಜನರ ದೇಹದಲ್ಲಿ ವಿಟಮಿನ್ ʼಡಿʼ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಕಾರಣ ಸೂರ್ಯನ ಬೆಳಕಿನಿಂದ ದೂರವಿರುವುದು ಮತ್ತು ಮನೆಗಳಿಗೆ ಸೂರ್ಯನ ಬೆಳಕು ಪ್ರವೇಶಿಸದಿರುವುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮೂಳೆಗಳನ್ನು ಬಲಪಡಿಸಲು ಬಯಸಿದರೆ, ಪ್ರತಿದಿನ ಬೆಳಗ್ಗೆ ಕೆಲವು ಅಭ್ಯಾಸಗಳನ್ನ ರೂಢಿಸಿಕೊಳ್ಳಬೇಕು. ಇದು ದೇಹಕ್ಕೆ ನೈಸರ್ಗಿಕವಾಗಿ ವಿಟಮಿನ್ ʼಡಿʼ ಸಿಗುವಂತೆ ಮಾಡುತ್ತದೆ.

Add Zee News as a Preferred Source

ಬೆಳಗ್ಗೆ ಅರ್ಧ ಗಂಟೆ ಸೂರ್ಯನ ಬೆಳಕು ತೆಗೆದುಕೊಳ್ಳಿ

ಪ್ರತಿದಿನ ಬೆಳಗ್ಗೆ ಅರ್ಧ ಗಂಟೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದನ್ನು ರೂಢಿಸಿಕೊಳ್ಳಿರಿ. ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ದೇಹಕ್ಕೆ ವಿಟಮಿನ್ ʼಡಿʼ ನೈಸರ್ಗಿಕವಾಗಿ ಸಿಗುತ್ತದೆ. ನಾವು ಬಿಸಿಲಿನಲ್ಲಿ ಇರುವಾಗ ನಮ್ಮ ದೇಹವು ವಿಟಮಿನ್ ʼಡಿʼಯನ್ನು ಸ್ವತಃ ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದರರ್ಥ ಕೇವಲ ಅರ್ಧ ಗಂಟೆ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವುದರಿಂದ, ನಿಮ್ಮ ಜೀವನದುದ್ದಕ್ಕೂ ವಿಟಮಿನ್ ʼಡಿʼ ಮಾತ್ರೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಸೂರ್ಯನಿಂದ ವಿಟಮಿನ್ ʼಡಿʼ ಪಡೆಯಲು ಉತ್ತಮ ಮಾರ್ಗವೆಂದರೆ ಕನಿಷ್ಠ ಬಟ್ಟೆಗಳನ್ನು ಧರಿಸುವುದು, ಅಂದರೆ ಚರ್ಮವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಂತೆ ನೋಡಿಕೊಳ್ಳುವುದು.  

ಇದನ್ನೂ ಓದಿ: Grey Hair: ಬಿಳಿ ಕೂದಲನ್ನು ಬುಡದಿಂದಲೇ ನೈಸರ್ಗಿಕವಾಗಿ ಕಪ್ಪಾಗಿಸುವ ಮನೆಮದ್ದುಗಳಿವು..! ಬೂದು ಕೂದಲು ಮತ್ತೆ ಬರದಂತೆ ತಡೆಯಲು ಹೀಗೆ ಮಾಡಿ ಸಾಕು..

ದಿನದ ಯಾವ ಸಮಯದಲ್ಲಿ ಸೂರ್ಯನ ಬೆಳಕು ವಿಟಮಿನ್ ʼಡಿʼ ನೀಡುತ್ತದೆ?

ನೀವು ಯಾವುದೇ ಸಮಯದಲ್ಲಿ ಬಿಸಿಲಿನಲ್ಲಿ ಕುಳಿತರೆ ನಿಮ್ಮ ದೇಹಕ್ಕೆ ವಿಟಮಿನ್ ʼಡಿʼ ಸಿಗುತ್ತದೆ ಎಂದಲ್ಲ. ವಿಟಮಿನ್ ʼಡಿʼ ಪಡೆಯಲು ಬೇಸಿಗೆಯಲ್ಲಿ ಬೆಳಗ್ಗೆ 8 ಗಂಟೆಯವರೆಗೆ ಸೂರ್ಯನ ಬೆಳಕನ್ನು ತೆಗೆದುಕೊಳ್ಳಬೇಕು. ಚಳಿಗಾಲದಲ್ಲಿ ಸೂರ್ಯ ತಡವಾಗಿ ಉದಯಿಸುವುದರಿಂದ ರಾತ್ರಿ 9 ಗಂಟೆಯವರೆಗೆ ಸೂರ್ಯನ ಸ್ನಾನ ಮಾಡಬಹುದು. ಇದರಿಂದ ದೇಹಕ್ಕೆ ವಿಟಮಿನ್ ʼಡಿʼ ದೊರೆಯುತ್ತದೆ. ಇದರ ನಂತರದ ಸೂರ್ಯನ ಬೆಳಕು ದೇಹಕ್ಕೆ ಹಾನಿಕಾರಕವಾಗಿರುತ್ತದೆ.

ವಿಟಮಿನ್ ʼಡಿʼ ಕೊರತೆ ನೀಗಿಸುವುದು ಹೇಗೆ?

ದೇಹದಲ್ಲಿ ವಿಟಮಿನ್ ʼಡಿʼ ಕೊರತೆಯನ್ನು ನೀಗಿಸಲು ನಿಮ್ಮ ಆಹಾರದಲ್ಲಿ ಕೆಲವು ವಿಶೇಷ ಆಹಾರಗಳನ್ನು ಸೇರಿಸಬೇಕು. ಹಸುವಿನ ಹಾಲಿನಲ್ಲಿ ವಿಟಮಿನ್ ʼಡಿʼ ಕಂಡುಬರುತ್ತದೆ. ನಿಮ್ಮ ಆಹಾರದಲ್ಲಿ ಡೈರಿ ಉತ್ಪನ್ನಗಳನ್ನು ಸೇರಿಸಲು ಮರೆಯದಿರಿ. ಅಣಬೆಗಳು, ಧಾನ್ಯಗಳು, ಕಾಳುಗಳು, ಮೊಟ್ಟೆಗಳು, ಕಿತ್ತಳೆ ರಸದಂತಹ ಸಸ್ಯ ಆಧಾರಿತ ಆಹಾರಗಳು ವಿಟಮಿನ್ ʼಡಿʼ ಯಲ್ಲಿ ಸಮೃದ್ಧವಾಗಿವೆ. ನಿಮ್ಮ ಆಹಾರದಲ್ಲಿ ಈ ವಸ್ತುಗಳ ಸೇವನೆಯನ್ನು ಹೆಚ್ಚಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಇದನ್ನೂ ಓದಿ: ಜಿಮ್, ಡಯಟ್ ಬೇಕಿಲ್ಲ..! ನೀರಿನಲ್ಲಿ ಈ ಎಲೆ ಬೆರೆಸಿ ಕುಡಿದ್ರೆ ಬೆಣ್ಣೆಯಂತೆ ಕರಗುತ್ತೆ ಡೊಳ್ಳು ಹೊಟ್ಟೆ...!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News