ಮೊಸರಿಗಿಂತಲೂ ಮಜ್ಜಿಗೆ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು..! ಇದು ನ್ಯಾಚುರಲ್‌ ಸೂಪರ್‌ ಡ್ರಿಂಕ್‌.. ಹೇಗೆ ಗೊತ್ತೆ..?

Buttermilk and Curd : ಬೇಸಿಗೆ ಕಾಲದ ಪ್ರಾರಂಭವಾಗಿದೆ.. ಹೊರಗಡೆ ಹೋಗಿ ಬಂದರೂ ಮನುಷ್ಯ ಸುಸ್ತಾಗುತ್ತಿದ್ದಾನೆ. ಈ ವೇಳೆ ಕೆಲವರು ಅಂಗಡಿಯಲ್ಲಿ ದೊರೆಯುವ ಸಕ್ಕರೆಯುಕ್ತ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲಿ.. ಬೇಸಿಗೆ ಕಾಲದಲ್ಲಿ ಮಜ್ಜಿಗೆ ಸೂಪರ್‌ ನ್ಯಾಚುರಲ್‌ ಡ್ರಿಂಗ್‌..

Written by - Krishna N K | Last Updated : Mar 5, 2025, 01:50 PM IST
    • ಬೇಸಿಗೆ ಕಾಲದ ಪ್ರಾರಂಭವಾಗಿದೆ
    • ಆರೋಗ್ಯದ ರಕ್ಷಣೆ ಪ್ರಮುಖವಾಗಿದೆ
    • ಮೊಸರಿಗಿಂತ ಮಜ್ಜಿಗೆ ಹೆಚ್ಚು ಕುಡಿಯಿರಿ
ಮೊಸರಿಗಿಂತಲೂ ಮಜ್ಜಿಗೆ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು..! ಇದು ನ್ಯಾಚುರಲ್‌ ಸೂಪರ್‌ ಡ್ರಿಂಕ್‌.. ಹೇಗೆ ಗೊತ್ತೆ..?

Curd v/s buttermilk : ಬಿಸಿಲಿಗೆ ಬೆಂದ ಜೀವ ಒಂದು ಲೋಟ ಮಜ್ಜಿಗೆ ಕುಡಿದ್ರೆ ಸಾಕು ಎಂಥಾ ಸಸ್ತು ಇದ್ದರೂ ಮಾಯವಾಗಿ ಹೋಗುತ್ತೆ. ಬೇಸಿಗೆ ಕಾಲದಲ್ಲಿ ಮನೆಯಲ್ಲಿ ಮಜ್ಜಿಗೆ ಶೇಖರಣೆ ಮಾಡಿ ಇಟ್ಟು ಆಡಿ ಮಕ್ಕಳಿಗೆ, ಕೆಲಸ ಮಾಡಿ ಬರುವ ಹಿರಿಯರಿಗೆ ಕುಡಿಯಲು ಅಮ್ಮಂದಿರು ಮೊದಲು ಕೊಡುವ ಪದಾರ್ಥವೇ ಇದು. 

Add Zee News as a Preferred Source

ಇನ್ನೂ ಅನೇಕ ಜನರಿಗೆ ಪ್ರತಿದಿನ ಊಟ ಆದ್ಮೇಲೆ ಮಜ್ಜಿಗೆ ಕುಡಿಯುವ ಅಭ್ಯಾಸ ಇರುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಹಾಲಿನಿಂದ ಮೊಸರು, ಮೊಸರಿನಿಂದ ಮಜ್ಜಿಗೆ ತಯಾರಾಗುತ್ತೆ ಎಂಬ ವಿಚಾರ ಬಹುತೇಕ ಎಲ್ಲರಿಗೂ ಗೊತ್ತಿದೆ. ಮೊಸರಿನಿಂದಲೇ ಸೃಷ್ಟಿಯಾಗುವ ಮಜ್ಜಿಗೆ ಆರೋಗ್ಯದ ದೃಷ್ಟಿಯಿಂದ ಅದಕ್ಕಿಂತಲೂ ಒಳ್ಳೆಯದು. 

