ಒಂದೇ ಒಂದು ತಿಂಗಳು ಆಲ್ಕೋಹಾಲ್ ಕುಡಿಯದಿದ್ದರೆ ಏನಾಗುತ್ತೆ ಗೊತ್ತಾ?

ಮದ್ಯಪಾನವು ನಿದ್ರೆ ತರಿಸಿದರೂ, ಅದು ಗುಣಮಟ್ಟದ ನಿದ್ದೆಯಾಗಿರುವುದಿಲ್ಲ. ಮದ್ಯಪಾನವಿಲ್ಲದೆ ನಿದ್ರಿಸುವುದರಿಂದ ನೀವು ಚೆನ್ನಾಗಿ ನಿದ್ರಿಸುತ್ತೀರಿ. ಎಚ್ಚರವಾದಾಗ ಹೆಚ್ಚು ಉಲ್ಲಾಸದಿಂದಿರುತ್ತೀರಿ. 

Written by - Puttaraj K Alur | Last Updated : Apr 19, 2025, 10:04 PM IST
  • ಒಂದು ತಿಂಗಳು ಮದ್ಯಪಾನ ಮಾಡದಿದ್ದರೆ ಲಿವರ್‌ ಸರಿಯಾಗಿ ಕಾರ್ಯನಿರ್ವಹಿಸುತ್ತದೆ
  • ನಿಮ್ಮ ರಕ್ತ ಶುದ್ಧವಾಗುತ್ತದೆ, ಚರ್ಮ ಮತ್ತೆ ಸುಂದರವಾಗುತ್ತದೆ & ಸುಕ್ಕುಗಳು ಕಡಿಮೆಯಾಗುತ್ತವೆ
  • ಒಂದು ತಿಂಗಳು ಮದ್ಯಪಾನ ಮಾಡದಿದ್ದರೆ ನಿಮ್ಮ ಮೆದುಳಿನ ಕಾರ್ಯಕ್ಷಮತೆ ಸುಧಾರಿಸುತ್ತದೆ
ಒಂದೇ ಒಂದು ತಿಂಗಳು ಆಲ್ಕೋಹಾಲ್ ಕುಡಿಯದಿದ್ದರೆ ಏನಾಗುತ್ತೆ ಗೊತ್ತಾ?

Alcohol side effects: ಅನೇಕರಿಗೆ ಮದ್ಯಪಾನದ ಅಭ್ಯಾಸವಿರುತ್ತದೆ. ಮದ್ಯ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ತಿಳಿದಿದ್ದರೂ ಪಾರ್ಟಿ, ಸ್ನೇಹಿತರು, ಸಂತೋಷ, ಸುಖ-ದುಃಖ ಹೀಗೆ ಮುಂತಾದ ಕಾರಣಕ್ಕೆ ಪ್ರತಿದಿನವೂ ಸೇವಿಸುವವರಿದ್ದಾರೆ. ಕುಡಿತದ ಚಟ ಅಂಟಿಸಿಕೊಂಡವರು ವಾರಕ್ಕೊಮ್ಮೆಯಾದರೂ ವಾರಾಂತ್ಯದ ಪಾರ್ಟಿಗಳಲ್ಲಿ ಮದ್ಯ ಸೇವಿಸುತ್ತಾರೆ. ಇದರಿಂದ ಭವಿಷ್ಯದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಕೆಟ್ಟ ಅಭ್ಯಾಸವನ್ನ ರೂಢಿಸಿಕೊಂಡವರು ಒಂದೇ ಒಂದು ತಿಂಗಳು ಮದ್ಯಪಾನ ತ್ಯಜಿಸಿದರೆ ಅವರ ಶರೀರದಲ್ಲಿ ಯಾವ ಬದಲಾವಣೆಗಳಾಗುತ್ತವೆ ಗೊತ್ತಾ? ಇದರ ಮಾಹಿತಿ ಇಲ್ಲಿದೆ ನೋಡಿ...  

Add Zee News as a Preferred Source

ಸ್ಮರಣಶಕ್ತಿ ವೃದ್ಧಿಯಾಗುತ್ತದೆ: ಒಂದು ತಿಂಗಳು ಮದ್ಯಪಾನ ತ್ಯಜಿಸುವುದರಿಂದ ಹಲವಾರು ಅದ್ಭುತ ಆರೋಗ್ಯ ಲಾಭಗಳಿವೆ. ಮದ್ಯಪಾನದಿಂದ ನಿಧಾನವಾಗಿ ಮರೆವು ಹೆಚ್ಚಾಗುತ್ತದೆ. ಒಂದು ತಿಂಗಳು ಮದ್ಯಪಾನ ಮಾಡದಿದ್ದರೆ ನಿಮ್ಮ ಮೆದುಳಿನ ಕಾರ್ಯಕ್ಷಮತೆ ಸುಧಾರಿಸುತ್ತದೆ ಮತ್ತು ಸ್ಮರಣಶಕ್ತಿ ವೃದ್ಧಿಯಾಗುತ್ತದೆ. 

