ನವದೆಹಲಿ : ನಿಮ್ಮ ಫಿಟ್ನೆಸ್ ನಾವು ಏನು ತಿನ್ನುತ್ತೇವೆ ಎನ್ನುವುದರ ಮೇಲೆ ನಿಂತಿದೆ. ಇತ್ತೀಚಿನ ದಿನಗಳಲ್ಲಂತೂ ಆರೋಗ್ಯದ ಬಗ್ಗೆ ಜನರು ವಿಶೇಷ ಕಾಳಜಿ ವಹಿಸುತ್ತಾರೆ ಕೆಲವರು ಬೆಳಿಗ್ಗೆ ಎದ್ದು ಉಗುರು ಬೆಚ್ಚನೆಯ ನೀರನ್ನು (hot water) ಕುಡಿಯುತ್ತಾರೆ. ಇನ್ನು ಕೆಲವರು ಆಮ್ಲಾ ಜ್ಯೂಸ್ ಕುಡಿಯುತ್ತಾರೆ.  ಆದರೆ, ಬೆಳಿಗ್ಗೆ ಎದ್ದ ಕೂಡಲೇ ಹಾಲಿನೊಂದಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಲಿದೆ (Jaggery With Milk Health Benefits).  


COMMERCIAL BREAK
SCROLL TO CONTINUE READING

ನಾಚ್ಯುರಲ್ ಬ್ಲಡ್ ಪುರಿಫೈಯರ್ :
ವಿಟಮಿನ್ ಎ, ವಿಟಮಿನ್ ಬಿ, ಡಿ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಲ್ಯಾಕ್ಟಿಕ್ ಆಸಿಡ್ ಹಾಲಿನಲ್ಲಿ ಕಂಡುಬರುತ್ತದೆ. ಮತ್ತೊಂದೆಡೆ, ಬೆಲ್ಲದಲ್ಲಿಯೂ ಇಂತಹ ಗುಣಗಳು ಕಂಡುಬರುತ್ತವೆ, ಇದು ನಿಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಸ್ವಚ್ಛಗೊಳಿಸುತ್ತದೆ. ಆದ್ದರಿಂದ, ಪ್ರತಿದಿನ ಬಿಸಿ ಹಾಲು (Milk) ಮತ್ತು ಬೆಲ್ಲವನ್ನು ಸೇವಿಸುವುದರಿಂದ, ನಿಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರಗೆ ಹಾಕಲು ಸಹಾಯವಾಗುತ್ತದೆ. 


ಇದನ್ನೂ ಓದಿ : Beauty Tips: ನಿಮ್ಮ ಮುಖದ ಕಾಂತಿಗೆ ಮಾಂತ್ರಿಕ ಟಾನಿಕ್ ಆಗಲಿದೆ ಒಂದು ಹಾಗಲಕಾಯಿ


ಬೊಜ್ಜು ನಿಯಂತ್ರಣಕ್ಕೆ : 
ನೀವು ಹಾಲಿನೊಂದಿಗೆ ಸಕ್ಕರೆಯನ್ನು ಬಳಸುತ್ತಿದ್ದರೆ ಅದರ ಬದಲಿಗೆ ಬೆಲ್ಲವನ್ನು ಬಳಸಿ ನೋಡಿ. ಬೆಲ್ಲವನ್ನು ಬಳಸುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ (weight loss).  


ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : 
ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಬಿಸಿ ಹಾಲು ಮತ್ತು ಬೆಲ್ಲವನ್ನು ಸೇವಿಸುವುದರಿಂದ, ಜೀರ್ಣಕ್ರಿಯೆ (digestion) ಉತ್ತಮಗೊಳ್ಳುತ್ತದೆ.  ಹೊಟ್ಟೆಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯಿಂದಲೂ ಮುಕ್ತಿ ಸಿಗುತ್ತದೆ. 


ಕೀಲು ನೋವಿಗೆ ಪರಿಹಾರ : 
ಬೆಲ್ಲ ತಿನ್ನುವುದರಿಂದ ಕೀಲು ನೋವಿನಿಂದ ಪರಿಹಾರ ಸಿಗುತ್ತದೆ. ಪ್ರತಿದಿನ ಒಂದು ಸಣ್ಣ ತುಂಡು ಬೆಲ್ಲವನ್ನು ಶುಂಠಿಯೊಂದಿಗೆ (ginger) ಬೆರೆಸಿ ಸೇವಿಸಿ. ಇದು ಕೀಲುಗಳನ್ನು ಬಲಪಡಿಸುತ್ತದೆ ಮತ್ತು ನೋವು ದೂರವಾಗುತ್ತದೆ.


ಇದನ್ನೂ ಓದಿ: Periods : ಮಹಿಳೆಯರೇ ಗಮನಿಸಿ : ಮುಟ್ಟಿನ ಸಮಯದಲ್ಲಿ ಈ 5 ಆಹಾರಗಳನ್ನ ಸೇವಿಸಬೇಡಿ!


ಚರ್ಮ ಮತ್ತು ಕೂದಲಿಗೆ :
ಬಿಸಿ ಹಾಲು ಮತ್ತು ಬೆಲ್ಲವನ್ನು ಸೇವಿಸುವುದರಿಂದ ನಿಮ್ಮ ಚರ್ಮವು ಮೃದುವಾಗುತ್ತದೆ. ಯಾವುದೇ ಚರ್ಮ ಸಂಬಂಧಿ (skin care) ಸಮಸ್ಯೆ ಎದುರಾಗುವುದಿಲ್ಲ. ಅಲ್ಲದೆ ಕೂದಲ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ. 


ಪೀರಿಯೇಡಸ್ ನೋವಿಗೆ ಪರಿಹಾರ : 
ದೇಹದಲ್ಲಿ ಯಾವುದೇ ನೋವು ಕಾಣಿಸಿಕೊಂಡರೂ ಬಿಸಿ ಹಾಲನ್ನು ಕುಡಿಯಲು ಸೂಚಿಸಲಾಗುತ್ತದೆ. ಮುಟ್ಟಿನ ನೋವಿನ ಸಮಯದಲ್ಲಿ ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ, ಆ ನೋವಿಗೆ ಪರಿಹಾರ ನೀಡುತ್ತದೆ. ಮುಟ್ಟಿನ ಆರಂಭಕ್ಕೆ ಒಂದು ವಾರ ಮೊದಲು, ಪ್ರತಿದಿನ 1 ಚಮಚ ಬೆಲ್ಲವನ್ನು ಸೇವಿಸುತ್ತಾ ಬಂದರೆ ಮುಟ್ಟಿನ  ಸಂದರ್ಭದಲ್ಲಿ ಕಾಣಿಸಿಕೊಳ್ಳುವ ನೋವಿಗೆ ಪರಿಹಾರ ನೀಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