ಇದನ್ನೂ ಓದಿ:ದೀರ್ಘ ಸಮಯ 'ಮೂತ್ರ' ಹಿಡಿದಿಟ್ಟುಕೊಳ್ಳುವ ಅಭ್ಯಾಸ ನಿಮಗೂ ಇದ್ಯಾ... ಈ ಕಾಯಿಲೆಗಳಿಗೆ ತುತ್ತಾಗಬಹುದು, ಎಚ್ಚರ..!

ಹೌದು.. ಮೊಸರನ್ನು ಕಡೆದು ಮಜ್ಜಿಗೆ ಮಾಡಲಾಗುತ್ತದೆ. ಮಜ್ಜಿಗೆಗೆ ಉಪ್ಪು, ಮೆಣಸು ಹಾಕಿ ಸ್ವಲ್ಪ ಅಲ್ಲಾಡಿಸಿ ಕುಡಿದರೆ.. ಎಂಥಾ ಸುಸ್ತು ಇದ್ದರೂ ಕ್ಷಣಾರ್ಧದಲ್ಲಿ ಮಾಯವಾಗಿ, ಮತ್ತೇ ಚೈತನ್ಯ ಬರುತ್ತದೆ. ಅಲ್ಲದೆ ನಿದ್ದೆಯೂ ವೇಗವಾಗಿ ಬರುತ್ತದೆ. ಮೊಸರಿಗಿಂತ ಮಜ್ಜಿಗೆ ಹೇಗೆ ಉತ್ತಮ..? ಬನ್ನಿ ತಿಳಿಯೋಣ..

ಮಜ್ಜಿಗೆ ಆರೋಗ್ಯ ಪ್ರಯೋಜನಗಳು

ಮಜ್ಜಿಗೆ ಡಿಹೈಡ್ರೇಷನ್ ದೂರ ಮಾಡೋಡುತ್ತದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು  
ಮಸಾಲೆಯುಕ್ತ ಆಹಾರವನ್ನು ಸೇವನೆ ನಂತರ ಹೊಟ್ಟೆಯಲ್ಲಿ ಉಂಟಾಗುವ ಕಿರಿ ಕಿರಿಯನ್ನು ಇದು ನಿವಾರಿಸುತ್ತದೆ.
ಅತಿಯಾಗಿ ಆಹಾರ ಸೇವಿಸಿದ ನಂತರ ಮಜ್ಜಿಗೆ ಕುಡಿದರೆ ಕೊಬ್ಬು ಕಡಿಮೆಯಾಗುತ್ತದೆ.
ಮಜ್ಜಿಗೆ ಹಾಲಿನ ನಂತರ ಅತಿ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ ಪದಾರ್ಥ
ಹೆಚ್ಚಿನ ಪ್ರಮಾಣದ ವಿಟಮಿನ್ ಹೊಂದಿರುವ ಮಜ್ಜಿಗೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ಒಟ್ಟಾರೆಯಾಗಿ ಆರೋಗ್ಯ ದೃಷ್ಟಿಯಿಂದ ನೋಡುವುದಾದರೆ ಮೊಸರು ಹಾಗೂ ಮಜ್ಜಿಗೆ ಎರಡೂ ಉತ್ತಮ. ಆದರೆ ಮಜ್ಜಿಗೆಗೆ ಮೊಸರಿಗಿಂತ ಒಂದು ಕೈ ಮೇಲಿರುತ್ತದೆ.. ಅಂದಹಾಗೆ ಬೇಸಿಗೆಯ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.. ರಾಸಾಯನಿಕಯುಕ್ತ ಪಾನಿಯ ಬಿಟ್ಟು ಮಜ್ಜಿಗೆ ಕುಡಿಯುವುದನ್ನು ಮರೆಯಬೇಡಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News