ಇದನ್ನೂ ಓದಿ: ದೇಹಕ್ಕೆ ಯಾವ ಮಟ್ಟದ ಶುಗರ್‌ ಹಾನಿಕಾರಕ..? ಇನ್ಸುಲಿನ್‌ ತೆಗೆದುಕೊಳ್ಳಲು ದೇಹದಲ್ಲಿನ ಸಕ್ಕರೆ ಲೆವೆಲ್‌ ಎಷ್ಟಿರಬೇಕು..

ಆಯಾಸ ಮತ್ತು ದೌರ್ಬಲ್ಯ: ಮದ್ಯಪಾನದಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತಗಳಾಗುತ್ತವೆ ಮತ್ತು ಆಕಸ್ಮಿಕ ಶಕ್ತಿ ಕುಗ್ಗುವಿಕೆಗೆ ಕಾರಣವಾಗುತ್ತದೆ. ಮದ್ಯಪಾನ ತ್ಯಜಿಸುವುದರಿಂದ ದಿನವಿಡೀ ಸ್ಥಿರವಾದ ಶಕ್ತಿ ಹೊಂದಿರುತ್ತೀರಿ. ನಿಮ್ಮಲ್ಲಿ ಚೈತನ್ಯದಾಯಕ ಭಾವನೆ ಮೂಡುತ್ತದೆ. ಆಯಾಸ ಮತ್ತು ದೌರ್ಬಲ್ಯ ಕಡಿಮೆಯಾಗುತ್ತದೆ.

ಯಂಗ್‌ ಆಗಿ ಕಾಣುತ್ತೀರಿ: ಮದ್ಯಪಾನಿಗಳು ತಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಾದವರಂತೆ ಕಾಣುತ್ತಾರೆ. ಅವರಿಗೆ ಚಿಕ್ಕ ವಯಸ್ಸಿನಲ್ಲೇ ಚರ್ಮದ ಮೇಲೆ ಸುಕ್ಕುಗಳು ಮೂಡುತ್ತವೆ. ಒಂದು ತಿಂಗಳು ಮದ್ಯಪಾನ ಮಾಡದಿದ್ದರೆ ನಿಮ್ಮ ಲಿವರ್‌ ಸರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ನಿಮ್ಮ ರಕ್ತ ಶುದ್ಧವಾಗುತ್ತದೆ. ಚರ್ಮ ಮತ್ತೆ ಸುಂದರವಾಗುತ್ತದೆ. ಸುಕ್ಕುಗಳು ಕಡಿಮೆಯಾಗುವುದನ್ನ ನೀವು ಕೆಲವೇ ದಿನಗಳಲ್ಲಿ ಕಾಣಬಹುದು. 

ಇದನ್ನೂ ಓದಿ: ಕಂಕುಳಿನ ಕಪ್ಪು ಕಲೆಗಳನ್ನು ನಿವಾರಿಸಲು ಈ ಮನೆ ಮದ್ದು ಬಳಸಿ..!

ಗುಣಮಟ್ಟದ ನಿದ್ದೆ: ಮದ್ಯಪಾನವು ನಿದ್ರೆ ತರಿಸಿದರೂ, ಅದು ಗುಣಮಟ್ಟದ ನಿದ್ದೆಯಾಗಿರುವುದಿಲ್ಲ. ಮದ್ಯಪಾನವಿಲ್ಲದೆ ನಿದ್ರಿಸುವುದರಿಂದ ನೀವು ಚೆನ್ನಾಗಿ ನಿದ್ರಿಸುತ್ತೀರಿ. ಎಚ್ಚರವಾದಾಗ ಹೆಚ್ಚು ಉಲ್ಲಾಸದಿಂದಿರುತ್ತೀರಿ. 

ಜೀರ್ಣಾಂಗ ವ್ಯವಸ್ಥೆ: ಮದ್ಯಪಾನ ಮಾಡಿದಾಗ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳುತ್ತದೆ. ಸ್ವಲ್ಪ ಸಮಯದ ನಂತರ, ನಿಮ್ಮ ಜೀರ್ಣಾಂಗ ವ್ಯವಸ್ಥೆ ಮತ್ತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. 

ಆಯಸ್ಸು ಹೆಚ್ಚಿಸಿಕೊಳ್ಳಬಹುದು: ಒಂದು ತಿಂಗಳು ಮದ್ಯಪಾನ ತ್ಯಜಿಸುವುದರಿಂದ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಬಹುದು. ನೀವು ಮದ್ಯಪಾನ ಮಾಡಿದ ಪ್ರತಿ ಬಾರಿ ನಿಮ್ಮ ಯಕೃತ್ತು ಹಾನಿಗೊಳಗಾಗುತ್ತದೆ. ನಿಮ್ಮ ಅಮೂಲ್ಯ ಆಯಸ್ಸು ಕಡಿಮೆಯಾಗುತ್ತದೆ. ಇಂದೇ ಮದ್ಯಪಾನವನ್ನ ತ್ಯಜಿಸುವ ಮೂಲಕ ನೀವು ಕಳೆದುಕೊಂಡಿರುವ ಜೀವನವನ್ನು ಮರಳಿ ಪಡೆಯಬಹುದು. ಇದಷ್ಟೇ ಅಲ್ಲದೇ ಒಂದು ತಿಂಗಳು ಮದ್ಯ ಖರೀದಿಸದಿದ್ದರೆ, ನೀವು ಸಾಕಷ್ಟು ಹಣ ಉಳಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News