)
Black Coffee Benefits
: ನಮ್ಮಲ್ಲಿ ಹಲವರಿಗೆ ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಜನರು ಈ ಕಾಫಿಯನ್ನು ಎರಡು ವಿಧಗಳಲ್ಲಿ ಸೇವಿಸುತ್ತಾರೆ. ಒಂದು ಸಕ್ಕರೆಯಿಂದ ಮಾಡಿದ ಕಾಫಿ, ಇನ್ನೊಂದು ಹಾಲು ಇಲ್ಲದೆ ತೆಗೆದುಕೊಳ್ಳುವ ಬ್ಲ್ಯಾಕ್ ಕಾಫಿ. ಕಪ್ಪು ಕಾಫಿ ಕಹಿಯಾಗಿರುವುದರಿಂದ ಅನೇಕ ಜನರು ಹಾಲು ಮತ್ತು ಸಕ್ಕರೆಯಿಂದ ಮಾಡಿದ ಕಾಫಿಯನ್ನು ಕುಡಿಯಲು ಬಯಸುತ್ತಾರೆ. ಆದರೆ ಅದು ನಿಮ್ಮ ದೇಹಕ್ಕೆ ಹೆಚ್ಚು ಒಳ್ಳೆಯದನ್ನು ಮಾಡುವುದಿಲ್ಲ. ಆದ್ದರಿಂದ ನೀವು ಡಾರ್ಕ್ ಕಾಫಿ ಅಂದರೆ ಬ್ಲ್ಯಾಕ್ ಕಾಫಿ ಕುಡಿದ್ರೆ, ಅದು ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿದೆ. ಡಾರ್ಕ್ ಕಾಫಿ ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ...
ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ. ನೀವು ದಣಿದಿದ್ದರೆ ಅಥವಾ ಆಲಸ್ಯ ಅನುಭವಿಸಿದರೆ, ನೀವು ಈ ಕಾಫಿ ಕುಡಿಯಬಹುದು. ಡಾರ್ಕ್ ಕಾಫಿ ಕುಡಿಯುವುದರಿಂದ ನೀವು ಚೈತನ್ಯಶೀಲರಾಗುತ್ತೀರಿ. ಇದಲ್ಲದೆ ನಿಮ್ಮ ಮೆದುಳು ಸಹ ಸಕ್ರಿಯವಾಗಿ ಕೆಲಸ ಮಾಡುತ್ತದೆ. ಇದು ನಾವು ಮಾಡುವ ಕೆಲಸದ ಮೇಲೆ ಗಮನವನ್ನ ಹೆಚ್ಚಿಸುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹ ಉಪಯುಕ್ತವಾಗಿದೆ. ಬ್ಲ್ಯಾಕ್ ಕಾಫಿ ನಮ್ಮ ದೇಹದ ಚಯಾಪಚಯ ಕ್ರಿಯೆಯನ್ನ ಸಹ ಸುಧಾರಿಸುತ್ತದೆ. ಇದು ದೇಹದಲ್ಲಿನ ಕ್ಯಾಲೊರಿಗಳನ್ನು ಸುಡುತ್ತದೆ. ಅದೇ ರೀತಿ ಇದು ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಸಹ ಕಡಿಮೆ ಮಾಡುತ್ತದೆ.
ಸ್ಮರಣೆ ಹೆಚ್ಚಿಸುತ್ತದೆ
ಕಾಫಿಯಲ್ಲಿರುವ ಕೆಫೀನ್ ಮೆದುಳಿನ ಕೋಶಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕಾಫಿ ಕುಡಿಯುವುದರಿಂದ ಸ್ಮರಣಶಕ್ತಿ ಹೆಚ್ಚುವುದಲ್ಲದೆ, ಗಮನವೂ ಸುಧಾರಿಸುತ್ತದೆ. ಕಚೇರಿಯಲ್ಲಿ ಕೆಲಸ ಮಾಡುವಾಗ ನೀವು ಆಲಸ್ಯ ಅನುಭವಿಸಿದರೆ, ನೀವು ಬ್ಲ್ಯಾಕ್ ಕಾಫಿ ಕುಡಿಯಬಹುದು. ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ನಿಮ್ಮ ಮನಸ್ಥಿತಿಯೂ ಸುಧಾರಿಸುತ್ತದೆ.
ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ
ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ದೇಹದ ಇನ್ಸುಲಿನ್ಗೆ ಸೂಕ್ಷ್ಮತೆಯು ಹೆಚ್ಚಾಗುತ್ತದೆ, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನ ನಿಯಂತ್ರಿಸಲು ಸಹಾಯ ಮಾಡುತ್ತದೆ. ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಪ್ರತಿದಿನ ಕಾಫಿ ಕುಡಿಯುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು.
ಮಲಬದ್ಧತೆ ನಿವಾರಿಸುತ್ತದೆ
ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ, ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ಚರ್ಮಕ್ಕೆ ಹೊಳಪನ್ನು ತರಲು ಸಹಾಯ ಮಾಡುತ್ತದೆ. ಬ್ಲ್ಯಾಕ್ ಕಾಫಿಯಲ್ಲಿ ಉತ್ಕರ್ಷಣ ನಿರೋಧಕಗಳಿವೆ. ಈ ವಸ್ತುಗಳು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ. ಅಲ್ಲದೆ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಚರ್ಮವು ಆರೋಗ್ಯಕರ ಮತ್ತು ಹೊಳೆಯುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)