)
Dengue Fever symptoms: ಈ ತಂಪಿನ ಸಮಯದಲ್ಲಿ ಜಿಟಿ ಜಿಟಿ ಮಳೆಗೆ ಎಲ್ಲೆಂದರಲ್ಲಿ ಮಳೆ ನೀರು ನಿಂತು ಅದರಲ್ಲಿ ಸುಲಭವಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಡೆಂಗ್ಯೂ ಹರಡುವಂತಹ ಸೊಳ್ಳೆಗಳು ಸಹ ಈ ಕೊಳಚೆ ನೀರಿನಲ್ಲಿ ಹುಟ್ಟಿಕೊಂಡು ರೋಗ ಉಲ್ಬಣಕ್ಕೆ ಕಾರಣವಾಗುತ್ತವೆ. ಈ ಸೊಳ್ಳೆಗಳು ನಮಗೆ ಕಚ್ಚಿದಾಗ ಡೆಂಗ್ಯೂದಂತಹ ಮಾರಕ ರೋಗ ಕಾಣಿಸಿಕೊಳ್ಳುತ್ತದೆ.
ಹೌದು.. ಡೆಂಗ್ಯೂ ಜ್ವರವು ಎಡಿಸ್ ಜಾತಿಯ ಸೊಳ್ಳೆಗಳು ಹರಡುವ ವೈರಲ್ ಸೋಂಕು. ಇದನ್ನು ನಿರ್ಲಕ್ಷಿಸುವುದು ಜೀವಕ್ಕೆ ಅಪಾಯಕಾರಿ. ಕೆಲವೊಮ್ಮೆ ಇದು ಸಾಮಾನ್ಯ ಜ್ವರದಂತೆ ಕಾಣಿಸಿಕೊಂಡರೂ ಕೆಲವೊಂದು ಗಂಭೀರ ಲಕ್ಷಣಗಳು ಇದನ್ನು ಇತರ ಜ್ವರಗಳಿಂದ ವಿಭಿನ್ನವಾಗಿಸುತ್ತವದೆ. ಈ ಕೆಳಗಿನ ಮೂರು ಭಯಾನಕ ಲಕ್ಷಣಗಳು ನಿಮಗೆ ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ.
ತೀವ್ರ ತಲೆನೋವು ಮತ್ತು ಕಣ್ಣಿಗೆ ಒಳಗೆ ನೋವು : ಡೆಂಗ್ಯೂ ಜ್ವರ ಉಂಟಾದಾಗ ಸಾಮಾನ್ಯ ತಲೆನೋವಿನ ಜೊತೆಗೆ ಕಣ್ಣುಗಳ ಹಿಂದೆ ತೀವ್ರ ನೋವು ಉಂಟಾಗುತ್ತದೆ. ಇದು ಸಾಮಾನ್ಯ ಶೀತ ಅಥವಾ ಜ್ವರದಿಂದ ಬರುವ ತಲೆನೋವಿಗಿಂತ ಭಿನ್ನವಾಗಿರುತ್ತದೆ.
ಚರ್ಮದ ಮೇಲೆ ಚುಕ್ಕೆಗಳು (Rashes) : ಚರ್ಮದ ಮೇಲೆ ಕೀಟ ಕಚ್ಚಿದ ಹಾಗೆ ಅಥವಾ ಸಣ್ಣ ಸಣ್ಣ ಚುಕ್ಕಿಗಳು ಕಾಣಿಸಬಹುದು. ಕೆಲವೊಮ್ಮೆ ಇವು ಉರಿಯೂತ ಕೂಡ ಉಂಟು ಮಾಡಬಹುದು. ಇದು ರಕ್ತದಲ್ಲಿ ಪ್ಲೇಟ್ಲೆಟ್ಗಳ ಅಂಶ ಕಡಿಮೆಯಾಗುತ್ತಿರುವ ಸೂಚನೆ ಇರಬಹುದು.
ಅತಿಯಾದ ಮೈನೋವು, ವಾಂತಿ ಮತ್ತು ಹೊಟ್ಟೆನೋವು : ಡೆಂಗ್ಯೂ ಜ್ವರ ತೀವ್ರವಾಗುತ್ತಿರುವಾಗ ಹೊಟ್ಟೆನೋವು ಮತ್ತು ನಿರಂತರ ವಾಂತಿ ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣಗಳಾಗಿವೆ. ಇವು ದೇಹದ ಒಳಾಂಗಗಳಲ್ಲಿ ಸೋಂಕು ಹರಡುತ್ತಿರುವ ಸೂಚನೆ ಆಗಿರಬಹುದು.
ಡೆಂಗ್ಯೂ ಜ್ವರವನ್ನು ತಡವಾಗಿ ಗುರುತಿಸಿದರೆ ಸ್ಥಿತಿ ಗಂಭೀರವಾಗಬಹುದು. ಆದ್ದರಿಂದ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ ಮತ್ತು ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ನಿಯಮಿತವಾಗಿ ನೀರನ್ನು ಕುಡಿಯುವುದು, ಮೈತುಂಬ ಬಟ್ಟೆ ಧರಿಸುವುದು ನೀವು ಡೆಂಗ್ಯೂ ತಡೆಯಲು ಅನುಸರಿಸುವ ಸುಲಭ ಕ್ರಮಗಳು.