)
Kidney disease symptoms: ಕೆಲವೊಮ್ಮೆ ಕಣ್ಣು ಕೆಂಪಾಗುವುದು, ಆಗಾಗ ಕಣ್ಣೀರು ಬರುವುದು, ಕಣ್ಣಲ್ಲಿ ಉರಿ ಅಥವಾ ದೃಷ್ಟಿ ಕಮ್ಮಿಯಾಗುವುದು... ಈ ಲಕ್ಷಣಗಳು ಕಾಣಿಸಿಕೊಂಡಾಗ ನಾವು ಬಹಳಷ್ಟು ಬಾರಿ ಸಾಮಾನ್ಯ ಕಣ್ಣಿನ ತೊಂದರೆ ಎಂದು ತಿಳಿದು ಮನೆಯ ಉಪಚಾರದಿಂದಲೇ ನಿರ್ವಹಿಸಲು ಯತ್ನಿಸುತ್ತೇವೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಈ ರೀತಿಯ ಲಘು ತೊಂದರೆಗಳು ಕೆಲವೊಮ್ಮೆ ಗಂಭೀರವಾದ ಆಂತರಿಕ ಆರೋಗ್ಯ ಸಮಸ್ಯೆಗಳ ಮೊದಲ ಸೂಚನೆ ಆಗಿರಬಹುದು ಎಂದು ಹೇಳುತ್ತಾರೆ.
ಅದರಲ್ಲೂ ಮುಖ್ಯವಾಗಿ ಈ ರೀತಿಯ ಕಣ್ಣಿನ ಲಕ್ಷಣಗಳು ಮೂತ್ರಪಿಂಡ (Kidney) ಸಮಸ್ಯೆಗಳಿಗೂ ಸಂಬಂಧಿಸಿರಬಹುದು. ಮೂತ್ರಪಿಂಡ ದೇಹದ ಆಂತರಿಕ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದು ದೇಹದಿಂದ ವಿಷಕಾರಿ ವಸ್ತುಗಳನ್ನ ಹೊರಗೆ ಹಾಕುವುದು, ನೀರಿನ ಸಮತೋಲನ, ರಕ್ತದೊತ್ತಡ ನಿಯಂತ್ರಣ ಮತ್ತು ಹಿಮೋಗ್ಲೋಬಿನ್ ಉತ್ಪತ್ತಿಯಲ್ಲಿ ಸಹಾಯ ಮಾಡುವ ಮಹತ್ವದ ಅಂಗವಾಗಿದೆ.
ಮೂತ್ರಪಿಂಡದ ಸಮಸ್ಯೆ ಕಣ್ಣಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಆಗದಿದ್ದಾಗ ದೇಹದಲ್ಲಿ ಕಸದ ಪದಾರ್ಥಗಳು ಅಥವಾ ‘ಟಾಕ್ಸಿನ್ಗಳು’ ಜಮೆಯಾಗುತ್ತವೆ. ಈ ಟಾಕ್ಸಿನ್ಗಳು ಕಣ್ಣಿನ ಸಣ್ಣ ರಕ್ತನಾಳಗಳಲ್ಲಿ ಸಂಚರಿಸಿ ಅವುಗಳನ್ನು ಹಾನಿಗೊಳಿಸುತ್ತವೆ. ಇದರ ಪರಿಣಾಮ ಕಣ್ಣು ಊದುವುದು, ಕೆಂಪಾಗುವುದು ಅಥವಾ ದೃಷ್ಟಿ ದೋಷಗಳು ಕಾಣಿಸಿಕೊಳ್ಳಬಹುದು.
ಕೇಳಲು ಅಚ್ಚರಿ ಎನಿಸಿದರೂ ಇದು ನಿಜ. ಕಿಡ್ನಿ ತೊಂದರೆಗಳು ಅನೇಕ ಬಾರಿ ಮೊದಲಿಗೆ ದೇಹದಲ್ಲಿ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುವುದರ ಮೂಲಕ ಎಚ್ಚರಿಕೆ ನೀಡುತ್ತದೆ. ಇದನ್ನು "Hypertensive Retinopathy" ಅಥವಾ "Diabetic Retinopathy" ಎಂತಲೂ ಕರೆಯುತ್ತಾರೆ. ಇವು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಂದ ಕೂಡ ಬರುತ್ತವೆ.
ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?
ದೀರ್ಘಕಾಲದ ಕಣ್ಣು ಕೆಂಪಗಾಗುವಿಕೆ: ಕಣ್ಣುಗಳು ಕೆಂಪಗಾಗಿ ದಿನದಿಂದ ದಿನಕ್ಕೆ ಹೆಚ್ಚು ಉರಿಯೂತವನ್ನು ಕೊಡುತ್ತಿದೆಯೆಂದರೆ ಇದು ಒಳಜೀವಾಂಗದ ತೊಂದರೆಯ ಲಕ್ಷಣವಾಗಬಹುದು.
ಬೆಳಗಿನ ಜಾವ ಕಣ್ಣು ಊದಿಕೊಳ್ಳುವುದು: ಕಿಡ್ನಿಯು ದ್ರವ ಸಂಚಯ ನಿಯಂತ್ರಣ ಕ್ರಿಯೆಯನ್ನು ನಿರ್ವಹಿಸುವುದರಲ್ಲಿ ವಿಫಲವಾದರೆ ಈ ತೊಂದರೆ ಉಂಟಾಗಬಹುದು.
ದೃಷ್ಟಿ ಅಸ್ಪಷ್ಟತೆ ಅಥವಾ ಮಂದ ಬೆಳಕು ಕಾಣುವುದು: ಟಾಕ್ಸಿನ್ಗಳು ಕಣ್ಣಿನ ನಯವಾದ ರಕ್ತನಾಳಗಳಿಗೆ ಹಾನಿ ಮಾಡಿದ ಪಕ್ಷದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಮುಖ, ಕಣ್ಣು, ಕಾಲುಗಳಲ್ಲಿ ಊತ: ಇದು ಕಿಡ್ನಿಯ ದ್ರವ ನಿಯಂತ್ರಣ ವೈಫಲ್ಯದ ಮುಖ್ಯ ಸೂಚನೆಯಾಗಿರುತ್ತದೆ.
ಮಲಮೂತ್ರ ಸಮಸ್ಯೆ ಮತ್ತು ಸಾಮಾನ್ಯ ಶಕ್ತಿಯ ಕೊರತೆ: ಕಿಡ್ನಿ ಸಮಸ್ಯೆಗಳ ಎರಡನೇಯ ಹಂತದಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಲಕ್ಷಣ.
ಒಂದು ಸಾಮಾನ್ಯ ಕಣ್ಣಿನ ತೊಂದರೆ ಹಿಂದೆ ಗಂಭೀರ ಆರೋಗ್ಯ ಸಮಸ್ಯೆ ಇರುತ್ತದೆ. ಆದ್ದರಿಂದ ಈ ಸೂಕ್ಷ್ಮ ವಿಷಯಗಳಲ್ಲಿ ನೀವು ಎಚ್ಚರದಿಂದ ಇರಬೇಕಾಗುತ್ತದೆ. ನಿಮ್ಮ ದೇಹ ಯಾವುದೇ ಆರೋಗ್ಯ ಸಂಬಂಧಿ ಅಪಾಯಗಳ ಕುರಿತು ಯಾವಾಗಲೂ ನಿಮಗೆ ಸೂಚನೆಗಳನ್ನು ಕೊಡುತ್ತಿರುತ್ತದೆ. ಹೀಗಾಗಿ ಅವುಗಳನ್ನ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