ಚಹಾ ಕೆಡಲು ಎಷ್ಟು ಸಮಯ ಬೇಕು, ಆ ಟೀ ಕುಡಿದ್ರೆ ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು ಗೊತ್ತೆ..?

Tea health benefits : ಬಹುತೇಕ ಎಲ್ಲರೂ ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದರೆ ಚಹಾ ತಯಾರಿಸಿದ ನಂತರ ಎಷ್ಟು ಸಮಯಕ್ಕೆ ಅದು ಕೆಡುತ್ತದೆ ಅಂತ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದು ನಿಮ್ಮ ಆರೋಗ್ಯಕ್ಕೂ ಹಾನಿಕಾರಕ... ಚಹಾದಲ್ಲೂ ಹಲವು ವಿಧಗಳಿವೆ. ಹಾಗಾದರೆ ಯಾವ ಚಹಾ ಬೇಗನೆ ಹಾಳಾಗುತ್ತದೆ..? ಬನ್ನಿ ನೋಡೋಣ..

Written by - Krishna N K | Last Updated : Apr 20, 2025, 05:33 PM IST
    • ಬಹುತೇಕ ಎಲ್ಲರೂ ಚಹಾ ಕುಡಿಯಲು ಇಷ್ಟಪಡುತ್ತಾರೆ.
    • ಕೆಲವರು ಬೆಳಿಗ್ಗೆ ಮಾಡಿದ ಚಹಾವನ್ನು ದಿನಪೂರ್ತಿ ಕುಡಿತಾರೆ
    • ಬೆಳಿಗ್ಗೆ ಮಾಡಿದ ಚಹಾ ಹಾಳಾಗಲು ಎಷ್ಟು ಸಮಯ ಬೇಕು ಗೊತ್ತೆ..?
ಚಹಾ ಕೆಡಲು ಎಷ್ಟು ಸಮಯ ಬೇಕು, ಆ ಟೀ ಕುಡಿದ್ರೆ ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು ಗೊತ್ತೆ..?

Tea Shelf Life : ಮೊದಲನೆಯದಾಗಿ, ಯಾವ ರೀತಿಯ ಚಹಾ ಬೇಗನೆ ಹಾಳಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ... ಗ್ರೀನ್‌ ಟೀ, ಹಾಲಿನ ಚಹಾ, ಕಪ್ಪು ಕಾಫಿ ಅಥವಾ ಹಾಲಿನೊಂದಿಗೆ ಕಾಫಿ..? ಹಸಿರು ಚಹಾ, ಹಾಲಿನ ಚಹಾ, ಕಪ್ಪು ಕಾಫಿ ಅಥವಾ ಹಾಲಿನೊಂದಿಗೆ ತಯಾರಿಸಿದ ಕಾಫಿಗಳಲ್ಲಿ, ಹಾಲಿನ ಚಹಾ ಮೊದಲು ಹಾಳಾಗುತ್ತದೆ. ಗ್ರೀನ್ ಟೀ ಬಗ್ಗೆ ಹೇಳುವುದಾದರೆ, ಗ್ರೀನ್ ಟೀ 6 ರಿಂದ 8 ಗಂಟೆಗಳ ನಂತರ ಕೆಟ್ಟು ಹೋಗುತ್ತದೆ. 

Add Zee News as a Preferred Source

ಹಾಲಿನೊಂದಿಗೆ ಚಹಾ ಕುಡಿದರೆ 2 ರಿಂದ 4 ಗಂಟೆಗಳಲ್ಲಿ ಹಾಳಾಗುತ್ತದೆ ಏಕೆಂದರೆ ಹಾಲಿನಲ್ಲಿ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳು ಬೆಳೆಯುತ್ತವೆ. ಕಪ್ಪು ಚಹಾದ ಬಗ್ಗೆ ಹೇಳುವುದಾದರೆ, ಕಪ್ಪು ಚಹಾ 8 ರಿಂದ 12 ಗಂಟೆಗಳ ನಂತರ ಕೆಟ್ಟು ಹೋಗಬಹುದು, ಆದರೆ ಸರಿಯಾಗಿ ಸಂಗ್ರಹಿಸಿದರೆ, ಅದು ದೀರ್ಘಕಾಲ ತಾಜಾವಾಗಿರುತ್ತದೆ.

ಇದನ್ನೂ ಓದಿ:ಟೈಪ್-5 ಮಧುಮೇಹ ಎಂದರೇನು.. ಇದರಿಂದಾಗುವ ಆರೋಗ್ಯ ಸಮಸ್ಯೆಗಳೇನು ಗೊತ್ತೆ..?

ಹಾಲಿನೊಂದಿಗೆ ಕಾಫಿ ಕುಡಿದರೆ 4 ರಿಂದ 6 ಗಂಟೆಗಳಲ್ಲಿ ಹಾಳಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಚಹಾದಿಂದ ಚಹಾ ಎಲೆಗಳನ್ನು ತೆಗೆದು, ಸೋಸಿ, ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದರೆ, ಅದು ದೀರ್ಘಕಾಲ ತಾಜಾವಾಗಿರಬಹುದು.

ದೀರ್ಘಕಾಲದಿಂದ ಸಂಗ್ರಹಿಸಿಟ್ಟ ಚಹಾ ಕುಡಿಯುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು, ಇದು ಹೊಟ್ಟೆಯ ಸಮಸ್ಯೆಗಳು, ಹೊಟ್ಟೆ ಉಬ್ಬರ, ಸೆಳೆತ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, 2 - 4 ಗಂಟೆಗಳ ಕಾಲ ಇಟ್ಟಿರುವ ಚಹಾವನ್ನು ಬಿಸಿ ಮಾಡಿ ಕುಡಿಯಬಾರದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News