)
Mistakes While Taking Medicine: ಸಣ್ಣಪುಟ್ಟ ಸಮಸ್ಯೆಗಳಿಗೆ ಮಾತ್ರೆಗಳನ್ನು ತೆಗೆದುಕೊಂಡ ನಂತರ ಅಪ್ಪಿತಪ್ಪಿನೂ ಈ ತಪ್ಪುಗಳನ್ನು ಮಾಡಬೇಡಿ.. ಏಕೆಂದರೆ ನೀವು ತಿಳಿಯದೇ ಮಾಡುವ ಕೆಲವು ಕೆಲಸಗಳು ನಿಮ್ಮನ್ನು ಮತ್ತಷ್ಟು ಅನಾರೋಗ್ಯಕ್ಕೀಡು ಮಾಡಬಹುದು.
ನಾವೆಲ್ಲರು ಸಣ್ಣಪುಟ್ಟ ಸಮಸ್ಯೆಗಳಿಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ಇದು ಅನಾರೋಗ್ಯದಿಂದ ಗುಣಮುಖರಾಗಲು ಎಲ್ಲರೂ ಅನುಸರಿಸುವ ಮಾರ್ಗವಾಗಿದೆ. ಆದರೆ ಈ ಔಷಧಿಗಳನ್ನು ತೆಗೆದುಕೊಂಡ ನಂತರ, ನಿಮಗೆ ಅರಿವಿಲ್ಲದೆಯೇ ಕೆಲವು ತಪ್ಪುಗಳನ್ನು ಮಾಡುತ್ತೀರಾ.. ಅಷ್ಟೇ ಅಲ್ಲ ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯ ಸುದಾರಿಸುವುದಿಲ್ಲ. ಬದಲಾಗಿ ಇನ್ನಷ್ಟು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
ಮದ್ಯಪಾನ ಮಾಡುವುದು
ಮಾತ್ರೆಗಳನ್ನು ತೆಗೆದುಕೊಂಡ ಎಂದಿಗೂ ಮದ್ಯಪಾನ ಮಾಡಬೇಡಿ. ಏಕೆಂದರೆ ನೋವು ನಿವಾರಕಗಳು, ಪ್ರತಿಜೀವಕಗಳು ಅಥವಾ ಮಾನಸಿಕ ಆರೋಗ್ಯ ಮಾತ್ರೆಗಳನ್ನು ತೆಗೆದುಕೊಂಡ ನಂತರ ಮದ್ಯಪಾನ ಮಾಡುವುದರಿಂದ ದೇಹದಲ್ಲಿ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಇದು ಲಿವರ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ದೇಹದಲ್ಲಿ ಕಡಿಮೆ ರಕ್ತದೊತ್ತಡ, ದೌರ್ಬಲ್ಯ, ಉಸಿರಾಟದ ತೊಂದರೆ ಮತ್ತು ಯಕೃತ್ತಿನ ಹಾನಿಗೆ ಕಾರಣವಾಗಬಹುದು.
ಚಹಾ, ಕಾಫಿ ಮತ್ತು ತಂಪು ಪಾನಿಯಾ ಕುಡಿಯುವುದು
ಮಾತ್ರೆಗಳನ್ನು ತೆಗೆದುಕೊಂಡ ನಂತರ ಚಹಾ, ಕಾಫಿ ಅಥವಾ ತಂಪು ಪಾನೀಯಗಳನ್ನು ಕುಡಿಯುವುದು ಸೂಕ್ತವಲ್ಲ. ಇವು ದೇಹದಲ್ಲಿ ಕೆಫೀನ್ ಮಟ್ಟವನ್ನು ಹೆಚ್ಚಿಸುತ್ತವೆ.ಅಷ್ಟೇ ಅಲ್ಲ ತ್ವರಿತ ಹೃದಯ ಬಡಿತ, ನಿದ್ರಾಹೀನತೆ ಮತ್ತು ಒತ್ತಡದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಮಸಾಲೆಯುಕ್ತ ಆಹಾರ ತ್ಯಜಿಸಿ
ಮಾತ್ರೆಗಳನ್ನು ತೆಗೆದುಕೊಂಡ ನಂತರ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ. ಅಂತಹ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ಉಂಟಾಗಬಹುದು. ಇದರೊಂದಿಗೆ ಗ್ಯಾಸ್ಟ್ರಿಕ್ ಆಮ್ಲೀಯತೆ, ಅಜೀರ್ಣ ಮತ್ತು ವಾಂತಿ ಕೂಡ ಉಂಟಾಗಬಹುದು.
ಕೆಲವು ಮಾತ್ರೆಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಡಿ
ಖಾಲಿ ಹೊಟ್ಟೆಯಲ್ಲಿ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ವಾಂತಿ, ನೋವು, ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಆದ್ದರಿಂದ ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು.
ವಾಹನ ಚಲಾಯಿಸುವುದು
ಕೆಲವು ಮಾತ್ರೆಗಳನ್ನು ತೆಗೆದುಕೊಂಡ ನಂತರ ವಾಹನ ಚಲಾಯಿಸುವುದು ಸೂಕ್ತವಲ್ಲ. ಆದ್ದರಿಂದ ನಿದ್ರೆ ಮಾತ್ರೆಗಳು ಮತ್ತು ಖಿನ್ನತೆ ನಿವಾರಕ ಟ್ಯಾಬ್ಲೆಟ್ಗಳನ್ನು ತೆಗೆದುಕೊಂಡ ನಂತರ ವಾಹನ ಚಲಾಯಿಸುವುದು ಅಪಾಯಕಾರಿ. ಇದರಿಂದ ಮೂರ್ಛೆ ಹೋಗಬಹುದು ಅಥವಾ ಅಪಘಾತಗಳು ಸಹ ಸಂಭವಿಸಬಹುದು.
ವ್ಯಾಯಾಮ
ಮಾತ್ರೆಗಳನ್ನು ತೆಗೆದುಕೊಂಡ ತಕ್ಷಣ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಇದು ಹೃದಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅರೆನಿದ್ರಾವಸ್ಥೆ, ವಾಂತಿ, ತಲೆನೋವು ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಔಷದಗಳನ್ನು ತೆಗೆದುಕೊಂಡ ನಂತರ ಜಾಗರೂಕರಾಗಿರಬೇಕು.